ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪನ್ ಟಾಸ್ stick- ಪದನಾಟ್ಯ

-ಸೂತ್ರಧಾರ ರಾಮಯ್ಯ.

ನೆರೆಯ ಸಂದೇಶದ ಹೊರೆ!

‘ಭಾರತ ಪಾಕಿಸ್ತಾನದ ಪರಮ ಮಿತ್ರ ದೇಶ’ (ಮೋಸ್ಟ್ ಫೇವರ್ಡ್ ನೇಷನ್.MFN ) ಅನ್ನೋ ಆ ದೇಶದ ಸಂದೇಶ ಕೇಳಿ, ನಮ್ಮ’ಪಾಕ್’ ಶಾಸ್ತ್ರ ಪ್ರವೀಣರಿಗೆ B.P  ಅಧಿಕವಾಗಿದೆಯಂತೆ; ವಾಟ್ಸ್ ಕುಕಿಂಗ್ ಅಂತಾ! ಈ ‘ಉ ಭಯ ಖುಷಿ ಲೋಪಾರಿ’ ಸಂದೇಹಗಳಿಗೆ ಲಾಗಾಯ್ತಿಂದ ನಡೆದಿರುವ ವಾರ್ ಅಂಡ್ ಪೀಸ್ ಪ್ರಕ್ರಿಯೆಗಳೇ ಕಾರಣ. ಒಮ್ಮೆ ಕೈಲಿ ಆಲೀವ್ ಬ್ರ್ಯಾಂಚ್ ಇನ್ನೊಮ್ಮೆ ಕೈಗೆ ತು-ಪಾಕಿ, ಮಧ್ಯೆ ಮಧ್ಯೆ ಕಾರ್ಗಿಲ್ಲು, ೨೬/೧೧, ಕ್ರಾಸ್ ಬಾರ್ಡರ್ ಟೆರ್ರರ್, ಇನ್ಫಿಲ್ತ್ರೆಶನ್ ಹೆಸರಿನ ಬುಡಮೇಲು ಕೃತ್ಯ, ಇವೆಲ್ಲಾ
ಒಂದು ರೀತಿ pieces of war ತಾನೆ; ಪ್ರಾಕ್ಸಿ ವಾರ್? ಅವನ್ನೆಲ್ಲ ಮರೆತು ಸದರೀ ‘ಎಂ ಎಫ್ ಎನ್’ ಸಂದೇಶವನ್ನು ನಂಬೋಣ, let us believe ಅಂದ್ರೆ, LET, ಐ ಮೀನ್ ಲಷ್ಕರ್ ಎ ತೊಯ್ಬಾ, ಅಥ್ವಾ ವಿನಾಕಾರಣ ಸಾಯಿಬಾದ ಅನೇಕ ಭಯೋತ್ಪಾದಕ ‘ಸಂಕಟ’ನೆಗಳ ಚೀಫ್ಗಳ ಮಿಸ್ ಚೀಫ್ ನಿರಂತರ ನಡೆದೇ ಇರುವುದು! ಹೋಗಲಿ ಇಂತಹಾ ಫಿಕಲ್ ಮೈಂಡೆಡ್ ನೋಶನ್ನ mfn ಸಂದೆಶದಲ್ಲೇನಾದರೂ ಕ್ಲ್ಯಾರಿಟಿ
ಇದೆಯೇ ಅಂದ್ರೆ ಅದೂ ಇಲ್ಲಾ. ಅದಕ್ಕೂ ಒಂದು ‘ರೈಡರ್’: ಒಂದ್ಗೆ ಉಂಡರೂ, ಕಾಶ್ಮೀರದ ಆಪಲ್ ಮಾತ್ರ ಮುಟ್ಟಬೇಡಿ ಅನ್ನೋ ಮೊಂಡುವಾದ. ಎಮ್ ಎಫ್ ಎನ್ ಏನಿದ್ರು ಟ್ರೇಡ್ ಅಂಡ್ ಕಾಮರ್ಸ್ಗೆ ಸೀಮಿತವಂತೆ. ಒಳ ಗುಟ್ಟು ಏನೆಂದರೆ ಭಾರತದ
ಜೊತೆ ಟೈಸ್ನ ನಾರ್ಮಲೈಸ್ ಮಾಡಿಕೊಳ್ಳಲು ಅಲ್ಲಿನ ‘ಯೂನಿಫಾರ್ಮ್ ರಿಜೀಮ್ ಬಿಡೋಲ್ಲ ಅಷ್ಟೇ. ಹಾಗಾಗಿ, ಭಾರತ ಪಾಕ್ ನ ಬಾನ್ಧವ್ಯಗಳು  ನಾರ್ಮಲೈಸ್ ಆಗಿವೆ
ಅನ್ನೋದೇ ದೊಡ್ಡ ಲೈಸ್. ಸಂಬಂಧಗಳು ನಾರುತ್ತಿದ್ದರು, ಸಿಚುಯೇಶನ್ ‘ಅಬ್ ನಾರ್ಮಲ್’ ಹೈ ಅಂದ ಹಾಗೆ. ಅಲ್ಲಿನ ಸಿವಿಲಿಯೆನ್ ಲೀಡರ್ಸ್ಗಳಿಗೂ ಸಮವಸ್ತ್ರಧಾರಿಗಳದು ಬೇರೆ ಬೇರೆ ದಾರಿ. ಸದಾ ಕಾನ್ಫ್ಲಿಕ್ಟ್ ಇರುವನ್ತದೆ: ಯು ಆರ್ ಮೀ
ಅನ್ನೋ ಪ್ರೊಪೊಸಿಶನ್. ಈಗಂತೂ ಆರ್ಮಿನೇ ಆಕ್ಚುಯಲ್ ರೈಡರ್. ಒಂದು ಪ್ರಹಸನ ನೆನಪಿಗೆ ಬರುತ್ತದೆ: ಭಾರತದ ಮೇಲೆ ಸಾವಿರ ವರ್ಷಗಳ ಯುದ್ದ ಎಂದು ಸಾರಿದ್ದ ಒಮ್ಮೆ ಪ್ರಧಾನಿ ಭುಟ್ಟೋ, ಆದರೆ ನಂತರ ಪ್ರಧಾನಿಯಾದ ಬೆನಜೀರ್ ನಮ್ಮ ದೇಶದ ಜೊತೆಗೆ
ಸ್ನೇಹಹಸ್ತವನ್ನು ಚಾಚಿದ್ದರು. ಪಾಪ ‘ಹ್ಯಾಂಗ್’ ಆತು ನೋಡಿ ನಂತರದ ಬೆಳವಣಿಗೆ: ಸಮವಸ್ತ್ರದವರ ಪಿತೂರಿಗೆ ಬಲಿಯಾಗಿ, ತಂತಮ್ಮ ಪ್ರಾಣಗಳನ್ನೇ ಕಳಕೊಂಡುಬುಟ್ಟೋ ಪಾಪ! ಈಗಲೂ MFN ಸ್ಟೇಟಸ್- ಸ್ಟೇ ಟುಸ್ ಆಗುವ ಸಾಧ್ಯತೆಗಳೂ ಇರುವಾಗ, ಒಂದು ವೇಳೆ ಅದನ್ನು ದಯಪಾಲಿಸಿದರೂ, ನಾವೂ ತಳೆಯಬೇಕಾದ ನಿಲುವು ಇಷ್ಟೇ: ‘ಪರಮ ಆಪ್ತ ದೇಶ’ ಸಂದೇಶವಷ್ಟೇ ಸಾಲದು, ಈ ದೇಶದ ಬಾಂಧವ್ಯ ವೃದ್ಧಿಗಾಗಿ ‘ಪರಮ ಆಪತ್ತ ದ್ವೇಷ” ಅನ್ನೋ ಇತರ ನೂರು ಸಂದೇಶಗಳನ್ನು ನೀಡದಿರಲಿ ಅನ್ನೋದಷ್ಟೇ.
ಎಂಟೆದೆಯವರ ಎಂಟ್ರಿ ಏಕ್ಸಿಟ್ಗಳು.
ವ್ಯಕ್ತಿಗಳು ರಂಗಸ್ತಳಕ್ಕೆ ಎಂಟ್ರಿ-ಎಗ್ಸಿಟ್ ಕೊಟ್ಟಾಗ ಹೇಗಿರಬೇಕೆಂದರೆ, ‘ಲಂಕೇಶ್ ಪತ್ರಿಕೆ’
ಅನ್ನೋ ‘ಕಪ್ಪುಬಿಳುಪಿನ ಕ್ರಾಂತಿ’ಯ ಮಂತ್ರದಂಡ ಹಿಡಿದು ಲಂಕೇಶ್ ಎಂಟ್ರಿ ಕೊಟ್ಟಾಗ
ಹುಚ್ಚೆದ್ದು ಓದಿದ ಜನಾ, “ಎಲ್ಲಿದ್ದೆ ಇಲ್ಲೀತನಕ; ಎಲ್ಲಿಂದ ಬಂದ್ಯಪ್ಪಾ?ಎಂದು ಉದ್ಗರಿಸಿದನ್ತಿರಬೇಕು. ಬದುಕಿನ ರಂಗಸ್ತಳದಿಂದ ಎಕ್ಸಿಟ್ ಕೊಟ್ಟರಂತೂ, ಕನ್ನಡ ಸಾಹಿತ್ಯದಲ್ಲಿ ವಿಸ್ಮಯಗಳ ಮಾಯಾ ಜಾಲವನ್ನೇ ಹೆಣೆದು; ಜನಮಾನಸದಲ್ಲಿ ಕಂಡರಿಯದ ಕ್ರೇಜ್ಗೆ ನಾನ್ದಿಹಾಡಿ, ಒಂದು ದಿನ ಹೇಳದೆ ಕೇಳದೆ ಥಟ್ಟನೆ ಎಕ್ಸಿಟ್ ಆಗಿ ಹೋಗಿ ” ಎಲ್ಲಿ ಹೋದಿರಿ ತೇಜಸ್ವಿ?” ಎಂದು ದಿಗ್ಭ್ರಮೆಗೊಂಡು ಕೇಳುತ್ತಲೇ ಇರುವಂತಿರಬೇಕು.

end ಗುಟುಕು.
” ಸದ್ಯ(ಕ್ಕೆ) ಬಚಾವಾದೆಯಲ್ಲ ಬಡಜೀವವೇ! ಮರೆಯಾಗು,(ನಿರೀಕ್ಷಣ ಜಾಮೀನಿಗೆ) ಮೊರೆಹೋಗು!”
ಈ ಮಾತುಗಳನ್ನು ಯಾರು ಯಾರಿಗೆ ಯಾವಾಗ ಹೇಳಿದರು?
ಅನ್ವರ್ಥ ‘ನಾಮ’ಧಾರಿಗಳಾದ, ಮುಕ್ಕಣ್ಣಾ-ಮೇದಿನಿ ಮನೆಯ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದಾಗ, ಪಕ್ಕದ್ ಮನೆ ಪಾರ್ವತಮ್ಮ, ಭ್ರಷ್ಟಾಚಾರದ ಕುಣಿಕೆಯಿಂದ ಸ್ವಲ್ಪದರಲ್ಲಿ ಪಾರಾದ ಪತಿ ಪರಪ್ಪ, ಅದೇ; ಪರ(ಮೇಶ)ಪ್ಪನಿಗೆ ಆತಂಕದಿಂದ ಹೇಳಿದ್ದು!

‍ಲೇಖಕರು sreejavn

13 November, 2011

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading