ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರತಿಭಾ ನಂದಕುಮಾರ್ ಗೆ ಅನುಪಮಾ ಪ್ರಶಸ್ತಿ

ಅನುದಿನದ ಅಂತರಗಂಗೆ ಪ್ರತಿಭಾ ನಂದಕುಮಾರ್ ಅವರಿಗೆ ಅನುಪಮಾ ನಿರಂಜನ ಪ್ರಶಸ್ತಿ ಲಭಿಸಿದೆ. ಕರ್ನಾಟಕ ಲೇಖಕಿಯರ ಸಂಘ ನೀಡುವ ಈ ಪ್ರಶಸ್ತಿಯನ್ನು ಇದೇ ತಿಂಗಳ ೨ ರಂದು ಖ್ಯಾತ ಲೇಖಕಿ ಶಶಿ ದೇಶಪಾಂಡೆ ಪ್ರದಾನ ಮಾಡಲಿದ್ದಾರೆ.
ಪ್ರತಿಭಾಗೆ ‘ಅವಧಿ’ಯ ಅಭಿನಂದನೆಗಳು

ಪ್ರತಿಭಾ ನಂದಕುಮಾರ್ ನಡೆದು ಬಂದ ಹಾದಿ

ಪ್ರತಿಭಾ ನಂದಕುಮಾರ್ ಸ್ತ್ರೀಸಂವೇದನೆಯ ಸೃಜನಶೀಲ ಲೇಖಕಿ. ಕನ್ನಡ ಎಂಎ, ಎಂ.ಫಿಲ್ ಪದವಿ ಪಡೆದ ಇವರು ಕವಯತ್ರಿಯಾಗಿ, ಪತ್ರಕರ್ತೆಯಾಗಿ, ಭಾಷಾಂತರ ತಜ್ಞೆಯಾಗಿ, ಕಿರುಚಿತ್ರ ನಿರ್ದೇಶಕಿಯಾಗಿ ಕನ್ನಡ ಜನತೆಗೆ ಪರಿಚಿತರು. ಪ್ರತಿಭಾ ಕವಯತ್ರಿಯಾಗಿ ತನ್ನ ಸಾಹಿತ್ಯ ಪಯಣ ಆರಂಭಿಸಿದರು. 2012 ರಲ್ಲಿ ಪ್ರಕಟವಾದ ಕಾಫಿಹೌಸ್ ಕನ್ನಡದಲ್ಲಿ ಹೊಸ ಪ್ರಯೋಗಶೀಲತೆ ಮೆರೆದ ಕಾವ್ಯ. ಅಲ್ಲದೇ ಮುನ್ನುಡಿ ಬೆನ್ನುಡಿಗಳ ನಡುವೆ, ಮುದುಕಿಯರಿಗಿದು ಕಾಲವಲ್ಲ ಕವನ ಸಂಕಲನಗಳು ಅನನ್ಯತೆ, ವಿಶಿಷ್ಟತೆ ಪಡೆದ ಕೃತಿಗಳಾಗಿವೆ. ನಾವು ಹುಡುಗಿಯರೇ ಹೀಗೆ, ಈತನಕ, ರಸ್ತೆಯಂಚಿನ ಗಾಡಿ, ಕವಡೆಯಾಟ, ಆಹಾ ಪುರುಷಕಾರಂ, ಅವರು ಪುರಾವೆಗಳನ್ನು ಕೇಳುತ್ತಾರೆ, ಸೇರಿದಂತೆ ಒಟ್ಟು ಒಂಭತ್ತು ಕವನಸಂಕಲನಗಳು ಪ್ರಕಟವಾಗಿವೆ.

ಇಂಗ್ಲಿಷಿನಲ್ಲಿ ಇವರು ಬರೆದ ಕವಿತೆಗಳು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಅನುವಾದಗೊಂಡಿವೆ. ಅಮೆರಿಕಾದ ಎರಡು ವಿಶ್ವವಿದ್ಯಾಲಯಗಳಲ್ಲಿ ತೃತೀಯ ಜಗತ್ತಿನ ರಾಷ್ಟ್ರಗಳ ಸ್ತ್ರೀವಾದಿ ಸಾಹಿತ್ಯ ಅಧ್ಯಯನದ ಪಠ್ಯಗಳಲ್ಲಿ ಇವರ ಬರಹ ಸ್ಥಾನ ಪಡೆದಿದೆ. ಇವರು ಬರೆದ ಯಾನ, ಆಕ್ರಮಣಗಳು ಕಥಾಸಂಕಲನಗಳಾದರೆ, ಮಿರ್ಚ್ ಮಸಾಲ ಲೇಖನ ಸಂಕಲನವಾಗಿದೆ. ನಿಮ್ಮಿ, ಪ್ರತಿಧ್ವನಿ, ಅಂಕಣ ಬರಹಗಳ ಮೂಲಕ ಚಿರಪರಿಚಿರಾದ ಇವರು ಶಶಿದೇಶಪಾಂಡೆಯವರ ಇಂಗ್ಲಿಷ್ ಕಥೆಗಳನ್ನು ಮತ್ತು ಪದ್ಮಾ ಸಚ್ ದೇವ್ ರ ಡೋಂಗ್ರಿ ಕವನಗಳನ್ನು ರಚಿಸಿದ್ದಾರೆ. ‘ಸೆಲೆಕ್ಟೆಡ್ ಪೊಯಮ್ಸ್’ ಎಂಬ ಇಂಗ್ಲೀಷ್ ಕವನಸಂಕಲನವನ್ನು ಪ್ರಕಟಿಸಿದ್ದಾರೆ.

ಕಠ್ಮಂಡು ಸಾರ್ಕ್ ಸಾಹಿತ್ಯ ಸಮ್ಮೇಳನದಲ್ಲಿ ಭಾರತವನ್ನು ಪ್ರತಿನಿಧಿಸಿದ್ದಲ್ಲದೆ ಫಿನ್ಲಾಂಡ್ ಅಂತರಾಷ್ಟ್ರೀಯ ಸಾಹಿತ್ಯ ಸಮ್ಮೇಳನ ಹಾಗೂ ಗೋತೆನ್ ಬರ್ಗ್ ಅಂತರಾಷ್ಟ್ರೀಯ ಪುಸ್ತಕ ಮೇಳದಲ್ಲಿ ಭಾಗವಹಿಸಿರುತ್ತಾರೆ. ಚೀನಾ, ಸ್ವೀಡನ್ ಗೂ ಭಾರತೀಯ ತಂಡಗಳೊಂದಿಗೆ ಭೇಟಿ ನೀಡಿರುತ್ತಾರೆ. ಇದ್ದದ್ದು ಇದ್ದಹಾಗೆ ಹೇಳುವ ಮುಚ್ಚುಮರೆ ಇಲ್ಲದ ಬರಹ ಇವರದು. ‘ಅನುದಿನದ ಅಂತರಗಂಗೆ’ ಇವರ ಆತ್ಮಕಥನ. ನೀರಿನಂತೆ ಸದಾ ಚೈತನ್ಯಶೀಲ, ಚಿಮ್ಮು(ವ) ಪ್ರತಿಭೆಯೇ ಇವರ ಬದುಕು ಹಾಗು ಬರಹದ ಮೂಲ ದ್ರವ್ಯ ಎಂದರೆ ತಪ್ಪಾಗಲಾರದು.

ಸದಾ ಕ್ರಿಯಾಶೀಲರಾಗಿರುವ ಈ ಕವಿಭಾವ; ಜೋವಂತಿಕೆಯೊಂದಿಗೆ ಲಿಂಗ, ಭಾಷೆ, ಜಾತಿಗಳ ಎಲ್ಲೆಗಳನ್ನು ಮೀರಿದ್ದು, ಇಂಥ ಪ್ರತಿಭೆಯನ್ನು ಅರಸಿ ಬಂದ ಪ್ರಶಸ್ತಿಗಳು ಅನೇಕ. ಶಿವರಾಮಕಾರಂತ ಪ್ರಶಸ್ತಿ, ಪುತಿನ ಕಾವ್ಯ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪ ಕಾವ್ಯ ಪ್ರಶಸ್ತಿ ಮತ್ತು ಸಾರ್ಕ್ ಕವಿ ಸಮ್ಮಾನ. ಈಗ ಕರ್ನಾಟಕ ಲೇಖಕಿಯರ ಸಂಘದ ಅನುಪಮಾ ಪ್ರಶಸ್ತಿಗೆ ಪ್ರತಿಭಾ ಆಯ್ಕೆಯಾಗಿದ್ದಾರೆ.

‍ಲೇಖಕರು avadhi

23 May, 2013

36 Comments

  1. prathibha nandakumar

    thank you

  2. arun joladkudligi

    ಮೇಡಂ ಅಭಿನಂದನೆ.ಅನುದಿನದ ಅಂತರಗಂಗೆಯ ಪುಟಗಳು ನೆನಪಾಗುತ್ತಿದೆ.

  3. Kavya Kadame

    Congratulations Mam..:)

  4. malathi S

    Congratulations!!!

  5. prathibha nandakumar

    arun jolakudligi, kavya kadame, malathi uday Itagi tumbaa thanks 🙂

  6. shobha venkatesh

    congrats pratiba avre namma vijayanagara bimba ranga shikhna kendrada yellara paravagi.

  7. gururaja kathriguppe

    congrats madam, I was thrilled when I read your ‘autobiography’ and started looking at women with much more respect than before. I persuaded my friends, colleagues, to read your book and succeeded in making them to read it, in five cases. Now I am really happy that I made my friends to read kannada’s most prominent writer(not women writer) and ANUPAMA AWARD winner.

    • prathibha nandakumar

      thank you shobha venkatesh, thank you gururaja katriguppe, thank you hai prasad, thank you lalitha siddabasavaiah 🙂

  8. Hari Prasad

    Congratulation..:-)

    • prathibha nandakumar

      thank you hai prasad,

  9. lalitha siddabasavaiah

    ನನ್ನ ಪ್ರೀತಿಯ ಕವಿ ಪ್ರತಿಭಾಗೆ ಸಾವಿರ ಅಭಿನಂದನೆ. ಪ್ರತಿಭಾರ ಪ್ರತಿಭೆಗೆ ಇದೊಂದು ಸಲ್ಲಲೆ ಬೇಕಾದ ಸುಮ್ಮಾನ. ನಮ್ಮ ಪ್ರತಿಭಾ ಎಲ್ಲ ಕನ್ನಡ ಲೇಖಕಿಯರ ಹೆಮ್ಮೆ. ಅಪ್ಪಟ ಮಗುಮನದ ಎಂಥಹ ಸಂದರ್ಭದಲ್ಲೂ ಖಿಲ್ಲನೆ ನಗಬಲ್ಲ ಪ್ರತಿಭಾ ನೂರ್ಕಾಲ ತನ್ನ ಪದ್ಯಗಳಿಂದ ನಮ್ಮನ್ನಾಳಲಿ. ನನಗೆ ಬಹಳ ಖುಷಿ ಕೊಟ್ಟ ಸಮಾಚಾರ ಇದು.

    • prathibha nandakumar

      thank you lalitha siddabasavaiah 🙂

  10. anupama prasad

    ಅಂತರಗಂಗೆಗೆಯ ಒರತೆ ಸದಾ ಚಿಮ್ಮುತ್ತಿರಲಿ. ಅಭಿನಂದನೆಗಳು ಪ್ರತಿಭಾ ಚೇಚಿ.
    ಅನುಪಮಾ ಪ್ರಸಾದ್.

    • prathibha nandakumar

      thank you anupama prasad 🙂

    • prathibha nandakumar

      🙂

  11. bharat kumar polipu

    mumbai kannadigara paravaagi haardika abhinandanegalu …bharat kumar polipu

    • prathibha nandakumar

      thank you bharat kumar polali 🙂

  12. ಉದಯಕುಮಾರ್ ಹಬ್ಬು

    ಪ್ರತಿಭಾ ನಂದಕುಮಾರ್ ಅವರೇ ನಿಮ್ಮ ಕಾವ್ಯವನ್ನು ನಿಮ್ಮ ಕಂಠದಿಂದಲೇ ಕೇಳಿ ಸವಿದ ನನಗೆ ನಿಮಗೆ ಸಿಕ್ಕ ಈ ಪ್ರಶಸ್ತಿಯ ಕಿರೀಟಧಾರಣೆಯ ಸಂಭ್ರಮದಲ್ಲಿ ತೇಲಿ ಹೋದೆ.ಅಭಿನಂದನೆಗಳು ನಿಮಗೆ. ಉದಯಕುಮಾರ ಹಬ್ಬು, ಕಿನ್ನಿಗೋಳಿ

    • prathibha nandakumar

      thank you udaykumar habbu 🙂

  13. lakshmishankarjoshi

    anudinada pustakada padagalu haduhoguttive.congrats.

  14. Ahalya Ballal

    Just awesome, the way you use words as raw material in your creations!

    • prathibha nandakumar

      thank you for saying this ahalya ballal 🙂

  15. prathibha nandakumar

    thank you lakshmishankar joshi 🙂

  16. narayan raichur

    nimage bere prashastigalu bandirabahudu/mundeyoo barabahudu aadare ANUPAMA prashasti bandideyalla
    idu nijakkoo ANUPAMA !!-abhinandanegalu – bareyiri-bareyuttiri !!
    Wishwasada
    Narayan Raichur

    • prathibha nandakumar

      you are right narayan raichur! thank you 🙂

  17. mmshaik

    mam..congrats..!!!

    • prathibha nandakumar

      thank you mmshaik 🙂

  18. Rj

    ಅಭಿನಂದನೆಗಳು ಮ್ಯಾಡಂ.
    Happy to hear this.
    -Rj

    • prathibha nandakumar

      Thank you RJ 🙂

  19. Sandhya, Secunderabad

    Congrats Madam. ‘Naavu hudugiyaree heege’ dinagalindaloo naanu nimma dodda abhimaani.

    • prathibha nandakumar

      thank you sadhya… 🙂

      • prathibha nandakumar

        thank you very much sandhya 🙂

  20. t.n. vasudevamurthy

    hearty congratulations, madam..

    • prathibha nandakumar

      thank you vasudevamurthy 🙂

  21. ANUPAMA

    congrats mam, anthara gange sada kalaku chirasmraniyavagali.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading