ಕಳೆದವು – ಉಳಿದವು
ಮೂಲ – ಸುನಿತ ಸಿಂಗ್ (ಹಿಂದಿ)
ಕನ್ನಡಕ್ಕೆ – ನಾಗರಾಜ ಮಸೂತಿ
ಕೆಲವು ಕಳೆದು ಹೋದವು
ಇನ್ನೂ ಕೆಲವು ಕಳೆಯಲಾಯಿತು,
ಕೆಲವು ಹೊಳೆದವು
ಇನ್ನೂ ಕೆಲವನ್ನು ಹೊಳೆಯಿಸಲಾಯಿತು,
ಕೆಲವು ದಾರಿ ತಪ್ಪಿದವು
ಇನ್ನೂ ಕೆಲವುಗಳ ದಾರಿ ತಪ್ಪಿಸಲಾಯಿತು,
ಕೆಲವು ನನ್ನದಾಗಿಯೇ ಉಳಿದವು
ಇನ್ನೂ ಕೆಲವು ನನ್ನವರಿಂದಲೇ ಅಳಿದವು,
ಕೆಲವು ಪ್ರೇಮದಲ್ಲಿ ಮುಳಗಿದರೆ
ಉಳಿದವು ಪ್ರೀತಿಯಲ್ಲಿ ಹರಿದು ಹೋದವು,
ಕೆಲವರು ನನ್ನೊಂದಿಗೆ ಉಳಿದರು
ಕೆಲವರನ್ನು ಬಿಟ್ಟು ಹೋದರು, ಬೇಡದವರು
ಆದರೆ,
ನನಗೆ ಈ ಜೀವನ ಹೇಗೆ ಲಭಿಸಿತ್ತು,
ಹಾಗೆಯೇ ಸವೆಸಿದೆ.






0 Comments