
ಜನ ಫೋನ್ ಬಂದ ಮೇಲೆ ಐಲ್-ಪೈಲ್ ಆಗಿದ್ದಾರೆ ಅಂತ ಹೇಳ್ತಾರೆ. ಮೊಬೈಲ್ ಮೇನಿಯಾ ಜಾಸ್ತಿ ಆಗಿದೆಯಂತೆ. ಅದೇನೋ ಗೊತ್ತಿಲ್ಲ, ಪತ್ರಕರ್ತರಿಗೆ ಅದು ದೇಹದ ಒಂದು ಭಾಗ ಎಂದರೆ ತಪ್ಪಾಗಲಾರದು. ಕೆಲವೊಮ್ಮೆ ಬೇಡದ ಕಾಲುಗಳ ಹಾವಳಿ ಇರತ್ತೆ, `ಕಾಲು’ ನೋವು ಅಂತ ಕಾಲು ಕತ್ತರಿಸುತ್ತೆವೆಯೇ? ಹಾಗೆಯೇ ಇದು ಕೂಡ.
ಮೊಬೈಲಿನಲ್ಲಿ ಜನಪ್ರಿಯ applications ನಲ್ಲಿ SMS ಕೂಡ ಒಂದು. ಕಾಲೇಜು ಮಕ್ಕಳು ಯಾವುದೋ ಜೋಕು-ಪಾಕು SMS ಮಾಡಿದ್ರೆ, ನಮಗೆ SMS ದಿನಚರಿ ಆಗಿ ಹೋಗಿದೆ. ಈ ಹಿಂದೆ Public Relation (PR) ನಲ್ಲಿ ಕೆಲಸ ಮಾಡುವವರು, ನಮ್ಮ ಕಚೇರಿಗಳಿಗೆ ಬಂದು press release ಕೊಡ್ತಾ ಇದ್ರೂ. ಕಾಲಕ್ರಮೇಣ, ಅದು ಈ-ಮೇಲ್ ನಲ್ಲೂ ಕಳಿಸಲು ಶುರು ಮಾಡಿದರು. ಈಗ ಅದು, SMS ಹಾದಿ ಹಿಡಿದಿದೆ. ನನ್ನ ಫೋನ್ ನಲ್ಲಿ ದಿನಕ್ಕೆ ಸುಮಾರು ಐದರಿಂದ ಹತ್ತು ಅಂತಹ SMS ಬರ್ತಾ ಇರುತ್ತೆ. ಅವೆಲ್ಲವೂ media invitation ಆಗಿರತ್ತೆ. ಕೆಲವೊಮ್ಮೆ, ನನ್ನ ಸ್ನೇಹಿತರ SMS ಬಂದರೂ, ನಂಗೆ ಯಾವುದೋ PR ಕಳಿಸಿದ್ದಾರೆ ಅಂತ ಬೈಕೊತಿನಿ (ಕ್ಷಮಿಸಿ). ಇತ್ತೀಚಿಗೆ airtel ಗ್ರಾಹಕರಿಗೆ ಯಾವುದೋ ತಾಂತ್ರಿಕ ದೋಷದಿಂದಾಗಿ, ಗ್ರಾಹಕರಿಗೆ ಒಂದೇ SMS ಇಪ್ಪತ್ತು ಬಾರಿಯಾದರೂ ಬರ್ತಿತ್ತು. ನನ್ನ ಸ್ನೇಹಿತೆ ಯೊಬ್ಬಳಿಗೆ ಇಂತದೆ SMS ಬಂದು ಸಕತ್ ಕಿರಿಕಿರಿ ಆಗಿತ್ತು, ಅದು ಯಾವುದೋ PR ಕಳಿಸಿದ್ದಾಗಿತ್ತು !
ಪೂರ್ಣ ಓದಿಗೆ ಭೇಟಿ ಕೊಡಿ- ಮೀಡಿಯಾ ಮೈಂಡ್
ಪೇಪರ್ ಆಫೀಸ್ ನಲ್ಲಿ SMS ರಗಳೆ
ನಿಮಗೆ ಇವೂ ಇಷ್ಟವಾಗಬಹುದು…





0 Comments