ಅನಿಸುತಿದೆ ಯಾಕೋ?
ಸೂತ್ರಧಾರ ರಾಮಯ್ಯ
ಒಂದೊಂದು ಸ್ಸಾರಿ ಅನ್ನಿಸುತ್ತದೆ ” ಏ ಕೆ (೧೯) 47ನಲ್ಲಿ ಸ್ವಾತಂತ್ರವಾದರೂ ಬಂತೋ, ಸಂವಿಧಾನ ಬೇಕಾಬಿಟ್ಟಿಯಾಗಿ, ಯಾಕಾರೂ ಈ ವಿಧಾನಕ್ಕೆ ತಿರುಗಿತೋ? ವಿನಾಕಾರಣ ರಾಜ್ಯ ಸರ್ಕಾರಗಳನ್ನು ಛೇದಿಸುವ ಪರಿಚ್ಛೇದ ೩೫೬ ಯಾಕಾದರೂ ಹೋಗಿ ಹೋಗಿ,
ಆತಂಕ ಹುಟ್ಟಿಸುವ ಗವರ್ನರ್ಗಳ ಕೈನ ಏಕೆ ೪೭ ಆಗಿ ಬದಲಾಯಿತೋ! ಅಂತ ಹಲವು ಭಾರಿ (ಮಿಸ್ಟೇಕ್ ) ಅನ್ನಿಸುತ್ತೆ.
ಒಬಾಮರ ‘ ಪನ್ ಜಾಬಿ’ ಯತ್
ಬ್ರಿಟನ್ ಮತ್ತು ಅಮೇರಿಕಾ ನಡುವಿನ ಬಾಂಧವ್ಯವನ್ನು ಸುಭದ್ರಗೊಳಿಸಿ ‘ಲಾಕ್’ ಜಡಿಯಲು, ಅಧ್ಯಕ್ಷ ಒಬಾಮರು ಮೇ ೨೪ ರಿಂದ ೨೬ರ ವರೆಗೆ ತಮ್ಮ ಸ್ಕಾಟ್ ಲ್ಯಾಂಡ್ ಯಾರ್ಡ್ ‘ಪ್ರವಾಸಕ್ಕೆ’ ನೀಡಿದ ಹೆಸರು, ಪಂಜಾಬಿ ಪದ: ಚಾಲಾಕ್. ಇದಕ್ಕೆ ವ್ಯತಿರಿಕ್ತ ಎಂಬಂತೆ, ಒಂದು ತಿಂಗಳ ಹಿಂದಷ್ಟೇ ಪಾಕ್ ದೇಶದ ಸಾರ್ವಭೌಮತ್ವದ ಲಾಕ್ ಒಡೆದು, ‘ಒಸಾಮಾ ಸಂಹಾರ’ಕ್ಕಾಗಿ ಅಲ್ಲಿ ಕೈಗೊಂಡ ‘ಪ್ರಯಾಸಕ್ಕೆ’ ಆಪರೇಶನ್ -ತಲಾಕ್ ಅಂತ ಹೆಸರಿಡಲಿಲ್ಲ ಸದ್ಯ.
ಪರಮಾಣು ಯುಗದಲ್ಲೂ ಆಣೆ?
ಕಲಿಯುಗದಲ್ಲಂತೂ, ಸತ್ಯವಂತರಿಗೆ ಯಾವುದೊ ಕಾಲವೊಂದಿತ್ತು ಅಂತ ನನಗೆ ಅನ್ನಿಸೋದಿಲ್ಲ. ಆದರೆ ಸತ್ಯವಂ’ಥರಾ’ ಇರೋರ್ಗೆ ಮಾತ್ರ ಎಲ್ಲಾ ಕಾಲವೂ ಸುಭಿಕ್ಷ ಕಾಲವೇ ಅಂತ ಖಂಡಿತ ಹೇಳಬಹುದು. ಅದ ಕೊಂದು( ಸತ್ಯವನ್ನು?) ಉಪಾಯವೂ ಇದೆ: ಹಾಗಂತ ಓತ್( ಲಾ ಪ್ರಕಾರ) ತೆಗೆದುಕೊಳ್ಳುವುದು : ಸತ್ಯವನ್ನಲ್ಲದೆ ಬೇರೇನೂ ಹೇಳುವುದಿಲ್ಲ ; ನಾನು ಹೇಳುವುದೆಲ್ಲಾ ಸತ್ಯ ಅಂತ, ಹೇಳಿ, ನಂತರ ಬೇಕಾದ್ದನ್ನು ನುಡಿಯುವುದು / ನಡೆಯುವುದು ಅಷ್ಟೇ. ವೇರಿ ವೆರಿ ಸಿಂಪಲ್.
ಕ್ರಿಟಿಕ್ಸ್ ಯಾಕೆ ಕ್ರಿಟಿಕಲ್ ?
ಅದಿರುತಿತ್ತು(ಅದು ಇರುತ್ತಿತ್ತು) ಸಾಮಾಜಿಕ ಜೀವನದಲ್ಲಿ; ಮೌಲ್ಯಗಳೆಂಬ ಅದಿರು. ಜನರೂ ಒಳ್ಳೆಯ ಮೆಟಲ್ ಗಳಿಂದ ಅದವರೇ ಆಗಿರುತ್ತಿದ್ದರು.(ಆಗ ಇರುತ್ತಿದ್ದರು) ಹಾಗಾಗಿ, ಸಾಹಿತಿಗಳೆಂಬ ಮೈನರ್ಸ್, ಬದುಕಿನ ಗಣಿಗಳಲ್ಲಿ ಆಳಕ್ಕೆ ಇಳಿದು, ಉತ್ತಮ ಕೃತಿಗಳನ್ನು ಲೇಖನಿಗಳಿಂದ ಹೆಕ್ಕಿ ಕೊಡುತ್ತಿದ್ದರು. ಈಗೇನಿದೆ ಮಣ್ಣು ,ಬರಿ ಮಣ್ಣು; ನಿಜಾಂಶವಿಲ್ಲ-ಖನಿಜಾಂಶವಂತು ಮೊದಲೇ ಇಲ್ಲ. ಪ್ರಸ್ತುತ ಕೊಟ್ಟದ್ದೂ ಕೆಟ್ಟದ್ದೇ. ಇರುವ ಮೈನರ್ಸ್ಗಳಲ್ಲಿ ಬಹುತೇಕರು minors . ನಿಜಾಂಶವನ್ನು ಬರೆದು ಕೊಡಲು-ಅದುರುತ್ತಾರೆ. ಒಟ್ಟಾರೆ ಪರಿಣಾಮವೆಂದರೆ: ಅದಿರಿಗೆ, ಲೋಹಕ್ಕೆ ಬೆಲೆ ಕಟ್ಟಬೇಕಾದ ವಿಮರ್ಶಕರ ಪರಿಸ್ತಿತಿಯೂ ಸದ್ಯಕ್ಕೆ ಕ್ರಿಟಿ ಕಲ್ಲೇ, ಖನಿಜಾಂಶವಿದ್ದರೆ ತಾನೇ ಮಣ್ಣಲ್ಲಿ?
end ಗುಟುಕು
ಜನಕ್ಕೆ ಅಂತ ಕೊಟ್ಟ ದುಡ್ಡನ್ನ ಮುಖಂಡರೆ ನುಂಗಿದರಂತೆ?
-ಓಹೋ…,ಅದಕ್ಕೆ ಬೋರಣ್ಣ ಅಂದಿದ್ದು; ಮುಕ್ಕಂಡ್ರೇ ಎಲ್ಲ್ಲಾ ಮುಕ್ಕಂಡ್ರು ಅಂತಾ ?
ಸೂತ್ರಧಾರ ರಾಮಯ್ಯ








ivara ‘pun’chu sakkattagirutte…
ivara pustka odiddini..adralloo ollolle punch iddave..
punchful puns!! Last one was the icing on the cake!!
vijayarajarige jaybhava vijaybhava haage sandhyage vandanegalu