
-ಸೂತ್ರಧಾರ ರಾಮಯ್ಯ.
ಬಳಸು ಬಿಸಾಡು?
ಪೂರ್ವದಿಂದಲೂ, ನಂಬಿದ್ದನ್ನು ಕೈಬಿಡದ ನಮ್ಮಲ್ಲೂ ಈಗ ‘ಪಶ್ಚಿಮಾಗ್ರಹ’ ಅತಿಯಾಗಿ ಹೋಗುತ್ತಿದೆ. ಅನುಕೂಲವಿರುವವರೆಗೂ ಅಥವಾ ಸಾಕೆನಿಸುವವರೆಗೂ ಸಾಕು; ನಂತರ ಬಿಸಾಕು, ಅನ್ನೋ ; ‘ಯೂಸ್ ಅಂಡ್ ಥ್ರೋ’ ಪಾಲಿಸಿ, ಮುಂದೆ ಆ ಪರಿ ಕಲ್ಪನೆಯನ್ನು ಪಾಲಿಸಿದವರಿಗೆ ಪ್ರತಿಕುಲವಾಗಿ ಪರಿಣಮಿಸಬಹುದಲ್ಲವೆ?
ಬಿಡಳು, ಬಿಡುವಳು – ಈವಳು!
ಭೂಮಿತಾಯಿ ಅನ್ನೋ ಈವ್ ಸದಾ ಪಾಸಿಟಿವ್. ಮಕ್ಕಳು ತನ್ನನ್ನು ಅದೆಷ್ಟೇ ಶೋಷಣೆಗೆ ಒಳಪಡಿಸಿದರೂ, ಅವರನ್ನು ‘ಬಿಡಳು’. ಬದಲಿಗೆ ತಲೆಸವರಿ, ಕುರುಳು ನೀವಿ, “ನೀವಿದೆಲ್ಲವ ಉಂಡು ಸಂತಸದಿಂದಿರಿ” ಅಂತಾ ತಿನ್ನಲು ಜೀವ ವೃಕ್ಷಗಳಲ್ಲಿ ಯಥೇಚ್ಚವಾಗಿ ಹಣ್ಣನ್ನು ‘ಬಿಡುವಳು’. ಕುಡಿಯೇ, ನೀರು ಕುಡಿ, ಅಂತಾ ಜೀವ ಜಲವ ‘ಈವಳು’!
ಉಪೇಂದ್ರ ಭಟ್ಟರ ಜಾಣಪದ?
ಜಾನಪದ ಸಾಹಿತ್ಯ ಯಾವುದೋ ಒಂದು ಕಾಲಕ್ಕೆ ಸೀಮಿತ ಅಲ್ಲಾ, ಅದು ಎಲ್ಲಾ ಕಾಲಕ್ಕೂ ನಮ್ಮ ಮಧ್ಯದಲ್ಲೇ, ಜನರ ಬದುಕಿನಂಗಳದಲ್ಲೇ ಹುಟ್ಟುತ್ತದೆ. ಈ ಮಾತನ್ನು ಕವಿ ದೊಡ್ಡ ರಂಗೇಗೌಡರು ದಶಕಗಳ ಹಿಂದೆಯೇ ಪ್ರತಿಪಾದಿಸಿದ್ದರು. ಹಾಗೆಂದಾಗ ಇದೀಗ ರಾಜ್ಯದಾದ್ಯಂತ ‘ಸಿಕ್ಕಾಪಟ್ಟೆ ಇಷ್ಟಾಪಟ್ಟ’ ಜನರ ನಾಲಿಗೆ ಮೇಲೆ ಕುಣಿಯುತ್ತಿರುವ ಎಂಟೀವಿ…ಬರಿ ಓಳು ಬರಿ ಓಳು.., ಉಪ್ಪಿನ ಕಾಯಿ ಕಾಯಿ..ಹಾಗೆ, ಮುಂಗಾರು ಭಟ್ಟರ ಕತ್ಲಲ್ಲಿ ಕರಡೀಗೆ ಜಾಮೂನು, ಲೈಫು ಇಷ್ಟೇನೆ ಅನ್ನೋ ; ಜಾಣ ಪದಗಳನ್ನು folk ಅನ್ನಬಹುದೇ? ಎಂಬ ಪ್ರಶ್ನೆಗೆ, ‘ಯಾವೋನಿಗ್ಗೊತ್ತು’ ಅಂತಾರಲ್ಲ: ಸದಾ ಜೋಳಿಗೆ ‘ತಗಲಾಕ್ಕಂಡೇ’ ಓಡಾಡುವ ಸಾಹಿತ್ಯ ಪ್ರೇಮಿಗಳು.
ಪೂರ್ವಾಭಾದ್ರ: ನನ್ನ ತಲೆಕೂದಲು ಕಪ್ಪಗಿದ್ದಾಗಿನಿಂದಲೂ ಈಗಲೂ, ತೇರೀ ಮೇರಿ ಮೇರೀತೇರೀ ಪ್ರೇಮ್ ಕ ಹಾನಿ ಹೈ ಮುಶ್ ಕಿಲ್ ಅನ್ನೋ ಮತ್ತದೇ ಆರ್ಥನಾದದ ಹಾಡನ್ನು ಹಾಡ್ತಲೇ ಇದ್ದಾನಲ್ಲ ಸಲ್ಮಾನ್?
ಉತ್ತರಾಭಾದ್ರ: ಅವನೇ ಹೇಳಿದ ಹಾಗೆ ಪ್ರೇಮಪಕ್ಷಿಗಳು ಮುಶ್ ಕಿಲ್ ಅಂತಾ (ಕ) ಹಾನಿ ಗೊಳಗಾದರೆ ಯಾರೇನು ಮಾಡೋಕಾಗುತ್ತೆ? ಇದೇನೂ ಏಕ ಪಕ್ಷಿಯದ್ದಲ್ಲಾ: ಅವನ ಹಿಂದೆ ಹಾರಾಡುತ್ತಾ ಬಿದ್ದ ಅನೇಕ ಪಕ್ಶಿಗಳದ್ದು!
ಕರಣೆ – ಕರುಣೆ
ಸಿಮೆಂಟನ್ನು ಕಲಸಿ, ಮರಳಜತೆ ಬೆರಸಿ, ಕಟ್ಟಡ ಕಟ್ಟಿ ನಿಲ್ಲಿಸೋಕೆ ‘ಕರಣೆ’ ಎಷ್ಟು ಮುಖ್ಯವೋ, ಮನುಷ್ಯರ ನಡುವಿನ ಮಾನವೀಯ ಸಂಬಂಧಗಳನ್ನು ಬೆಸೆದು ಗಟ್ಟಿಗೊಳಿಸಿ ನಿಲ್ಲಿಸಲು ‘ಕರುಣೆ’ ಅಷ್ಟೇ ಮುಖ್ಯ.
end ಗುಟುಕು
ಆನರ್ ಚೆಕ್ದ್
ಮಾತೆತ್ತಿದರೆ ಯುವರ್ ಆನರ್,ಯುವರ್ ಆನರ್ ಅಂತಾ ಕರೆಸಿಕೊಳ್ತಿದ್ದ ವ್ಯಕ್ತಿಗೆ ಕೊಟ್ಟಿದ್ದ ಸಾಲವನ್ನು ಹಿಡಿರುಗಿಸುವಂತೆ ಪಟ್ಟುಹಿಡಿದ ಸಾಲಗಾರ. ‘ಯುವರ್ ಆನರ್’ ಕೂಡಲೇ ಚೆಕ್ ಬರೆದುಕೊಟ್ಟ. ಚೆಕ್ಕನ್ನು ಬ್ಯಾಂಕಿಗೆ ಸಲ್ಲಿಸಿದಾಗ, ಅದು ಡಿಸ್ ಆನರ್ ಆಗಬೇಕೆ!






0 Comments