ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪಾಪ..! ಪ್ರಕಾಶ್ ಶೆಟ್ಟಿ ಈಗ ‘ವಾರೆ ಕೋರೆ’

 prakash

ಆತ್ಮೀಯ ಗೆಳೆಯರೇ

ನಾನು ತರಲೆ ಹುಳುವೊಂದನ್ನು ನನ್ನ ತಲೆಯೊಳಗೆ ಹಾಕಿಬಿಟ್ಟಿದ್ದೇನೆ. ಆ ಕಾರಣ “ವಾರೆಕೋರೆ” ಎಂಬ ಹಾಸ್ಯ ಪತ್ರಿಕೆಯನ್ನು ಹುಟ್ಟುಹಾಕುವ ಹುಚ್ಚು ಹಿಡಿದೆದೆ.
ಕಚಗುಳಿ,ಚುಚ್ಚು,ಲೇವಡಿಗಳನ್ನು ವ್ಯಂಗ್ಯಚಿತ್ರ,ನಗೆಬರಹ,ಫೋಟೊ ಮತ್ತು ಕ್ಯಾರಿಕೇಚರ್‌ಗಳ ಮೂಲಕ ನೀಡುವ ದುರುದ್ದೇಶ ಇಟ್ಟುಕೊಂಡಿದ್ದೇನೆ. “ಕಾರ್ಟೂನ್ ಕಲಿ” ಎನ್ನುವ ಮಾಸಿಕದ ಬೋನಸ್. ನಿಮ್ಮಂತಹ ಹಾಸ್ಯಪ್ರಜ್ಞಾವಂತರು “ವಾರೆಕೋರೆ” ಕುಟುಂಬದಲ್ಲಿ ಭಾಗಿಯಾಗಬೇಕೆನ್ನುವುದು ನನ್ನ ಆಶಯ. ಯಾಕೆಂದರೆ ಇದು ಚಂದಾದಾರರ ಆಧಾರದ ಮೇಲೆ ಮಾಡಬೇಕಾದ ಪತ್ರಿಕೆ. 

 

ಚಂದಾದಾರರನ್ನು ಗಳಿಸಲು ಈ ಕೆಳಕಂಡ ಯೋಜನೆಗಳನ್ನು ಹಾಕಿಕೊಂಡಿದ್ದೇನೆ.
*ನಿಮ್ಮ ವ್ಯಂಗ್ಯಚಿತ್ರ ಪ್ರದರ್ಶನ(ನಿಮ್ಮೂರಿನ ಇತರ ವ್ಯಂಗ್ಯಚಿತ್ರಕಾರರನ್ನು ಸೇರಿಸಿ).
*ನನ್ನ ಕ್ಯಾರಿಕೇಚರ್ ಶೋ(ಒಂದು ಗಂಟೆ ಅವಧಿ).prakash shetty
*ವಾರೆಕೋರೆಯ ಪ್ರಾಯೋಗಿಕ ಸಂಚಿಕೆ ಮಾರಾಟಕ್ಕೆ.
*ಉಚಿತ ಕ್ಯಾರಿಕೇಚರ್ಸ್: ವಾರ್ಷಿಕ ಚಂದಾಹಣ ರೂ.200/-ದೊಂದಿಗೆ 2 ಕ್ಯಾರಿಕೇಚರ್ಸ್ ಉಚಿತ.

 

ಈ ಹುಚ್ಚು ಕನಸು ನನಸಾಗಲು ನಿಮ್ಮ ಮತ್ತು ನಿಮ್ಮೂರಿನ ವ್ಯಂಗ್ಯಚಿತ್ರಕಾರರ ಮುತುವರ್ಜಿ ಅಗತ್ಯ. ಕ್ಲಬ್,ಸಂಘ-ಸಂಸ್ಥೆಗಳ ಕಿವಿಗೆ ಹಾಕಿ. ಉಚಿತವಾಗಿ “ವಾರೆಕೋರೆ ನಗೆಹಬ್ಬ”
ಕಾರ್ಯಕ್ರಮ ನೀಡುವ ಬಗ್ಗೆ ಹೇಳಿ. ಇಂತಹ ಯೋಜನೆಗೆ ರೂಪ ಕೊಡಲು ನಿಮಗೆ ಸಾಧ್ಯವೇ?

 

“ವಾರೆಕೋರೆ” ಪತ್ರಿಕೆಗೆ ಇತರ ಯೋಜನೆಗಳಿವೆ. ವ್ಯಂಗ್ಯಚಿತ್ರಕಾರರನ್ನು ಆರ್ಥಿಕವಾಗಿ
ಬೆಳೆಸುವಂತಹ ಈ ಯೋಜನೆಗಳ ಬಗ್ಗೆ ಮುಂದೆ ಮಾಹಿತಿ ನೀಡುವೆ. ಒಟ್ಟಿನಲ್ಲಿ ಈ ಹಾಸ್ಯ ಪತ್ರಿಕೆ ಕನ್ನಡ ಪತ್ರಿಕೋದ್ಯಮಕ್ಕೊಂದು ಸುಂಟರಗಾಳಿಯಾಗಬೇಕು.
ಪ್ರಕಾಶ್ ಶೆಟ್ಟಿ,ಕಾರ್ಟೂನಿಸ್ಟ್ 

 prakashetty@gmail.com

‍ಲೇಖಕರು avadhi

14 October, 2008

3 Comments

  1. p mahamud

    Friend Prakash Shetty always amazes me with
    his typical “Da Ka” adventures. Kannada really
    needs a ‘born fool’ like him! Let all of us wish him
    a great success. Prakash, eer dumbu pole, enkulu
    eerenottugu ulla.

    P Mahamud

  2. Vasanth Kaje

    ಶೆಟ್ರೆ, ಆಲ್ ದ ಬೆಸ್ಟ್. ನನಗೆ ಒಂದು ವರ್ಷದ ಚಂದಾದ ರಶೀದಿ ಬರೆದಿಟ್ಟುಕೊಳ್ಳಿ..
    ದೇವೆರ್ ಎಡ್ಡೆ ಮಲ್ಪಡ್.

  3. ಪಂಡಿತಾರಾಧ್ಯ

    ಪ್ರಕಾಶ್, ಅವರಿಗೆ
    ಹಾರ್ದಿಕ ಶುಭಾಶಯಗಳು.

    ಚಂದಾವನ್ನು ಹೇಗೆ ಕಳುಹಿಸುವುದು? ತಿಳಿಸಿ.
    ಪ್ರೀತಿಯಿಂದ
    ಪಂಡಿತಾರಾಧ್ಯ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading