
ಪ್ರೀತಿ ಇಲ್ಲದ ಮೇಲೆ ಹೂವು ಅರಳೀತು ಹೇಗೆ? ಎಂದು ಕೇಳಿದ್ದು ಕವಿ.
ಪ್ರೀತಿ ಇರುವ ಕಾರಣಕ್ಕೇ ಹೀಗೆ.. ಎಂದು ತೋರಿಸಿಕೊಟ್ಟವರು ಮುರುಳಿ ಮೋಹನ್ ಕಾಟಿ ಬಳಗದವರು.
ಪಾವನಾ ಎನ್ನುವ ಒಂದು ಕಾರಣಕ್ಕಾಗಿ ಅಷ್ಟು ಪ್ರೀತಿ ಧಾರೆಯೆರಯಬಹುದು ಎಂದು ತೋರಿಸಿಕೊಟ್ಟರು. ಕವಿತೆಯ ಸಾಲುಗಳ ಮಧ್ಯೆ ಪ್ರೀತಿಯ ಹೊಳೆಯೂ ಹರಿದು ಹೋಯಿತು. ‘ಸಂವಾದ’ದ ವಿದ್ಯಾರ್ಥಿಯಾಗಿ ಬಂದ ಪಾವನಾ ಎಂಬ ಹುಡುಗಿ ಕವಿತೆ ಬರೆದದ್ದೇ ಕಾರಣವಾಗಿ ಆಕೆಯ ಜೊತೆಗಾರರು ‘ಸಂವಾದ’ದ ಹಲವು ಬ್ಯಾಚ್ ನ ವಿಧ್ಯಾರ್ಥಿಗಳು, ಮಾಧ್ಯಮದಲ್ಲಿ ಈಗ ತಾನೇ ಕನಸುಗಣ್ಣು ಕೂರಿಸುತ್ತಿರುವವರು.. ಎಲ್ಲರೂ ಸೇರಿ ‘ಪ್ರೀತಿ ಅರ್ಥ ಪ್ರೀತಿಸುವುದೇ..’ ಎಂದು ಸಾಬೀತುಪಡಿಸಿಬಿಟ್ಟರು.
ಪಾವನಾ ಭೂಮಿಯ ‘ಅಲೆಮಾರಿ ಮೀರಾ’ ಕೃತಿ ಬಿಡುಗಡೆಯ ದೃಶ್ಯಗಳು ಇಲ್ಲಿವೆ. ರಜತ್ ಕ್ಯಾಮೆರಾ ಕಣ್ಣು ಕಂಡಂತೆ..

ಪ್ರೀತಿ ಇದ್ದ ಕಾರಣಕ್ಕೇನೆ..
ನಿಮಗೆ ಇವೂ ಇಷ್ಟವಾಗಬಹುದು…




ಇಲ್ಲಿ ಜನ ಒಟ್ಟಾದದ್ದು ನೋಡಿದರೆ ಕವಿತಾಪ್ರೀತಿ ಇನ್ನೂ ಬತ್ತಿಲ್ಲ ಅಂತ ಕಾಣುತ್ತೆ. ಜಿ ಎನ್ ಮೋಹನ್ ಇದ್ದಲ್ಲಿ ಜನ ಹೂವಿದ್ದಲ್ಲಿ ಜೇನ್ನೊಣಗಳು ಮುತ್ತಿಟ್ಟ ಹಾಗೆ ಯುವ ಕವಿಯತ್ರಿಗೆ ಶುಭಾಶಯ