ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಪೀಟ್ ಸೀಗರ್ ಜೊತೆಯಲ್ಲೇ ನೆನಪಾದವನು….’ – ಸೂರಿ ಬರೀತಾರೆ

ಸೂರಿ

ಮೊನ್ನೆ ತೀರಿಕೊಂಡ Pete Seegerನಷ್ಟೇ ಮತ್ತೊಬ್ಬ ಅಪ್ರತಿಮ ಗಾಯಕ Harry Belafonte


ಈತ ಕೇವಲ ಗಾಯಕನಷ್ಟೇ ಅಲ್ಲ, ಚಿಂತಕ, ಕವಿ, ನಟ ಮತ್ತು social worker. ಆಫ್ರಿಕಾನ್-ಅಮೇರಿಕನ್ ಗಾಯನವನ್ನು ಜದಗ್ವಿಖ್ಯಾತಗೊಳಿಸಿದವ. 1956ರಿಂದ ಹಾಡುತ್ತಿದ್ದಾನೆ. ಈತನ ಒಂದು ಜನಪ್ರಿಯ ಹಾಡು DAY-O, THE BOAT SONG. ಕಾರ್ನೆಗಿ ಹಾಲಿನಲ್ಲಿ ಸಾವಿರಾರು ಜನ ಜೊತೆಯಲ್ಲಿ ಹಾಡಿ ಕುಣಿದು ಕುಪ್ಪಳಿಸುವಂತೆ ಮಾಡಿದ ಗಾಯಕ ಈತ. ಈತನ ಒಂದು ಹಾಡು A HOLE IN THE BUCKET. ಇಲ್ಲಿ ಆ ಹಾಡನ್ನು Belafonte ಮತ್ತೊಬ್ಬ ಪ್ರಖ್ಯಾತ ಜಾನಪದ ಗಾಯಕಿ Odetta ಜೊತೆಯಲ್ಲಿ ಹಾಡಿದ್ದಾನೆ.

ಜೊತೆಯಲ್ಲಿ ನನ್ನ ಕನ್ನಡೀಕರಣವಿದೆ. ಹಾಡೂ ಇದೆ. ಈ ಹಾಡಿನ ಬಗ್ಗೆ ಒಂದು ಸಾಲು. ಇದೊಂದು ಮಕ್ಕಳ ಹಾಡು. ಹಾಡು ಸಂಭಾಷಣೆಯ ರೂಪದಲ್ಲಿ ಇದೆ. ಹೆನ್ರಿ ಮತ್ತು ಲೈಜಾ ನಡುವೆ ನಡೆಯುವ ಸಂವಾದವಿದು. ಹೊರಟಲ್ಲಿಂದಲೇ ತಲುಪುವ ಹಾಡು. (Pete Seeterನ Where Have All the Flowers Gone ಹಾಡಿನಂತೆ.) ಈ ಹಾಡನ್ನು ನನ್ನ ಮಗಳು ಸಣ್ಣವಳಿದ್ದಾಗ ಕೇಳಿಸುತ್ತಿದ್ದೆ. ಕನ್ನಡದ ನನ್ನ ಹಾಡನ್ನು ಹೇಳಿ ತೋರಿಸುತ್ತಿದ್ದೆ.

ನೀರು ತಾರೋ ತಿಮ್ಮ.
ತಂಬ್ಗೆ ತೂತಲ್ಲಮ್ಮ.
 
ತೂತು ಮುಚ್ಚೋ ತಿಮ್ಮ
ಹೆಂಗೆ ಮುಚ್ಚಲಮ್ಮ?
 
ಮಣ್ಣು ಮೆತ್ತೋ ತಿಮ್ಮ
ಮಣ್ ಹೆಂಗ್ ಅಗೀಲಮ್ಮ?
 
ಸನಕೇಲಿ ಆಗಿಯೋ ತಿಮ್ಮ.
ಸನಕೆ ಮೊಂಡು ಅಮ್ಮ.
 
ಚೂಪು ಮಾಡೋ ತಿಮ್ಮ
ಹೆಂಗೆ ಮಾಡಲಮ್ಮ?
 
ಕಲ್ಮೇಲೆ ಉಜ್ಜೋ ತಿಮ್ಮ.
ಕಲ್ಲು ಒಣಗೈತಮ್ಮ.
 
ವದ್ದೆ ಮಾಡೋ ತಿಮ್ಮ
ಹೆಂಗೆ ಮಾಡಲಮ್ಮ?
 
ನೀರು ಹುಯ್ಯೋ ತಿಮ್ಮ
ನೀರ್ ಹೆಂಗೆ ತರಲೇ ಅಮ್ಮ?
 
ತಂಬ್ಗೆ ತೊಗೊಳೋ ತಿಮ್ಮ
ತಂಬ್ಗೆ ತೂತಲ್ಲಮ್ಮ.
 
 

‍ಲೇಖಕರು G

1 February, 2014

2 Comments

  1. lalithasiddabasavaiah

    very fine

  2. ಲಿಂಗರಾಜು ಬಿ.ಎಸ್.

    nice

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading