ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರಿಯ ಬಾಗೇಶ್ರೀ,

ಪ್ರಿಯ ಬಾಗೇಶ್ರೀ, ನಿಮ್ಮ ಲೇಖನ ಚೆನ್ನಾಗಿದೆ. ನನಗೂ ಈ ಪುಸ್ತಕ ಓದಿದಾಗ ರಾಜೇಶ್ವರಿಯವರ ಪತಿಭಕ್ತಿಯ ಬಗ್ಗೆ ಅಚ್ಚರಿಯೆನಿಸಿತಾದರೂ ಮತ್ತೆ ಮತ್ತೆ ಅದನ್ನೆ ಕುರಿತು ಯೋಚಿಸುತ್ತ ಯೋಚಿಸುತ್ತ ಇದೊಂದು ದಾಂಪತ್ಯದ ಅಪರೂಪದ ಸ್ಯಾಂಪಲ್ ಅನಿಸಿತು. ಸತಿಗೆ ಶಿವ ಅರ್ಧದೇಹ ಕೊಟ್ಟನಂತೆ . ಇಲ್ಲಿ ನಿಜವಾಗಿ ಕೊಟ್ಟದ್ದು ರಾಜೇಶ್ವರಿ !ರಾಜೇಶ್ವರಿ ,ತೇಜಸ್ವಿಯನ್ನು ತನ್ನರ್ಧದಲ್ಲಿ ಕರಗಿಸಿಕೊಂಡು ಬಿಟ್ಟು ಅರ್ಧಪುರುಷೇಶ್ವರ ಆಗಿಬಿಟ್ಟಿದ್ದಾರೆ. ಅವರು ತನ್ನನ್ನು ಕೊಟ್ಟುಕೊಂಡು ತೇಜಸ್ವಿಯನ್ನು ಪಡೆದರು ಮತ್ತು ಭರಿಸಿದರು.ಪಡೆದು ಭರಿಸಿ ಅದರಲ್ಲೆ ಆನಂದಿಸಿದರು. ಬಹುಶಹ ತೇಜಸ್ವಿಗೆ ಈ ಭಾಗ್ಯವಿಲ್ಲ.”ನಿನ್ನಂಥ ತಂದೆ ಎನಗುಂಟು ನಿನಗಿಲ್ಲ , ನಾನು ಸನಾಥ ನೀನೇ ಅನಾಥ “… ತೇಜಸ್ವಿಯಂಥ ಗಂಡ ನನಗುಂಟು , ಹೇ ತೇಜಸ್ವಿ ನಿನಗಿಲ್ಲ – ಇಡೀ ಪುಸ್ತಕ ಈ ನೆಲೆಯಲ್ಲೆ ಮಾತನಾಡಿದೆಯೆಂದು ನನಗನಿಸಿತು. ಒಂದು ಸಿನಿಮಾದಲ್ಲಿ ಹುಡುಗಿಯೊಬ್ಬಳು ದೂರವಿರುವ ತನ್ನ ಪ್ರಿಯಕರನ ಕಡೆಯಿಂದ ದೂತ ಬಂದಾಗ ಅವನ ಕೈ ಮುಟ್ಟಿ ಈ ಕೈಯನ್ನು ಅವನು ಹಿಡಿದಿದ್ದ ಅಲ್ಲವೆ ಇದು ನನಗೆ ಜೇನಿನ ಸಮಾನ ಎನ್ನುತ್ತ ಹುಚ್ಚಿಯಂತೆ ದೂತನ ಮುಂಗೈಯನ್ನೆ ಪ್ರಿಯಕರನ ಮುಂಗೈಯೆಂದು ಭಾವಿಸಿ ಮುತ್ತುಮಳೆ ಸುರಿಸುತ್ತಾಳೆ. ಅದೊಂದು ಉನ್ಮಾದದ ಕ್ಷಣ. ಅದನ್ನು ನೋಡಿ ನಾನೂ ನನ್ನ ಗೆಳತಿ ಇದೆಂಥ ತಿಕ್ಕಲು ಎಂದು ನಗಾಡಿದ್ದೆವು. ರಾಜೇಶ್ವರಿಯವರ ಪುಸ್ತಕ ಓದಿದಾಗ ನನಗೆ ಇಲ್ಲ ಇದು ಹುಚ್ಚಲ್ಲ, ಇಂಥಹ ಕೊಡುಕೊಳೆ ಅಪರೂಪಕ್ಕೊಮ್ಮೆ ನಿಜಬದುಕಿನಲ್ಲಿ ಸಾಧ್ಯ ಅನಿಸಿತು. ಬಹುಶಹ ರಾಜೇಶ್ವರಿಯವರ ಮನಸ್ಸು ದೇಹಗಳೆರಡು ತೇಜಸ್ವಿಸ್ಪರ್ಷದಲ್ಲಿ ತೇಜಸ್ವಿಯೆ ಆಗಿಹೋಗಿರಬಹುದು. ಅಸಾಧ್ಯ ಪ್ರೀತಿಗೆ ಈ ಶಕ್ತಿಯಿದೆಯೇನೋ. – ಲಲಿತಾ ಸಿದ್ಧಬಸವಯ್ಯ]]>

‍ಲೇಖಕರು G

7 January, 2012

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading