
-ನಾ ದಿವಾಕರ
ಯಾವುದೇ ಸಾಹಿತಿ, ಕಲಾವಿದ, ಕವಿ, ಲೇಖಕರಿಗೆ ಪ್ರಶಸ್ತಿ ಎನ್ನುವುದು ತಮ್ಮ ಪ್ರತಿಭೆಯನ್ನು ಅರಸಿಕೊಂಡು ಬರುವ ಮನ್ನಣೆ ಮಾತ್ರವಾಗಿರುತ್ತದೆ. ಆದರೆ ಪ್ರಶಸ್ತಿ ಪಡೆಯುವುದೇ ಅಂತಿಮ ಗುರಿಯಾಗಿರುವುದಿಲ್ಲ. ತಮ್ಮ ಸೂಕ್ಷ್ಮ ಸಂವೇದನೆಗಳನ್ನು, ಮಾನವ ಪರ ಕಾಳಜಿಗಳನ್ನು, ಕಾವ್ಯಾತ್ಮಕ ಅನುಭವಗಳನ್ನು ಮತ್ತು ಜೀವನಾನುಭವಗಳನ್ನು ಲಿಖಿತ ರೂಪದಲ್ಲಿ ಜನತೆಗೆ ಉಣಬಡಿಸುವ ಸಾಹಿತಿಗಳಿಗೆ ಜನತೆಯ ಮನ್ನಣೆ, ಅಭಿಪ್ರಾಯ, ಮೆಚ್ಚುಗೆಗಳೇ ಪ್ರಶಸ್ತಿಗಳಿದ್ದಂತೆ. ಆದಾಗ್ಯೂ ಕೆಲವೊಂದು ಸನ್ನಿವೇಶಗಳಲ್ಲಿ ಕೆಲವು ಪ್ರಶಸ್ತಿಗಳು ತಮ್ಮದೇ ಆದ ಪ್ರಾಮುಖ್ಯತೆ ಪಡೆದಿರುವುದೂ ಅಷ್ಟೇ ಸತ್ಯ. ಆಧುನಿಕ ಸಾಹಿತ್ಯ ವಲಯದಲ್ಲಿ ಅಕಾಡೆಮಿ ಪ್ರಶಸ್ತಿಗಳು ಹೆಚ್ಚು ಮಹತ್ವ ಪಡೆಯುತ್ತವೆ. ಆದರೆ ಭಾರತೀಯ ಸಾಹಿತ್ಯ ವಲಯದಲ್ಲಿ ಜ್ಞಾನಪೀಠಕ್ಕೆ ತನ್ನದೇ ಆದ ಪ್ರೌಢಿಮೆ ಇದೆ. ಜ್ಞಾನಪೀಠ ಪ್ರಶಸ್ತಿ ಗಳಿಸುವುದು ಯಾವುದೇ ಒಬ್ಬ ಸಾಹಿತಿಯ ಅತ್ಯುನ್ನತ ಸಾಧನೆ ಎಂಬಂತೆ ಬಿಂಬಿಸಲಾಗಿದೆ. ಇದು ಒಂದು ರೀತಿಯಲ್ಲಿ ಸತ್ಯವೂ ಇರಬಹುದು. ಏಕೆಂದರೆ ಈ ಪ್ರಶಸ್ತಿ ಪಡೆದಿರುವವರ ಸಂಖ್ಯೆ ವಿರಳ.
