ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರೀತಿ ಅಂದ್ರೆ….

ಪ್ರೀತಿ ಮತ್ತು ಧೈರ್ಯ

ರವಿ ವರ್ಮ

ಅದೊಂದು ಆಶ್ರಮ ..

ಆ ಆಶ್ರಮದಲ್ಲಿ 20 ಸನ್ಯಾಸಿಗಳು ಮತ್ತು ಒಬ್ಬ ಸನ್ಯಾಸಿನಿ ಇದ್ದರು..

ಸನ್ಯಾಸಿನಿಯ  ಹೆಸರು ಇಷೆನ್ ..

ಆಕೆ ಕೂದಲು ತಗೆಸಿಕೊಂಡು, ಕಾವಿ ದರಿಸಿದ್ದರೂ, ಬಹಳ ಸುಂದರವಾಗಿ ಕಾಣುತಿದ್ದಳು.

ಅಂದವಾಗಿ ,ಆಕರ್ಷಣೀಯವಾಗಿ ಇದ್ದಳು…

ಬಹಳಷ್ಟು ಮಂದಿ ಸನ್ಯಾಸಿಗಳು ಆಕೆಯನ್ನು ಪ್ರೀತಿಸುತ್ತಿದ್ದರು ..

ಆದರೆ, ಆ ವಿಷಯವನ್ನು ಆಕೆಗೆ ಹೇಳಲು ಯಾರಿಗೂ ಧೈರ್ಯವಿರಲಿಲ್ಲ ..

ಅವರಲ್ಲಿ ಒಬ್ಬ ಸನ್ಯಾಸಿ ದೈರ್ಯತಂದುಕೊಂಡು ಆಕೆಗೊಂದು ಪ್ರೇಮಪತ್ರ ಬರೆದ…

ಏಕಾಂತದಲ್ಲಿ ಬೆಟ್ಟಿಯಾಗಲು ಕೇಳಿಕೊಂಡ ..

ಆ ಪತ್ರಕ್ಕೆ ಆಕೆ ಪ್ರತಿಕ್ರಿಯಿಸಲಿಲ್ಲ ..

ಅದೊಂದು ದಿನ ಆಶ್ರಮದ ಗುರುಗಳು ಎಲ್ಲರನ್ನು ಕೂಡಿಸಿಕೊಂಡು ಬುದ್ಧನ ಬಗ್ಗೆ ಉಪನ್ಯಾಸ ನೀಡಿದರು…

ಗುರುಗಳ ಉಪನ್ಯಾಸ ಮುಗಿದಮೇಲೆ ‘ಇಷೆನ್’ ಎದ್ದು ನಿಂತಳು.

ಗುರುಗಳಿಗೂ, ಎಲ್ಲ ಶಿಷ್ಯರಿಗೂ ಆಶ್ಚರ್ಯ ಮತ್ತು ಕುತೂಹಲ ….

ಇಷೆನ್ ಎಲ್ಲರನ್ನು ಒಮ್ಮೆ ತದೇಕ ದೃಷ್ಟಿಯಿಂದ ನೋಡಿದಳು ..

ಆಕೆ ಏನು ಹೇಳಬಹುದೆಂದು ಎಲ್ಲರೂ ತೀವ್ರ ಉತ್ಸಾಹದಿಂದ ಎದುರು ನೋಡುತ್ತಿದ್ದರು…

ಆಕೆ ಮತ್ತೊಮ್ಮೆ ಎಲ್ಲರನ್ನು ದೃಷ್ಟಿಯಲ್ಲಿ ದೃಷ್ಟಿ ಇಟ್ಟು ನೋಡಿ ಆಕೆಗೆ ಪತ್ರ ಬರೆದ ಸನ್ಯಾಸಿಯ ದೃಷ್ಟಿ ನೋಡಿ ನಿಲ್ಲಿಸಿ …

‘ನೀವು ನನ್ನನ್ನು ಪ್ರೀತಿಸುತ್ತೇನೆ ಎಂದು ಹೇಳಿದ್ದಿರಿ, ನೀವು ಅಷ್ಟು ಗಾಢವಾಗಿ ನನ್ನನ್ನು ಪ್ರೀತಿಸುತ್ತಿದ್ದರೆ,

ನಿಮಗೆ ಧೈರ್ಯ ಮತ್ತು ಬದ್ದತೆ ಅಗತ್ಯ …

ನೀವು ನನ್ನನ್ನು ಹೃದಯಪೂರ್ವಕವಾಗಿ ಪ್ರಿತಿಸುತ್ತಿದ್ದಲ್ಲಿ ..

ಬನ್ನಿ .. ಎದ್ದುಬನ್ನಿ .. ಇಲ್ಲಿ ಎಲ್ಲರ ಮುಂದೆ ನನ್ನನ್ನು ಅಪ್ಪಿಕೋ ..ಆಲಿಂಗಿಸಿಕೊ …. ಎಂದಳು

ಜೆನ್ ಕಥೆಗಳು :

ಮೂಲ ತೆಲುಗು : ಸೌಭಾಗ್ಯ

‍ಲೇಖಕರು G

18 December, 2012

2 Comments

  1. shanthi k.a.

    nija hrudaya poorvaka preetiyalli baddate mattu dhairya irabeku….
    great…

  2. Mohan V Kollegal

    ನನಗೂ ಈ ಧೈರ್ಯ ಬೇಕಾಗಿದೆ… ಜೆನ್ ಕಥೆಗಳೆಂದರೆ ಜೇನ್ ಕಥೆಗಳು… ಹಂಚಿಕೊಂಡದ್ದಕ್ಕೆ, ಅನುವಾದಿಸಿದ್ದಕ್ಕೆ ವಂದನೆಗಳು.. 🙂

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading