
-ಸೂತ್ರಧಾರ ರಾಮಯ್ಯ
ಮನೆಯೇ ರಾಜಕಾರಣದ ಮೊದಲ ಮೆಟ್ಟಿಲು?
ಎಗ್ ಜಾಕ್ತ್ಲಿ ಕರೆಕ್ಟ್. ಮನೆಮನೆಯಲ್ಲೂ ಉಂಟು ಎರಡು ಪಕ್ಷಗಳು: ಒಂದು, ಆಡಳಿತ ಪಕ್ಷ ಅಥವಾ ಪತ್ನಿ ಪಕ್ಷ, ಇನ್ ನೊಂದು ಪತಿಪಕ್ಷ!
ಪತ್ನಿಯೇ ಪ್ರತಿ ಸಂಸಾರದ ಪವರ್ ಸೆಂಟರ್. ಹೆಂಡತಿ, ಮಕ್ಕಳು,ಅತ್ತೆ ಮಾವ. ಹೆಂಡ್ತಿ ತಮ್ಮ- ತಂಗಿ ಇತ್ಯಾದಿ ಮನೆಯ ಆಡಳಿತ ಪಕ್ಷ. ಮನೆಗೆ ಯಜಮಾನನೆನಿಸಿಕೊಂಡ (?) ಗಂಡ, ಮತ್ತವನ ತಂದೆ ತಾಯಿ, ಮದುವೆಯಾಗದ ಗಂಡನ ತಂಗಿ ವಗೈರೆ ಪತಿಪಕ್ಷ.
ಪತ್ನಿಪಕ್ಷ ಮಂಡಿಸುವ ಸೂಚನೆಗಳು, ಬಿಲ್ ಗಳು ಯಾವುದೇ ತಕರಾರಿಲ್ಲದೆ ಪಾಸಾದರೂ, ಪತಿಪಕ್ಷದ ಬಿಲ್ಲಿಗೆ ನಿಲುವಳಿ ಸೂಚನೆಗಳು ತಪ್ಪಿದ್ದಲ್ಲ. ಹಾಗಾಗಿ, ಸಂಸಾರ ಸಾಗರದ ಹಡಗಿನ ಕ್ಯಾಪ್ಟನ್ ಮಡದಿಯೇ. ಗಂಡನೆನೆಸಿಕೊಂಡವ ಆ ಹಡಗಿನ ಯಾವುದೋ ಮೂಲೆಯಲ್ಲಿ ‘ಅಡಗು’ ಅಂತಲೇ!
ಪರ್ಫೆಕ್ಟ್ಲಿಕರೆಕ್ಟ್.
ಯಾವ ಕಾಲದಲ್ಲೂ ನಿಜವಾದ ಲೀಗಲ್ ಲ್ಯೂಮಿನರಿ (ಕಾನೂನು ಜ್ನಾನನಿಧಿ) ಅನ್ನೋ ಪ್ರಾಣಿ ಇರ್ಲಿ ಲ್ಲಾ – ಇದ್ದೇ ಇಲ್ಲ. ‘ಕಾನೂನು ಕಲಿ’ ಅಂದ್ರೂ ಅಷ್ಟೇ- ಕಾನೂನನ್ನು ಇನ್ನೂ ‘ಕಲಿ’ ತ್ತಿದ್ದಾನೆ ಅಂತಲೇ- ಅದರರ್ಥ. ಕಾನೂನು ಜ್ಞಾನದಲ್ಲಿ ಮತ್ತು ವಕೀಲಿ ವೃತ್ತಿಯಲ್ಲಿ ಸರ್ವದಾ ಯಾರೂ ಪರ್ ಫೆಕ್ಟ್ ಆಗಿರೋಕೆ ಸಾಧ್ಯವಿಲ್ಲಾ ಅನ್ನೋ ಕಾರಣಕ್ಕೆ ” ವಕೀಲರು ಪ್ರಾಕ್ಟೀಸ್ ಮಾಡ್ತಾ ಇದ್ದಾರೆ,(ಅಥವಾ ಇನ್ನೂ ಪರ್ಫೆಕ್ಟ್ ಆಗಬೇಕಿದೆ) ಅಂತಾ ಹೇಳೋದು. ಇಲಾ ವಾದ ರಿಲವೆನ್ನಿ.
ಹಾಸ್ಯದ ಪರಿಯೂ – ಪರಿಹಾಸ್ಯವೂ?
ಜೀವನದ ಘಟನೆಗಳ ಮೇಲೆ ತಮ್ಮ ವಾರೆನೋಟ ಬೀರುತ್ತಾ, ಹಾಸ್ಯಪ್ರಜ್ಞೆಯ ಸ್ಪಾಟ್ ಲೈಟ್ ಹಾಕಿ, ನೋಟ್ ಮಾಡಿಕೊಳ್ಳುತ್ತಾ ( ದುಡ್ದಲ್ಲಾ) ಸಾಲಸೋಲ ಮಾಡಿ ಬುಕ್ ಪ್ರಿಂಟ್ ಮಾಡಿ ಇಡುತ್ತಾರೆ ಹಾಸ್ಯ ಲೇಖಕರು ಪಾಪ! ಆದರೆ ಹಾಸ್ಯವನ್ನು ಜನಕ್ಕೆ ತಲುಪಿಸುವ ಸೋಗು ಹೊತ್ತ ‘ಹಾಸ್ಯೋತ್ಸವದ’ ಮಂದಿ ಮಾತ್ರ, ಯಾವುದೇ ಪಾಪ ಪ್ರಜ್ಞೆ ಇಲ್ಲದೆ, ಅಸಲು ಹಾಸ್ಯ ಲೇಖಕರ ಹೆಸರನ್ನೂ ಸ್ಮರಿಸದೆ, ತಮ್ಮದೇ ಎನ್ನುವಂತೆ ಕ್ವೋಟ್ ಮಾಡಿಕೊಂಡೇ ಸೂಟ್ ಹೊಲಸಿಕೊಳ್ಳುತ್ತಾರೆ, ಕೈತುಂಬಾ ನೋಟ್ ಮಾಡಿ ಕೊಳ್ಳುತ್ತಾರೆ. ಇದ್ಯಾವ ಹಾಸ್ಯದ ಪರಿಯೋ; ಪರಿಹಾಸ್ಯವೋ ಜೋಕ್ ಮಾರ್ ಸ್ವಾಮ್ಗಳೇ ಹೇಳಬೇಕು.
ಪೇ ರೆಂಟಲ್ ಕೇರ್!
ನರಸಿಂಹರಾಜು: ರಾಮಣ್ಣನ್ನ ಅದೆಷ್ಟು ‘ಪೇರೆಂಟಲ್ ಕೇರ್’ನಿಂದ ನೋಡಿಕೊಂಡರು ಅವನ ಅಪ್ಪಾ ಅಮ್ಮ. ಈಗ ನೋಡು ಅವನ್ನಾ: ಹೆಂಡ್ತಿ ಮಾತು ಕೇಳ್ಕೊಂಡು ಅಪ್ಪಾ ಅಮ್ಮನ್ನ ವೃದ್ದಾಶ್ರಮಕ್ಕೆ ಸೇರಿಸಿದ್ದಾನಂತೆ ಅಯೋಗ್ಯ!
ಬಾಲಕೃಷ್ಣ: ಒಂಥರಾ ಇವನ್ದೂ ‘ಪೇ-ರೆಂಟಲ್ ಕೆರೇ’ ಅಲ್ವೇ? ವೃದ್ದಾಶ್ರಮಕ್ಕೆ ತಿಂಗ್ಳಾ ತಿಂಗ್ಳಾ ‘ರೆಂಟ್ ಪೇ’ ಮಾಡ್ತಾನಲ್ಲಾ ರಾಮಣ್ಣ – ಅದರಲ್ಲಿ ತಪ್ಪೇನಿದೆ? ಅಂತಾರಂತೆ ರಾಮಣ್ಣನ ಹೆಂಡ್ತಿ ಕಡೆಯವರು?
ಯಾರೇ ‘ಡೆಸರ್ಟ್’ ಮಾಡಿದರೂ ನಾವು ‘ಒಂಟಿ’ಯಲ್ಲಾ!
ದಾರಿಗೆ ಸಂಗದವಿಲ್ಲಾ…,ಅನ್ನೋ ದಾರಿಯನ್ನೇ ಕಡೆಗೆ ಮನುಷ್ಯನ ಪಾತ್ರ ಧಾರಿಯೂ ಹಿಡಿಯೋದು. ನಾವೆ ಹಿಡಿದು ಎಲ್ಲರೊಡನೆ ಕಡಲಲ್ಲಿ ತೇಲಿ ಹೊರಟರೂ, ಕಡೆಯಲಿ ನಾವು ನಾವೆ-ನೀವು ನೀವೇ? ಎಲ್ಲ ಡೆಸರ್ಟ್ ಮಾಡಿದರೂ ,ಮರಳಲಾಗದ ಮರಳುಗಾಡಿನಲ್ಲಿ ಪ್ರತಿಯೊಬ್ಬನೂ ಒಂಟಿಯೇ, ಅಲ್ಲಾಹುವನ್ನು ಬಿಟ್ಟರೆ. ಅಲ್ಲ ಗಳೆಯೋಕೆ ಯಾರಿಗೆ ತಾನೇ ಸಾಧ್ಯ?
end ಗುಟುಕು
ಒಳ್ಳೆ ಸೆನ್ಸ್ ಆಫ್ ಹ್ಯೂಮರ್ ಇದ್ರೆ ಜೀವನ ಜೋಕಾಲಿ. ಆದರೆ ಜೀವನದಲ್ಲಿ ಜೋಕ್ ಖಾಲಿ ಆದರೆ ಹೇಗಿರಬಹುದು? ಉತ್ತರಾ: ಹಾಸ್ಯೋತ್ಸವಗಳ ಥರಾ?






Hahahaa Pun tastic nijakku Fantastic
Smt.Veda avare, nanna ‘puntastick’tamage vedyavadudakke nanage santasavagide.although a single voice for now(solitary reaper of my puns?)I will try to prove your ‘words worth’in my future write ups and downs.
Sutradhara Ramaiah