ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪರಿಸರ ದಿನದ ವಿಶೇಷ: ‘ಇ-ಜ್ಞಾನ’ ಈಗ ಇ-ಪತ್ರಿಕೆಯ ರೂಪದಲ್ಲಿ

ಕನ್ನಡದಲ್ಲಿ ವಿಜ್ಞಾನ ಪತ್ರಿಕೆಗಳ ಕೊರತೆಯಿದೆ, ಇರುವ ಪತ್ರಿಕೆಗಳೂ ಅಷ್ಟು ಸಮರ್ಪಕವಾಗಿ ಮೂಡಿಬರುತ್ತಿಲ್ಲ, ತಕ್ಕಮಟ್ಟಿಗೆ ಚೆನ್ನಾಗಿರುವ ಪತ್ರಿಕೆಗಳು ಎಲ್ಲೂ ಸಿಗುವುದಿಲ್ಲ – ಇವೆಲ್ಲ ಆಗಿಂದಾಗ್ಗೆ ಕೇಳಿಬರುವ ಅಭಿಪ್ರಾಯಗಳು. ಈ ಅಭಿಪ್ರಾಯಗಳನ್ನು ಕೊಂಚಮಟ್ಟಿಗಾದರೂ ಬದಲಿಸುವ ಉದ್ದೇಶದಿಂದ ಇ-ಜ್ಞಾನ ಡಾಟ್ ಕಾಮ್ (www.ejnana.com) ಇದೀಗ ಹೊಸತೊಂದು ಸಾಹಸಕ್ಕೆ ಕೈಹಾಕಿದೆ.

ಕನ್ನಡದ ಹಿರಿಯ ವಿಜ್ಞಾನ ಲೇಖಕರ ಮಾರ್ಗದರ್ಶನದಲ್ಲಿ ರೂಪಗೊಳ್ಳುತ್ತಿರುವ ಅನಿಯತಕಾಲಿಕ ವಿಜ್ಞಾನ ಪತ್ರಿಕೆ ಇಷ್ಟರಲ್ಲೇ ಅಂತರಜಾಲದಲ್ಲಿ ಲಭ್ಯವಾಗಲಿದೆ. ಈ ಪತ್ರಿಕೆಗೆ ಕನ್ನಡ ವಿಜ್ಞಾನ ಬರಹಗಾರರ ಅಂತರಜಾಲ ಬಳಗ ‘ಪೆನ್-ಸರ್ಕಲ್’ನ ಬೆಂಬಲ ಕೂಡ ಇದೆ.

ವಿದ್ಯುನ್ಮಾನ ರೂಪದಲ್ಲಷ್ಟೆ ಲಭ್ಯವಾಗಲಿರುವ ಈ ಪತ್ರಿಕೆಯನ್ನು www.ejnana.com ತಾಣದಲ್ಲಿ ಉಚಿತವಾಗಿ ಓದಬಹುದು. ಪತ್ರಿಕೆಯ ಮೊದಲ ಸಂಚಿಕೆ ‘ಪರಿಸರ ಸಂಚಿಕೆ’ಯಾಗಿ ಮೂಡಿಬರಲಿದ್ದು ಬರುವ ಜೂನ್ ಐದರ ವಿಶ್ವ ಪರಿಸರ ದಿನದಂದು ಇ-ಜ್ಞಾನ ತಾಣದಲ್ಲಿ ಲಭ್ಯವಾಗಲಿದೆ.

ವಿಶ್ವಾಸದಿಂದ,

ಟಿ ಜಿ ಶ್ರೀನಿಧಿ

 

 

 

‍ಲೇಖಕರು G

1 June, 2011

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading