ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರತಿಭಾ ನಂದಕುಮಾರ್ ಹೊಸ ಕವನ ಸಂಕಲನ ಫೋಟೋ ಆಲ್ಬಂ..

ಬಿ ಪಿ ಎಫ್ ನಲ್ಲಿ ನನ್ನ ಎರಡು ಪುಸ್ತಕಗಳ ಬಿಡುಗಡೆ ಭರ್ಜರಿಯಾಗಿ ಆಯಿತು. ಪ್ರೇಕ್ಷಕರ ಉತ್ಸಾಹ ಮತ್ತು ಮಾರಾಟ ಸಿಕ್ಕಾಪಟ್ಟೆ ಚೆನ್ನಾಗಿತ್ತು. ವಿವೇಕ್ ಶಾನಭಾಗ, ಜೋಗಿ, ಕಾರ್ತಿಕ್ ವೆಂಕಟೇಶ್ ಇದ್ದಿದ್ದು ನನಗೆ ಹಾರಲು ಇನ್ನಷ್ಟು ರೆಕ್ಕೆ ಕೊಟ್ಟಿತ್ತು. ರಾಜೇಂದ್ರನ ಚಿಕ್ಕದಾದ ಚೊಕ್ಕದಾದ ಮಾತು ಸಖತ್ತಾಗಿತ್ತು.

ಬೆಂಗಳೂರಿನ ನನ್ನ ಯುವಕವಿ ಮಿತ್ರರು ಬಂದೆ ಬರುತ್ತಾರೆ ಅಂದುಕೊಂಡಿದ್ದೆ. ಒಬ್ಬರೂ ಬರಲಿಲ್ಲ. ಬಂಡೆ, ಪ್ರವರ, ಪ್ರಸಾದ್, ಶರತ ..ನಿಮಗೆಲ್ಲ ಐತೆ ಮುಂದೆ ಮಾರಿಹಬ್ಬ. ಸಂಧ್ಯಾ, ಭಾರತಿ ಬರಲ್ಲ ಗೊತ್ತಿತ್ತು. ಟೀನಾ ಬಂದೇ ಬರ್ತೀನಿ ಅಂದು ಕೈಕೊಟ್ಟಳು. ಒಬ್ಬರು ಕಲಾವಿದರು ಪುಸ್ತಕವಾಗಿ ಮುಖವಾಡದಲ್ಲಿ ಬಂದು ಅವರನ್ನೇ ಸ್ಟೇಜ್ ಗೆ ಕರೆದು ಲಾಂಚ್ ಮಾಡಿದ್ದು ಹೊಸದಾಗಿತ್ತು ಅಂತ ಎಲ್ಲಾರೂ ಇಷ್ಟಪಟ್ಟರು. “ಪುಸ್ತಕ” ಆವರಣದಲ್ಲೆಲ್ಲ ಓಡಾಡಿಕೊಂಡು ಎಲ್ಲರೂ “ಅದರ” ಜೊತೆ ಸೆಲ್ಫಿ ತಗೋತಿದ್ದರು. ಮಕ್ಕಳಿಗಂತೂ ಅಚ್ಚರಿ!

‍ಲೇಖಕರು Admin

28 August, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading