ಪ್ರಕಾಶ್ ಅಬ್ಬೂರು
—–
ನನ್ನವ್ವ… ನನ್ನಪ್ಪನ ಮನದೊಡತಿ ಆಗಿದ್ದಳಾ !
ಹೋಗಲಿ, ಮನೆಯೊಡತಿ?
ಸೊಸೆಯಂದಿರು
ಬರುವವರೆಗೆ ಆಕೆಗೆ
ಅತ್ತೆ ಹೇಳಿದ್ದೇ ಮಾತು !
ಒಂದೂವರೆ ವರ್ಷಕ್ಕೊಂದು ಮಗು, ಕರ್ತವ್ಯವಾಗಿತ್ತು !
ಗಂಡನಿಂದ ವಿರಾಮ !
ಸರಿ, ಸೊಸೆಯಂದಿರು ಬಂದರು ,
ಈಗ ಪೂರ್ಣ ವಿರಾಮ.
ನಿಮಗೇನು ಕಡಿಮೆ, ಒಂದೆಡೆ ಕುಳಿತಿದ್ದರಾಗದೆ!
ತಾನೊಂದು ದಿನ ಅತ್ತೆಯಾಗುತ್ತೇನೆ , ಆಳಬಹುದು ಐವರು ಸೊಸೆಯಂದಿರನ್ನು .

ಇದ್ದೀತು ಅವಳ ಕನಸು !
ಸೊಸೆಯಾಗಿ ಆಳಿಸಿಕೊಂಡವಳಿಗೆ ಅತ್ತೆಯಾಗಿ ಆಳುವ ಸೌಭಾಗ್ಯ ಸಿಗಲಿಲ್ಲ !
ಆದರೇನಂತೆ ಸಿಕ್ಕಿತ್ತಲ್ಲ, ವಿರಾಮದ ಭಾಗ್ಯ .
ಮಾತಿಗೆ ಮೊದಲು ಕಾಳಜಿಯ ಮಾತು.
ನಿಮಗ್ಯಾಕಿವೆಲ್ಲಾ , ಏನು ಕಡಿಮೆಯಾಗಿದೆ ನಿಮಗೆ,
ಹೌದು!
ಏನು ಕಡಿಮೆಯಾಗಿತ್ತು
ನಿನಗೆ,
ಕೇಳಲು ನಾವಿದ್ದೇವೆ.
ಹೇಳಲು ನೀನಿಲ್ಲ ,
ಒಂದು ‘ತಪ್ಪಡ್’ ,
ನಡೆದಿದೆ ಚರ್ಚೆ ಎಷ್ಟೆಲ್ಲಾ ,
ನಿನಗೆ ಬಿದ್ದ ಏಟುಗಳ
ಲೆಕ್ಕವಿಟ್ಟವರಾರು.
ನಿನಗೇನಾಗಿತ್ತು ಕಡಿಮೆ!! ನಮಗಾರಿಗೂ
ಗೊತ್ತಾಗಲೇ ಇಲ್ಲ
ಹೌದು,
ನಿನಗೇನಾಗಿತ್ತು ಕಡಿಮೆ !!
0 Comments