ಭಾರತೀಯ ವಿದ್ಯಾ ಭವನ
ಎಚ್.ಬಿ.ಕಾಲೇಜ್ ಆಫ್ ಕಮ್ಯೂನಿಕೇಷನ್ ಮತ್ತು ಮ್ಯಾನೇಜ್ಮೆಂಟ್
ರೇಸ್ ಕೋರ್ಸ್ ರಸ್ತೆ, ಬೆಂಗಳೂರು-560001
ಕನ್ನಡ ಪತ್ರಿಕೋದ್ಯಮ ಮತ್ತು ಸಾರ್ವಜನಿಕ ಸಂಪರ್ಕ ಕ್ಷೇತ್ರದಲ್ಲಿ
ಒಂದು ವರ್ಷದ ಸ್ನಾತಕೊತ್ತರ ಡಿಪ್ಲೋಮೋ
(ಮುದ್ರಣ ಮತ್ತು ವಿದ್ಯನ್ಮಾನ ಕ್ಷೇತ್ರದಲ್ಲಿ ವಿಶೇಷ ತರಬೇತಿ ಸೇರಿದಂತೆ)
ಕಾಲೇಜು
ಹರಿಲಾಲ್ ಭಗವತಿ ಕಾಲೇಜ್ ಆಫ್ ಕಮ್ಯೂನಿಕೇಷನ್ ಅಂಡ್ ಮ್ಯಾನೇಜ್ಮೆಂಟ್ 1969ರಲ್ಲಿ ಬೆಂಗಳೂರಿನಲ್ಲಿ ಅಸ್ವಿತ್ವಕ್ಕೆ ಬಂದಿತು. ಇದು ಭಾರತೀಯ ವಿದ್ಯಾ ಭವನ ಉದ್ಯೋಗ ಆಧರಿತ ಶಿಕ್ಷಣ ನೀಡುವ ಉದ್ದೇಶದಿಂದ ಸ್ನಾತಕೊತ್ತರ ಡಿಪ್ಲೋಮೋ ತರಗತಿಗಳನ್ನು ನಡೆಸಲು ಮುಂಬಯಿಯಲ್ಲಿ ಸ್ಥಾಪಿಸಿರುವ ರಾಜೇಂದ್ರ ಪ್ರಸಾದ್ ಇನ್ಸ್ಟಿಟ್ಯೂಟ್ ಆಫ್ ಕಮ್ಯೂನಿಕೇಷನ್ ಅಂಡ್ ಮ್ಯಾನೇಜ್ಮೆಂಟ್ನ ಅಂಗಸಂಸ್ಥೆ.
2000-2001ನೇ ಸಾಲಿನಲ್ಲಿ ಕನ್ನಡ ಪತ್ರಿಕೋದ್ಯಮದಲ್ಲಿ ಆರು ತಿಂಗಳ ಸ್ನಾತಕೊತ್ತರ ಸರ್ಟಿಫಿಕೇಟ್ ಶಿಕ್ಷಣವನ್ನು ಆರಂಭಿಸಲಾಯಿತು. ಈ ಪ್ರಯತ್ನಕ್ಕೆ ದೊರೆತ ಅಭೂತಪೂರ್ವ ಪ್ರತಿಕ್ರಿಯೆಯಿಂದ ಉತ್ತೇಜನಗೊಂಡು ಇದನ್ನು ಒಂದು ವರ್ಷದ ಡಿಪ್ಲೋಮೋ ಶಿಕ್ಷಣವನ್ನಾಗಿ ಮರು ರೂಪಿಸಲಾಯಿತು. ಕಳೆದ ಹದಿನೈದು ವರ್ಷಗಳಿಂದಲೂ ನಡೆದುಕೊಂಡು ಬರುತ್ತಿರುವ ಈ ಕೋರ್ಸ್ನ ಶಿಕ್ಷಣ ಪಡೆದ ಬಹುತೇಕ ವಿದ್ಯಾರ್ಥಿಗಳು ಕನ್ನಡ ಪತ್ರಿಕೋದ್ಯಮ ಮತ್ತು ವಿದ್ಯುನ್ಮಾನ ಕ್ಷೇತ್ರದಲ್ಲಿ ಉನ್ನತ ಹುದ್ದೆಗಳಲ್ಲಿರುವುದು ನಮ್ಮ ಶಿಕ್ಷಣದ ಯಶಸ್ಸಿಗೆ ಸಾಕ್ಷಿಯಾಗಿದೆ.
ಇದೀಗ ಹೊಸ ಸ್ವರೂಪದಲ್ಲಿ ಪತ್ರಿಕೋದ್ಯಮ ಡಿಪ್ಲೋಮೋ
ಇದು ಜಗತ್ತಿನಾದ್ಯಂತ ಪತ್ರಿಕೋದ್ಯಮ ಕ್ಷೇತ್ರದಲ್ಲಿ ತ್ವರಿತ ಗತಿಯಲ್ಲಿ ಬದಲಾವಣೆಗಳು ನಡೆಯುತ್ತಿವೆ. ಕಳೆದ ಹತ್ತು ವರ್ಷಗಳಲ್ಲಿ ವಿದ್ಯುನ್ಮಾನ ಕ್ಷೇತ್ರ ಹೊಸ ಸ್ವರೂಪವನ್ನು ಪಡೆದುಕೊಂಡಿರುವಂತೆ ವೆಬ್ ಜರ್ನಲಿಸಂ, ಕಾರ್ಪೋರೇಟ್ ಜರ್ನಲಿಸಂ, ಇವೆಂಟ್ ಮ್ಯಾನೇಜ್ಮೆಂಟ್, ಸೋಷಿಯಲ್ ಮೀಡಿಯಾ ಮ್ಯಾನೇಜ್ಮೆಂಟ್ ಹೀಗೆ ಹಲವು ಶಾಖೆಗಳು ಪತ್ರಿಕೋದ್ಯಮವನ್ನು ಬಹುಮುಖಿಯಾಗಿಸಿವೆ. ಈ ಹೊಸ ಸಾಧ್ಯತೆಗಳಿಗೆ ಅನುಗುಣವಾಗಿ ಸ್ನಾತಕೋತ್ತರ ಡಿಪ್ಲೋಮೋವನ್ನು ರೂಪಿಸಲಾಗಿದ್ದು ಇದು ಉದ್ಯೋಗ ಅವಕಾಶಗಳ ವಿಪುಲ ಸಾಧ್ಯತೆಯನ್ನು ಒದಗಿಸಲಿದೆ.
ಪರಿಣಿತ ಶಿಕ್ಷಕರು
ಕಳೆದ ಮೂರು ದಶಕಗಳಿಂದ ವಿವಿಧ ಪತ್ರಿಕೆಗಳ ಪ್ರಮುಖ ಹುದ್ದೆಯನ್ನು ನಿರ್ವಹಿಸುರಿವ ಉತ್ತಮ ಬರಹಗಾರರಾಗಿಯೂ ಹೆಸರು ಮಾಡಿರುವ ಎನ್.ಎಸ್. ಶ್ರೀಧರ ಮೂರ್ತಿ ಈ ಕೋರ್ಸ್ನ ಹೊಣೆಗಾರಿಕೆಯನ್ನು ನಿರ್ವಹಿಸಲಿದ್ದು ಅವರೊಂದಿಗೆ ಅನುಭವಿ ಪತ್ರಕರ್ತರ ತಂಡ ಕಾರ್ಯ ನಿರ್ವಹಿಸಲಿದೆ. ಪರಿಣಿತ ಸಹಕಾರವೂ ಕೋರ್ಸ್ಗೆ ಇದ್ದು ತರಗತಿಯ ಪಾಠಗಳ ಜೊತೆಗೆ ವಿಶೇಷ ಉಪನ್ಯಾಸಗಳೂ ವಿಚಾರ ಸಂಕಿರಣಗಳೂ ಕೂಡ ಏರ್ಪಾಟಾಗಲಿವೆ.
ಉದ್ಯೋಗ ಅವಕಾಶಗಳು
ಸ್ನಾತಕೋತ್ತರ ಡಿಪ್ಲೋಮೋವನ್ನು ರೂಪಿಸುವಾಗಲೇ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶವನ್ನು ಪಡೆಯುವ ಸಾಧ್ಯತೆ ಕುರಿತು ಗಮನ ನೀಡಲಾಗಿದೆ. ಪತ್ರಿಕೋದ್ಯಮ, ವಿದ್ಯುನ್ಮಾನ ಕ್ಷೇತ್ರ, ಉದ್ಘೋಷಣೆ, ಕಾರ್ಯಕ್ರಮ ನಿರ್ವಹಣೆ, ಸಾರ್ವಜನಿಕ ಸಂಪರ್ಕ, ವೆಬ್ ಪತ್ರಿಕೋದ್ಯಮ, ಸೋಷಿಯಲ್ ಮೀಡಿಯಾಗಳ ನಿರ್ವಹಣೆ, ಅನುವಾದ ಮತ್ತು ಮಾಹಿತಿ ಸಂಗ್ರಹಣ, ಚಲನಚಿತ್ರ ಮತ್ತು ಸಾಕ್ಷಚಿತ್ರಗಳ ನಿರ್ಮಾಣ, ನಿರ್ದೇಶನ, ಕಾಪಿ ರೈಟರ್, ಮಾರ್ಕೆಟಿಂಗ್ ಸ್ಟ್ರಾಟಜಿಸ್ಟ್ ಸೇರಿದಂತೆ ಹಲವು ಮಾದರಿಯ ಉದ್ಯೋಗಾವಕಾಶಗಳು ಇಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಲಭ್ಯವಾಗಲಿದೆ.
(ತರಗತಿಯ ವೇಳೆ: ಬೆಳಗಿನ 7.45ರಿಂದ 9.15)
ಪ್ರವೇಶಕ್ಕೆ ಮತ್ತು ಇತರ ವಿವರಗಳಿಗೆ ಬೆಳಿಗ್ಗೆ 10ರಿಂದ ಸಂಜೆ ೬ ಗಂಟೆಯವರೆಗೆ
ಕಚೇರಿಯನ್ನು ಸಂಪರ್ಕಿಸ ಬಹುದು
ಎಚ್.ಬಿ.ಕಾಲೇಜ್ ಆಫ್ ಕಮ್ಯೂನಿಕೇಷನ್ ಮತ್ತು ಮ್ಯಾನೇಜ್ಮೆಂಟ್
43, ರೇಸ್ ಕೋರ್ಸ್ ರಸ್ತೆ, ಹೋಟಲ್ ಚಾಲುಕ್ಯ ಸಮೀಪ, ಬೆಂಗಳೂರು-560 001
ದೂರವಾಣಿ: 22201959, 22267421 ಮೊಬೈಲ್: 9538181140/99800 55864
Email: hbcollege18@yahoo.co.in Website: www.hbcollege.org





0 Comments