ಕನ್ನಡ ಸಾಹಿತ್ಯ ಲೋಕದಲ್ಲಿ ಈ ವರ್ಷದ ಜ್ಞಾನಪೀಠ ಪಡೆದ ಕಂಬಾರರು ಎಂಟನೆಯವರು. ಹಾಗೆಂದ ಮಾತ್ರಕ್ಕೆ ಈ ಎಂಟು ಸಾಹಿತಿಗಳನ್ನು ಹೊರತುಪಡಿಸಿ ಕನ್ನಡದಲ್ಲಿ ಜ್ಞಾನಪೀಠಕ್ಕೆ ಅರ್ಹರಾದವರು ಇಲ್ಲ ಎಂದೇನಲ್ಲ. ಯಾವುದೇ ಪ್ರಶಸ್ತಿಗೂ ಈ ರೀತಿಯ ಮಾನದಂಡವನ್ನು ಹೊರೆಸಲಾಗುವುದಿಲ್ಲ. ಕಾವ್ಯ, ಕಾದಂಬರಿ, ನಾಟಕ, ವಿಮರ್ಶೆ, ಸಂಶೋಧನೆ ಹೀಗೆ ಸಾಹಿತ್ಯದ ಎಲ್ಲ ಕ್ಷೇತ್ರಗಳಲ್ಲೂ ತಮ್ಮದೇ ಆದ ಕಾಣಿಕೆ ನೀಡಿರುವ ಚಂದ್ರಶೇಖರ ಕಂಬಾರರಿಗೆ ಜ್ಞಾನಪೀಠ ಪ್ರಶಸ್ತಿ ದೊರೆತಿರುವುದು ಹೆಮ್ಮೆಯ ಸಂಗತಿ. ಇದು ಒಬ್ಬ ಕನ್ನಡ ಸಾಹಿತಿಗೆ ಸಂದ ಪ್ರಶಸ್ತಿ ಎನ್ನುವುದಕ್ಕಿಂತಲೂ ಒಬ್ಬ ಸಂವೇದನಾಶೀಲ ಸಾಹಿತಿಗೆ, ಜನಪರ ಕಾಳಜಿಯ ಕವಿಗೆ, ವಸ್ತುನಿಷ್ಠ ಸಂಶೋಧಕನಿಗೆ, ಜನಪದ ವಿದ್ವಾಂಸನಿಗೆ ದೊರೆತ ಸಮ್ಮಾನ ಎಂದು ಭಾವಿಸಿದರೆ ಒಳಿತು. ಕವಿತೆ ಎನ್ನುವುದು ಒಳಗಿನಿಂದ ಬರಬೇಕು, ನಾಭಿಯಿಂದ ಬರಬೇಕು, ಹೃದಯವನ್ನು ಕಲಕುವಂತಹ, ನಲುಗಿಸುವಂತಹ, ಸ್ಪರ್ಶಿಸುವಂತಹ ಕಾವ್ಯಗಳು ಹೊರಹೊಮ್ಮಬೇಕಾಗಿದೆ ಎಂದು ಯುವ ಕವಿಗಳಿಗೆ ಪ್ರೋತ್ಸಾಹ ನೀಡುವ ಕಂಬಾರರು ಒಂದು ರೀತಿಯಲ್ಲಿ ಕನ್ನಡ ಸಾಹಿತ್ಯದ ಶಿಖರ ಸೂರ್ಯ ಎಂದರೂ ತಪ್ಪಾಗಲಾರದು. ಮಾರ್ಕ್ಸ್ವಾದವನ್ನು ಒಮ್ಮೆ ಒಪ್ಪಿಕೊಂಡು ತದನಂತರದಲ್ಲಿ ದೂರವಾದರೂ, ಎಡಪಂಥೀಯ ವಿಚಾರಧಾರೆಯನ್ನು ಮಾನವೀಯತೆಯ ನೆಲೆಗಟ್ಟಿನಲ್ಲಿ ಪ್ರತಿಪಾದಿಸುವ ನಿಟ್ಟಿನಲ್ಲಿ ತಮ್ಮ ಸಾಹಿತ್ಯ ಕೃತಿಗಳನ್ನು ರಚಿಸಿರುವ ಕಂಬಾರರ ಬದುಕೇ ಒಂದು ಬೃಹತ್ ಸಾಹಿತ್ಯ ಗ್ರಂಥದಂತೆ. ನಾಟಕ ಅಕಾಡೆಮಿ, ಸಾಹಿತ್ಯ ಅಕಾಡೆಮಿ, ವರ್ಧಮಾನ ಪ್ರಶಸ್ತಿ, ಕಮಲಾದೇವಿ ಚಟ್ಟೋಪಾಧ್ಯಾಯ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ಪದ್ಮಶ್ರೀ, ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಹೀಗೆ ಪ್ರಶಸ್ತಿಯ ಸರಮಾಲೆಯನ್ನೇ ಧರಿಸಿರುವ ಸಾರಸ್ವತ ಲೋಕದ ದಿಗ್ಗಜರಿಗೆ ಜ್ಞಾನಪೀಠ ಮತ್ತೊಂದು ಗರಿ ಮೂಡಿಸಿದೆ.ಆದರೆ ಕಂಬಾರರಿಗೆ ಸಂದ ಪ್ರಶಸ್ತಿಯನ್ನು ಮುಕ್ತ ಮನಸ್ಸಿನಿಂದ ಶ್ಲಾಘಿಸದೆ , ಎಸ್.ಎಲ್. ಭೈರಪ್ಪನವರಿಗೆ ಬರಬೇಕಿತ್ತು, ಕಂಬಾರರಿಗಿಂತಲೂ ಅವರು ಹೆಚ್ಚು ಅರ್ಹರು ಎಂದು ಹೇಳಿರುವ ನಾಡೋಜ ಪಾಟೀಲ್ ಪುಟ್ಟಪ್ಪ ತಮ್ಮ ಅಪ್ರಬುದ್ಧತೆಯನ್ನು ಪ್ರದರ್ಶಿಸಿದ್ದಾರೆ.
ಕನ್ನಡ ಸಾಹಿತ್ಯ ಲೋಕದಲ್ಲಿ ಜ್ಞಾನಪೀಠದಿಂದ ವಂಚಿತರಾದವರು ಹಲವರಿದ್ದಾರೆ. ಈ ಪ್ರಶಸ್ತಿಗಾಗಿ ಹಲುಬುವರೂ ಇದ್ದಾರೆ. ಭೈರಪ್ಪನವರ ಕೃತಿಗಳನ್ನು ಕುರಿತ ಸೈದ್ಧಾಂತಿಕ ಜಿಜ್ಞಾಸೆಗಳೇನೇ ಇರಲಿ, ಅವರಿಗೆ ಜ್ಞಾನಪೀಠ ಬರಬಾರದೆಂಬ ಉದ್ದೇಶ ಯಾರಿಗೂ ಇರಲಿಕ್ಕಿಲ್ಲ. ಆದರೆ ಕಂಬಾರರ ಸಾಹಿತ್ಯವನ್ನು ಭೈರಪ್ಪನವರ ಸಾಹಿತ್ಯದೊಡನೆ ತುಲನಾತ್ಮಕವಾಗಿ ವಿಮರ್ಶಿಸಲು ಮುಂದಾಗುವುದು ಸರ್ವಥಾ ಸಮರ್ಥನೀಯವಲ್ಲ. ಪಾಪು ಅವರಿಗೆ ಭೈರಪ್ಪನವರ ಬಗ್ಗೆ ಗೌರವಾದರಗಳಿದ್ದರೆ ಅದು ವ್ಯಕ್ತಿಗತವಾದದ್ದು. ಆದರೆ ಸಾಹಿತ್ಯದ ದೃಷ್ಟಿಯಿಂದ ನೋಡಿದಾಗ ಭೈರಪ್ಪನವರ ಸಾಹಿತ್ಯಕ್ಕೂ ಕಂಬಾರರ ಸಾಹಿತ್ಯಕ್ಕೂ ಅಪಾರ ವ್ಯತ್ಯಾಸವಿದ್ದು, ಅದು ವಿದ್ವಾಂಸರ ಚರ್ಚೆಗೆ ಬಿಟ್ಟ ವಿಚಾರ. ಆದರೆ ಒಬ್ಬರಿಗೆ ಪ್ರಶಸ್ತಿ ದೊರೆತ ಕೂಡಲೇ ಮತ್ತೊಬ್ಬರಿಗೆ ಅದು ದೊರೆಯಬೇಕಿತ್ತು ಎಂದು ಹಲುಬುವುದು ಪ್ರಬುದ್ಧತೆಯ ಲಕ್ಷಣವಲ್ಲ. ಕಂಬಾರರು ಉಪಕುಲಪತಿಗಳಾಗಿದ್ದಾಗಲೇ ನಾಡೋಜ ಪ್ರಶಸ್ತಿ ಪಡೆದ ಪಾಪು ತಮಗಿಂತಲೂ ಅರ್ಹರಿಗೆ ಕೊಡಿ ಎಂದು ಹೇಳಬಹುದಿತ್ತಲ್ಲವೇ ? ಭೈರಪ್ಪನವರ ಸಾಹಿತ್ಯಕ್ಕೂ ಮುಂದೊಂದು ದಿನ ಜ್ಞಾನಪೀಠ ಲಭಿಸಬಹುದು. ಇದು ಅರ್ಹತೆ, ಅನರ್ಹತೆಯ ಪ್ರಶ್ನೆಯಲ್ಲ. ಸಾಹಿತ್ಯ ಪ್ರತಿಭೆಯ ಸಂಕೇತವೂ ಅಲ್ಲ. ಹಾಗೆ ನೋಡಿದರೆ ಕನ್ನಡ ಸಾಹಿತ್ಯ ಲೋಕದಲ್ಲಿ ಜ್ಞಾನಪೀಠ ವಂಚಿತ ಸಾಹಿತಿಗಳ ಸಾಲು ದೊಡ್ಡದಾಗಿಯೇ ಇದೆ. ಸಮಸ್ಯೆ ಎಂದರೆ ಇದನ್ನು ನಿರ್ಧರಿಸುವುದು ಜ್ಞಾನಪೀಠ ನೀಡುವ ಒಂದು ಖಾಸಗಿ ಸಂಸ್ಥೆ ಮತ್ತು ಸಮಿತಿಯೇ ಹೊರತು, ನಾವುಗಳಲ್ಲ. ಭಾರತದಂತಹ ಸಂಕೀರ್ಣ ಸಾಮಾಜಿಕ ಪರಿಸರದಲ್ಲಿ ಸಾಹಿತ್ಯವೇ ಆಗಲಿ, ಕಲೆಯೇ ಆಗಲಿ ಒಂದು ವಿಶಿಷ್ಟ ಆಯಾಮ ಹೊಂದಿರುವುದು ಅತ್ಯಗತ್ಯವಾಗಿರುತ್ತದೆ. ಈ ಆಯಾಮಗಳ ಹಿನ್ನೆಲೆಯಲ್ಲಿ ನೋಡಿದಾಗ ಜ್ಞಾನಪೀಠ ಪಡೆದ ಸಾಹಿತಿಗಳ ಸಾಹಿತ್ಯ ಕೃಷಿಯಲ್ಲಿ ಒಂದು ಸಮಾಜಮುಖೀ ಪರಂಪರೆಯನ್ನು ಕಾಣಬಹುದಾಗಿದೆ. ಇದೇನೂ ಅಪರಾಧವಲ್ಲ. ಹಾಗಾಗಿ ಹಲವು ಪ್ರಸಿದ್ಧ ಸಾಹಿತಿಗಳು ಈ ಪ್ರಶಸ್ತಿಯಿಂದ ವಂಚಿತರಾಗಿರುವುದೂ ಹೌದು. ಏನೇ ಆಗಲಿ, ಪಾಪು ಅವರ ಅಪಸ್ವರ ಕನ್ನಡ ಸಾರಸ್ವತ ಲೋಕಕ್ಕೇ ಕಪ್ಪುಚುಕ್ಕೆಯಾಗಿ ಕಾಣುತ್ತದೆ.
ಕಂಬಾರರಿಗೆ ಜ್ಞಾನಪೀಠ ದೊರೆತ ಮಾತ್ರಕ್ಕೆ ಅವರ ಪೀಳಿಗೆಯ ಎಲ್ಲ ಇತರ ಸಾಹಿತಿಗಳೊಡನೆ ತಾಳೆ ಹಾಕಿ ನೋಡಿ ಪ್ರಶಸ್ತಿಯ ಔಚಿತ್ಯವನ್ನು ಪ್ರಶ್ನಿಸುವುದು ಸಾಹಿತ್ಯಕ್ಕೆ ಅವಮಾನ ಮಾಡಿದಂತೆಯೇ ಸರಿ. ಇದು ಹಲವು ವರ್ಷಗಳಿಂದಲೂ ನಡೆದುಬಂದಿರುವ ಒಂದು ವಿಚಿತ್ರ ವಿದ್ಯಮಾನ. ಅನಂತಮೂರ್ತಿ, ಗಿರೀಶ್ ಕಾರ್ನಾಡ್ ಅವರಿಗೆ ಜ್ಞಾನಪೀಠ ಬಂದಾಗಲೂ, ಅವರೇನು ಮಹಾ ಸಾಧಿಸಿದ್ದಾರೆ ಎಂಬ ಅಪಸ್ವರ ಕೇಳಿಬಂದಿತ್ತು. ಪ್ರಗತಿಪರ ಸಾಹಿತಿಗಳಿಗೆ ಜ್ಞಾನಪೀಠ ಬಂದಾಗಲೆಲ್ಲಾ ಭೈರಪ್ಪನವರ ಹೆಸರನ್ನು ಪ್ರಸ್ತಾಪಿಸುವ ಮೂಲಕ ಸೈದ್ಧಾಂತಿಕ ಸಂಘರ್ಷ ಹುಟ್ಟುಹಾಕುತ್ತಿದ್ದಾರೆ. ಈ ಸಂಘರ್ಷದ ಸತ್ಯಾಸತ್ಯತೆಗಳೇನೇ ಇದ್ದರೂ, ಈ ರೀತಿಯ ಅಪ್ರಬುದ್ಧ ಪ್ರಲಾಪ ನಾಡೋಜ ಪಾಪು ಅವರಿಂದ ಕೇಳಿಬಂದಿದ್ದು ಅಚ್ಚರಿ ಮೂಡಿಸುತ್ತದೆ. ಬಹುಶಃ ಭೈರಪ್ಪನವರಿಗೆ ಜ್ಞಾನಪೀಠ ಒದಗಿಬಂದ ನಂತರವೇ ಇತರ ಪ್ರಶಸ್ತಿ ಪುರಸ್ಕೃತ ಸಾಹಿತಿಗಳೆಲ್ಲರ ಅರ್ಹತೆಗಳೂ ಸ್ವೀಕೃತವಾಗುವುದೇನೋ ? ಇದೂ ಒಂದು ರೀತಿಯ ಬೌದ್ಧಿಕ ದಾರಿದ್ರ್ಯತೆ ಅಲ್ಲವೇ ?
ಚಿತ್ರ-ಗುರುಪ್ರಸಾದ್ ಅವರ ಎಫ್ ಬಿಯಿಂದ..






ದಿವಾಕರರ ಮಾತು ತುಂಬಾ ತೂಕವುಳ್ಳದ್ದು. ನನಗೆ ಪಾಪು ಅವರ ಮಾತಿನಿಂದ ಎಷ್ಟು ಬೇಸರವಾಯಿತೆಂದರೆ ಅದರ ಬಗ್ಗೆ ಪ್ರತಿಕ್ರಿಯಿಸುವುದು ಬೇಕಾಗಲೇ ಇಲ್ಲ. ಆದರೆ ಸುಮ್ಮನಿರುವುದು ಅಸಂಗತವಾದದ್ದನ್ನು ಹೇಳುವುದಕ್ಕಿಂತ ಅಪಾಯಕಾರಿ. ಸಂಭ್ರಮಿಸುವುದನ್ನು ಮನಸ್ಸು ಮರೆತುಹೋದಾಗ ಈ ಬಗೆಯ ಆಕಸ್ಮಿಕಗಳು ಸಂಭವಿಸುತ್ತವೆ. ಇಂಥವರಿಗೆ ಪ್ರಶ್ಸ್ತಿ ಬರಬೇಕಿತ್ತು ಎನ್ನುವ ಅಭಿಪ್ರಾಯ ತಪ್ಪಲ್ಲ. ಆದರೆ ಇವರಿಗೆ ಬದಲು ಅವರಿಗೆ ಎನ್ನುವುದು ಕ್ಷಮಾರ್ಹವಲ್ಲ. ನನಗೆ ಒಂದು ಸನ್ನಿವೇಶ ನೆನಪಾಗುತ್ತಿದೆ. ಹತ್ತು ಕವಿತೆ ಬರೆದ ಕವಿಯೊಬ್ಬರು ಹೇಳಿದ್ದರು ಮುಂದಿನ ಜ್ಞಾನ ಪೀಠ ಪ್ರಶಸ್ತಿ ತನಗೇ ಎಂದು. ಅದಕ್ಕಿಂಲು ಡೇಂಜರಸ್ ಪಾಪು ಅವರ ನಿಲುವು.
ಆರ್ ವಿಜಯರಾಘವನ್
Thanks Are you the same Vijayaraghavan of Gramina bank Kolar. HOpe you recognise me.-Divakar
really. I am now in Bellary. Pragathi Gramin Bank, H.O., Sanganakal Road, Gandhi nagar, Bellary -583103. 9900263178. viji56@gmail.com
about you?
yours
vijayaraghavan R
Hi R Vijay raghavan Now I am promoted in Hittnahalli branch near mysore Settled in Mys. mob.9448685755 ndv1961@yahoo.co.in. Thanks to avadhi we came into contact after several years.
Divakara.
nimma pratikriye arthapoornavagide,adu aste cool agi,vatsavavannu etti hidiyuttide.prashastigalu sahityda manadandagalalla,hage estobari arharalladavaru vasili madi prashasti padedaddu untu, illi byrapparigo,kambararigo ayke samitiya nirdhara,halavomme,samitiyallu avarige istavaguva,bekaguva janarige prashastige recmond maduvu gumpugarike kuda ide.patilputtappanavaru,ella adamele,heege contadiction huttu hakiddeko nanage arthavaaguttilla.bidi namma kannada bashege ondu gari modibanda ee samayadalli navu kushipadona,yavaprashasti gojige hogade,haduva kogile,belaka koduva surya,chandra,bhoomi,nisarga ivu eke nammannu kaduvudillavo,divakar sir nimma barahagalalli,monachide,adu manamuutuvantide,namaskara
d.ravi varma hospet
paapu iga nijavaagi paapuvaadaru!
paapu avarige tumbaaa vayassaagide. avarige aralu maralu. paapa paapu, bittubidi.
kanam
Sri N Divakar’s comments are really noteworthy. Hope, erudite PP will be more patient in expressing his views in future.
It’s so sad. Paapu buddivantikege jayawagali.
ಪಾಪು ವಿಚಾರ ಬಿಡಿ, ಪಾಪು ಹೇಳಿದ್ದು ಸರಿಯಲ್ಲವೆಂದು ಹೇಳಿ ಬೈರಪ್ಪನವರು -ಕಂಬಾರರನ್ನು ಅಭಿನಂದಿಸುತ್ತಿದ್ದರೆ ದೊಡ್ಡವರಾಗುತ್ತಿದ್ದರು…
ಪ್ರಶಸ್ತಿಗಳು ಘೋಷಿತವಾದಾಗೆಲ್ಲ ವಾಸನೆ ಮೂಸಿ ಶ್ರೀ ಪಾಟೀಲ ಪುಟ್ಟಪ್ಪನವರು ಉತ್ತರ ಕರ್ನಾಟಕ್ಕೆ ಅನ್ಯಾಯವಾಗಿದೆ ಎನ್ನುತ್ತಿದ್ದರು. ಈಗ ಉತ್ತರ ಕರ್ನಾಟಕದ, ನಿಜಕ್ಕೂ ಬಹುಮುಖ ಪ್ರತಿಭೆಯುಳ್ಳ,ಅಪ್ಪಟ ಸೃಜನಶೀಲ ಬರಹಗಾರ ಕಂಬಾರರಿಗೆ ಸಾಹಿತ್ಯಕ್ಕೆ ಕೊಡಮಾಡಲ್ಪಡುವ ಅತುನ್ನತ ಪ್ರಶಸ್ತಿ ಘೋಷಿತವಾದ ಸಂದರ್ಭದಲ್ಲಿ ’ಕಂಬಾರರು ಲಾಬಿ ಮಾಡಿ ಇದನ್ನು ಪಡೆದುಕೊಂಡಿದ್ದಾರೆ,ಇದು ಭೈರಪ್ಪನವರಿಗೆ ಸಿಗಬೇಕಾಗಿತ್ತು’ ಎನ್ನುತ್ತಾರೆ.ಭೈರಪ್ಪನವರು ನಾಟಕ, ಕವನ ಕೂಡ ಬರೆದಿದ್ದಾರಂತೆ! ಇದೆಂಥ ಮಾನಸಿಕ ಅಸ್ವಾಸ್ಥ್ಯವಿದು? ’ಇಂಥ ಅಪ್ರಬುದ್ಧ ಪ್ರಲಾಪಗಳು ಕರ್ನಾಟಕದ ಚಿಂತನಶೀಲ ಮನಸುಗಳಿಗ ಸ್ವೀಕಾರಾರ್ಹವಲ್ಲ, ನೀವು ಕ್ಷಮೆ ಕೇಳಬೇಕು” ಎಂದು ಪುಟ್ಟಪ್ಪನಂಥವರಿಗೆ ಹೇಳಬೇಕಾಗಿ ಬರಬಹುದು.
\ಪೀಠಕ್ಕೆ ಹೆಚ್ಚು ಅರ್ಹರಾದ ಕಂಬಾರರಿಗೆ ಅಭಿನಂದನೆ ಹೇಳುತ್ತಲೇ…
ಸಾಹಿತ್ಯಲೋಕದ ಸಣ್ಣತನ, ರಾಜಕೀಯವನ್ನು ಹೇಳಲು ಪ್ರಯತ್ನಿಸುವೆ.
ಪಾಪು ನಿಜವಾಗಿಯೂ ಪೆದ್ದರು. ಇದ್ದದನ್ನು ಇದ್ದಹಾಗೆ ಹೇಳಿದರು ಅಂತ ಕಾಣುತ್ತೆ. ಹಾಗಾಗಿ ನಾ ದಿವಾಕರ ಅವರಂತವರು ಬೋದನೆಗೆ ನಿಂತಿದ್ದರೆ. ತಪ್ಪಲ್ಲ ಬಿಡಿ. ಇದನ್ನು ಒಂದು ಕ್ಷಣ ಮರೆತು, ಚಂಪಾ ಅವರ ಹೇಳಿಕೆಗಳತ್ತ ಗಮನಿಸಿ. ಕಂಬಾರರ ಬಗ್ಗೆ ಈಗ ಮಾತನಾಡುವುದು ಸರಿಯಲ್ಲ ಎನ್ನುತ್ತಲೇ, ವಿಜಯ ಕರ್ನಾಟಕದಲ್ಲಿ ಎಂತಹ ಪದ್ಯ ಬರೆದಿದ್ದರೆ ಎಂಬುದನ್ನು ವಿವೇಕಿಗಳು ಓದಬೇಕು ! ಇವರಿಗೆ ಏನು ಭೋದನೆ ಮಾಡುವಿರಿ ದಿವಾಕರ್ ?
ಚಂಪಾ ಅಂಗ್ಯಾಕೆ, ಪಾಪು ಹಿಂಗ್ಯಾಕೆ – ಎಂಬುದನ್ನು ಯೋಚಿಸುತ್ತಲೇ, ಅನಂತ ಮೂರ್ತಿ ಮತ್ತವರ ಸಂಗಡಿಗರ ಹೇಳಿಕೆಗಳನ್ನು ಗಮನಿಸಿ. ಪುತಿನ, ಅಡಿಗ, ಕೆ ಎಸ್ ನ, ತೇಜಸ್ವಿ, ಲಂಕೇಶ್ ಗೆ ಪೀಠ ಸಿಗಬೇಕಿತ್ತು ಎಂದಿದ್ದಾರೆ !
ಅಪ್ಪಿ ತಪ್ಪಿಯೂ ಬೈರಪ್ಪನ ಹೆಸರು ಪ್ರಸ್ತಾಪಿಸಿಲ್ಲ. ಇದನ್ನೇನು ಅವರ ದೊಡ್ಡತನ ಎನ್ನಬೇಕೆ ? ಅಥವಾ ಸಣ್ಣತನ ಎನ್ನಬೇಕೆ ? ಆಳದಲ್ಲಿ ಇಲ್ಲಿ ನಡೆಯುತ್ತಿರುವುದು ಲಿಂಗಾಯತ ಹಾಗು ವಿಪ್ರರ ನಡುವಿನ ಜಾತಿ ರಾಜಕೀಯ.
ರಾಷ್ಟ್ರ ಕವಿಗೆ ಪೀಠ ದೊರಕಿಸಲು ನಡೆಸಿದ ಲಿಂಗಾಯಿತ ಲಾಬಿಯನ್ನು ಸೋಲಿಸಲು, ವಿಪ್ರರಿಗೆ ಕಮ್ಮಾರರು ಸಿಕ್ಕಿದ್ದರೆಯಸ್ಟೇ. ಇದು ಯಾರಿಗೂ ಅರ್ಥವಾಗುವುದಿಲ್ಲ ಎಂದು ಶರಣರು, ವಿಪ್ರರು ಭಾವಿಸಿದಂತಿದೆ !
-ಪೂರ್ಣಚಂದ್ರ ಮೈಸೂರು
ಪಾಪುಗೆ ಪಾಪ ವಯಸ್ಸಾಗಿದೆ. ಹೋಗಲಿ ಬಿಡಿ. ಕಂಬಾರರಿಗೆ ಪ್ರಶಸ್ತಿ ಬಂದಿದ್ದಕ್ಕೆ ಅಭಿನಂದಿಸೋಣ.ಆದರೆ ಭೈರಪ್ಪನವರಿಗೆ ಈ ಪ್ರಶಸ್ತಿ ಯಾವಗಲೋ ಬರಬೇಕಿತ್ತು. ಕನ್ನಡದಲ್ಲಿ ಜ್ನಾನಪೀಠವನ್ನು ಮೊದಲಬಾರಿಗೆ “ಹೊಡೆದುಕೊಂಡ”
ವ್ಯಕ್ತಿಯೇ ಅದನ್ನು ತಪ್ಪಿಸಿದ್ದು ಎನ್ನುವ ಸತ್ಯ ಎಲ್ಲರಿಗೂ ತಿಳಿದಿರುವುದೇ
nimma maathu aksharashaha nija ..
ಬೇಂದ್ರೆ ಬಳಿಕ ಜನಪದವನ್ನು ಕಾವ್ಯದ ಮೂಲಕ ಉಣಬಡಿಸಿರುವ ಕಂಬಾರರಿಗೆ ಜ್ಞಾನಪೀಠ ಬಂದಿರುವುದು ನಿಜಕ್ಕೂ ಪ್ರತಿ ಕಾವ್ಯ ಪ್ರೇಮಿಗೆ ಸಂದ ಪ್ರಶಸ್ತಿ. ಆದರು
ಪಾಪು ಸಲ್ಲದ ಮಾತುಗಳನ್ನು ಆಡಿದ್ದಾರೆ. ಇದೇನೇ ಇರಲಿ, ಪ್ರಶಸ್ತಿಗೆ ಯಾರು ಅರ್ಹರು ಯಾರು ಅಲ್ಲ ಎಂಬ ಚರ್ಚೆ ಬೇಡ ಎಂಬ ಮಾತು ಸರಿಯಲ್ಲ. ಏಕೆಂದರೆ ಪೂರ್ಣಚಂದ್ರ ಹೇಳಿರುವಂತೆ ಸಾಹಿತ್ಯ ವಲಯದಲ್ಲೂ ಕೀಳು ರಾಜಕೀಯ, ಜಾತೀಯತೆ, ಭ್ರಷ್ಟಾಚಾರ ಇರುವುದು ಸುಳ್ಳಲ್ಲ.
ನನಗೊಂದು ಕುತೂಹಲ – ಒಂದು ವೇಳೆ ಜ್ಞಾನಪೀಠ ಏನಾದರು ಬೈರಪ್ಪ ಅವರಿಗೆ ಒಲಿದಿದ್ದರೆ…., ಆಗ ನಮ್ಮ ಅನಂತ ಮೂರುತಿ, ಕಾರ್ನಾಡ್ ಹಾಗೂ ಪ್ರಗತಿಪರ ಚಿಂತಕ ವಲಯ ಹೇಗೆ ಪ್ರತಿಕ್ರಿಯಿಸುತ್ತಿತ್ತು ? ಪಾಪು-ಗಳ ಸಂಖ್ಯೆ ನೂರಾಗುತ್ತಿತ್ತು ಎಂಬುದು ಸುಳ್ಳಲ್ಲ !
ಅದಕ್ಕೆ ಹೇಳಿದ್ದು ಚರ್ಚೆ ತಪ್ಪಲ್ಲ.
ಕೆ ಎಸ ಕಲ್ಲೇಶ್,