ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ..

ಶ್ರೀ ರವಿಕುಮಾರ್ ಮತ್ತು ಚಂದ್ರಿಕಾ ಕೇವಲ ೨೦ ವರ್ಷಗಳ ಅವಧಿಯಲ್ಲಿ ಅಗಾಧವಾದ ಕನ್ನಡದ ಕೆಲಸವನ್ನು ಮಾಡಿದ್ದಾರೆ. ಉತ್ತಮ ಗುಣಮಟ್ಟದ ಕೃತಿಗಳನ್ನು ಆಕರ್ಶಕವಾಗಿ ಹೊರತರುತ್ತಿದ್ದಾರೆಯಷ್ಟೇ ಅಲ್ಲದೆ ಇಂಗ್ಲೀಷ್ ಪುಸ್ತಕಗಳ ಪ್ರಕಾಶನವನ್ನೂ ಪ್ರಾರಂಭಿಸಿದ್ದಾರೆ.
ಆರ್ಥಿಕವಾಗಿ ಶ್ರೀಮಂತರಲ್ಲದಿದ್ದರೂ ತಮ್ಮ ಪ್ರಕಟಣೆಗಳಿಂದ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಅವರಿಗೆ ಹಾರ್ದಿಕ ಅಭಿನಂದನೆಗಳು. ಇತೋಪ್ಯತಿಶಯವಾಗಿ ಅವರ ಕಾರ್ಯ ಮುಂದುವರೆಯಲಿ ಎಂದು ನಾನು ಹಾರೈಸುತ್ತೇನೆ.
ಅವರ ಪ್ರಕಟಣೆಯ ಮೊದಲ ಕೃತಿ “ಆಶಯ-ಆಕೃತಿ” ಎಂಬ ನನ್ನ ವಿಮರ್ಶನ ಕೃತಿಯಾಗಿತ್ತು ಎಂಬುದು ನನಗೆ ತುಂಬಾ ಅಭಿಮಾನದ ಸಂಗತಿ
-ಸಿ. ಎನ್. ರಾಮಚಂದ್ರನ್

ನಾವಿನ್ನೂ ಮಾಡಬೇಕಿರುವ ಕೆಲಸ ಅಗಾಧವಾಗಿದೆ..

ಪ್ರೀತಿಯ ರಾಮಚಂದ್ರನ್ ಅವರ ಅಭಿಪ್ರಾಯ ಓದಿದೆ. ಕನ್ನಡವನ್ನು ಕಟ್ಟಿದ ದೊಡ್ಡ ಪರಂಪರೆಯೇ ನಮ್ಮ ಬೆನ್ನಿಗಿದೆ. ನಾವಿನ್ನೂ ಮಾಡಬೇಕಿರುವ ಕೆಲಸ ಅಗಾಧವಾಗಿದೆ.
ಅಭಿನವವನ್ನು ಬೆಳೆಸಿದ ಕೀರ್ತಿ ಕನ್ನಡ ಓದುಗರು ಮತ್ತು ವಿದ್ವತ್ ವಯಲಕ್ಕೆ ಸೇರಬೇಕು. ಅದೆಷ್ಟು ಜನ ಲೇಖಕರು, ಓದುಗರು, ಅಭಿಮಾನಿಗಳು ನಮ್ಮ ಕೆಲಸದಲ್ಲಿ ಕೈ ಜೋಡಿಸಿದ್ದಾರೆ.. ಚಿ. ಶ್ರೀನಿವಾಸ ರಾಜು, ಎಚ್. ಎಸ್. ರಾಘವೇಂದ್ರರಾವ್, ಕೆ. ವಿ ನಾರಾಯಣ, ಪ್ರಭುಶಂಕರ್, ಅನಂತಮೂರ್ತಿ, ದೇವನೂರ ಮಹಾದೇವ, ವಿಜಯಮ್ಮ, ಕೆ. ಸತನಾರಾಯಣ, ಎಸ್. ಜಿ. ಸಿದ್ಧರಾಮಯ್ಯ, ಕೆ. ವಿ ಸುಬ್ಬಣ್ಣ, ಷ. ಶೆಟ್ಟರ್, ಶಿವಪ್ರಕಾಶ್, ನಾಗ ಐತಾಳ್, ಜಿ. ರಾಜಶೇಖರ, ಫಣಿರಾಜ್, ರವಿ ಬೆಳಗೆರೆ, ಜಿ. ಎನ್. ಮೋಹನ್, ವಿವೇಕ ರೈ ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ..
ತಿರುಮಲೇಶ್ ಅಭಿನವದ ಮೇಲಿಟ್ಟಿರುವ ವಿಶ್ವಾಸದಿಂದ ಅವರ ಬಹುಪಾಲು ಕೃತಿಗಳು ನಮ್ಮಲ್ಲಿ ಪ್ರಕಟವಾಗುತ್ತಿವೆ. ಒಬ್ಬ ಲೇಖಕರು ಪ್ರಕಾಶನದ ಮೇಲಿಟ್ಟಿರುವ ಅಭಿಮಾನ, ವಿಶ್ವಾಸ ದೊಡ್ಡದು. ಅವರ ಅರಬ್ಬಿ ಕವನ ಸಂಕಲನ ಅಚ್ಚಿನಲ್ಲಿದೆ. ಮುಂದಿನ ವಾರ ಹೊರಬರಲಿದೆ..
ಸದ್ದುಗದ್ದಲವಿಲ್ಲದೆ ತಮ್ಮ ಕನ್ನಡದ ಕೆಲಸವನ್ನು ಯಾರ ಹಂಗೂ ಇಲ್ಲದೆ ತಮ್ಮ ಪಾಡಿಗೆ ತಾವು ಮಾಡುತ್ತಿರುವ ತಿರುಮಲೇಶರಿಗೆ ಸಂದ ಪ್ರಶಸ್ತಿ ನಿಜವಾಗಿಯೂ ನಮ್ಮ ವ್ಯವಸ್ಥೆಯ ಬಗೆಗೆ, ಸಮಾಜದ ಬಗೆಗೆ , ಪ್ರಜಾಪ್ರಭುತ್ವದ ಬಗೆಗೆ ವಿಶ್ವಾಸವನ್ನು, ನಂಬಿಕೆಯನ್ನು ಹೆಚ್ಚಿಸಿದೆ.. ಅದು ಪ್ರಾಮಾಣಿಕ ಕೆಲಸಕ್ಕೆ ಸಂದ ಮತ್ತೊಂದು ಗೌರವ. ಎಂದಿನಂತೆ ಅವಧಿಗೂ ಧನ್ಯವಾದಗಳು
ರವಿ

ಪ್ರಶಸ್ತಿಯನ್ನು ಅಭಿನವ ಪ್ರಕಾಶನಕ್ಕೆ ಅರ್ಪಿಸಲು ಬಯಸುತ್ತೇನೆ..

ಒಂದು ಕಾಲದಲ್ಲಿ ನನಗೆ ಪ್ರಕಾಶಕರೇ ಸಿಗುತ್ತಿರಲಿಲ್ಲ. ನನ್ನ ಬರಹಗಳು ಬಹುಶಃ ಯಾರಿಗೂ ಅಗತ್ಯವಿಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದೆ. ಆಗ ನನ್ನ ಸಹಾಯಕ್ಕೆ ಬಂದವರು ರವಿಕುಮಾರ್.
ನಂತರ ನನ್ನ ಪುಸ್ತಕಗಳೆಲ್ಲವೂ ಅವರ ಅಭಿನವ ಪ್ರಕಾಶನದ ಮೂಲಕವೇ ಪ್ರಕಟವಾಗುತ್ತಿವೆ. ರವಿಕುಮಾರ್ ಕೇವಲ ಪ್ರಕಾಶಕರಲ್ಲ, ಸಾಹಿತ್ಯ ಪ್ರವರ್ತಕರು ಕೂಡ. ಇಲ್ಲದಿದ್ದರೆ “ಅಕ್ಷಯ ಕಾವ್ಯ’’ದಂಥ ಕೃತಿಗಳನ್ನು ಅವರು ಪ್ರಕಟಿಸುತ್ತಿರಲಿಲ್ಲ. ಅವರ ಋಣವನ್ನು ಎಂದೂ ತೀರಿಸುವುದು ನನ್ನಿಂದ ಅಸಾಧ್ಯ.
ಈ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸಾಂಕೇತಿಕವಾಗಿ ನಾನು ಈ ಮೂಲಕ ಅಭಿನವ ಪ್ರಕಾಶನಕ್ಕೆ ಅರ್ಪಿಸಲು ಬಯಸುತ್ತೇನೆ.
ಕೆ.ವಿ.ತಿರುಮಲೇಶ್


I happily and fully agree with the sentiments expressed by Prof CNR and Shri KVT.Yes publishers have their own problems but people like Ravi keep their concern for quality in centre of their scheme.
It is very touching that they kept publishing Thirumalesh works continuously.But for publisher friends like Ravi it is difficult for writers like KVT to sustain themselves when they are outside Karnataka.
Dedicating award to Abhinava is not just symbolic. It is both substantial and thoughtful.It is much more than a gesture. Regards to KVT SIr.


ಅಭಿನವ ಪ್ರಕಾಶನಕ್ಕೆ ತಿರುಮಲೇಶ್ ರವರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯ ಅರ್ಪಣೆ ನಮಗೆಲ್ಲ ಸಂತೋಷ ತರುವ ಸಂಗತಿ.ಎರಡು ಕಾರಣಕ್ಕೆ-ಒಂದು ಅಭಿನವ ಕನ್ನಡ ಸಾಹಿತ್ಯ ರಂಗದಲ್ಲಿ ಮಾಡಿರುವ ಸಾಧನೆಗೆ ಸಂದ ಅತ್ಯುತ್ತಮ ಪ್ರಶಸ್ತಿ ಇದು . ಹಾಗೆಯೆ ತಿರುಮಲೇಶರ ದೊಡ್ಡತನದ ಸಂಕೇತವೂ ಕೂಡ. ರಾಮಚಂದ್ರನ್ ರವರ ಮಾತುಗಳೂ ಕೂಡ. ಕನ್ನಡದ ಭೌದ್ಧಿಕ ಶ್ರೀಮಂತಿಕೆಯನ್ನು ಬೆಳೆಸಿದ,ಬೆಳೆಸುವ ಅನೇಕ ಕೃತಿಗಳನ್ನು ಅವರು ಪ್ರಕಟಿಸಿದ್ದಾರೆ. ಸಾಹಿತ್ಯ ಮಾತ್ರವಲ್ಲದೆ ಇತಿಹಾಸ, ತತ್ವಶಾಸ್ತ್ರ, ವೈಚಾರಿಕತೆ ಸಮಕಾಲೀನ ರಾಜಕೀಯದ ಬಗ್ಗೆ ಅಮೂಲ್ಯ ಕೃತಿಗಳನ್ನು ಹೊರತಂದಿದ್ದಾರೆ.
ಜಿ ಎನ್ ನಾಗರಾಜ್





I happily and fully agree with the sentiments expressed by Prof CNR and Shri KVT.Yes publishers have their own problems but people like Ravi keep their concern for quality in centre of their scheme.It is very touching that they kept publishing Thirumalesh works continuously.But for publisher friends like Ravi it is difficult for writers like KVT to sustain themselves when they are outside Karnataka.
Dedicating award to Abhinava is not just symbolic. It is both substantial and thoughtful.It is much more than a gesture. Regards to KVT SIr.
ಅಭಿನವ ಪ್ರಕಾಶನಕ್ಕೆ ತಿರುಮಲೇಶ್ ರವರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯ ಅರ್ಪಣೆ ನಮಗೆಲ್ಲ ಸಂತೋಷ ತರುವ ಸಂಗತಿ.ಎರಡು ಕಾರಣಕ್ಕೆ-ಒಂದು ಅಭಿನವ ಕನ್ನಡ ಸಾಹಿತ್ಯ ರಂಗದಲ್ಲಿ ಮಾಡಿರುವ ಸಾಧನೆಗೆ ಸಂದ ಅತ್ಯುತ್ತಮ ಪ್ರಶಸ್ತಿ ಇದು . ಹಾಗೆಯೆ ತಿರುಮಲೇಶರ ದೊಡ್ಡತನದ ಸಂಕೇತವೂ ಕೂಡ. ರಾಮಚಂದ್ರನ್ ರವರ ಮಾತುಗಳೂ ಕೂಡ. ಕನ್ನಡದ ಭೌದ್ಧಿಕ ಶ್ರೀಮಂತಿಕೆಯನ್ನು ಬೆಳೆಸಿದ,ಬೆಳೆಸುವ ಅನೇಕ ಕೃತಿಗಳನ್ನು ಅವರು ಪ್ರಕಟಿಸಿದ್ದಾರೆ. ಸಾಹಿತ್ಯ ಮಾತ್ರವಲ್ಲದೆ ಇತಿಹಾಸ, ತತ್ವಶಾಸ್ತ್ರ, ವೈಚಾರಿಕತೆ ಸಮಕಾಲೀನ ರಾಜಕೀಯದ ಬಗ್ಗೆ ಅಮೂಲ್ಯ ಕೃತಿಗಳನ್ನು ಹೊರತಂದಿದ್ದಾರೆ.
ಪ್ರಶಸ್ತಿ ವಾಪಸು ಮಾಡಿದ ಮಿತ್ರರೆಲ್ಲ ತಮ್ಮ ಭಾವನೆಯನ್ನು ಪ್ರಕಟಿಸಿದ್ದಾಯಿತು. ಅವರ ಈ ಕ್ರಿಯೆಗೊಂದು ಪರಿಣಾಮವೂ ಬಂದಿದೆ ಎಂದಿಡಿದ್ದೇನೆ. ಅವರು ಈಗಲಾದರೂ ಪ್ರಶಸ್ತಿಗಳನ್ನು ಹಿಂದಕ್ಕೆ ಪಡೆಯಲು ಸಿದ್ಧರಾದರೆ ಅವರ ಓದುಗರಿಗೆಲ್ಲ ಸಂತೋಷವಾಗುತ್ತದೆ ಎಂದುಕೊಂಡಿದ್ದೇನೆ. ಇದರಲ್ಲಿ ಈ ಲೇಖಕರ ದೊಡ್ಡತನವಿರುತ್ತದೆ ಹೊರತು ಅವಮಾನವೇನೂ ಇರುವುದಿಲ್ಫ.
ಸಾಹಿತ್ಯ ಅಕಾಡೆಮಿ ಈ ಕುರಿತು ಮೊದಲ ಹೆಜ್ಜೆ ಇರಿಸಬೇಕಾಗಿದೆ.
ಕೆ.ವಿ.ತಿರುಮಲೇಶ್
ಕಳೆದ ಕೆಲವು ದಶಕಗಳಲ್ಲಿ ಕರ್ನಾಟಕದ ಪ್ರಮುಖ ಪ್ರಕಾಶನ ಸಂಸ್ಥೆಗಳಲ್ಲಿ ಒಂದಾಗಿ ಮೂಡಿಬಂದಿರುವ ‘ಅಭಿನವ’ದ ಸಾಧನೆ ಅನನ್ಯವಾದುದು. ಅದರಲ್ಲಿಯೂ ಕವಿತೆ, ಸಂಶೋಧನೆ, ವಿಮರ್ಶೆ, ಅನುವಾದಗಳಂತಹ ‘ಯಾರಿಗೂ ಬೇಡದ’ ಪ್ರಕಾರಗಳನ್ನು ಅವರು ಪೊರೆದಿದ್ದಾರೆ. ಪುಸ್ತಕವು ಪ್ರಕಾಶನವು ‘ದಂಧೆ’ಯಾಗದ ಹಾಗ ಎಚ್ಚರ ವಹಿಸಿದ್ದಾರೆ. ಹಿರಿಯರಾದ ತಿರುಮಲೇಶ್ ಅವರು ಎಲ್ಲ ಕನ್ನಡ ಓದುಗರಿಗೆ ದನಿಯಾಗಿದ್ದಾರೆ. ರವಿಕುಮಾರ್, ಚಂದ್ರಿಕಾ ಮತ್ತು ಕೃಷ್ಣ ಚೆಂಗಡಿಯವರ ಬಿಡುವರಿಯದ ದುಡಿಮೆಗೆ ಶರಣು.
ಎಚ್.ಎಸ್. ರಾಘವೇಂದ್ರ ರಾವ್
nijakku shlaaghaneeya
pustaka prakashana kke gourava tandukotta kv thirumalesh avarige abhinandanegalhu..
snehitarada p.chandrika mattu ravikumar ge preetiya wishes