ಪಡೆಯುವುದಕ್ಕಿ೦ತ, ಕೊಟ್ಟು ಆತ ಕೃಷ್ಣನಾದ….
ರಾವಣ, ಕೀಚಕ, ವಾಲಿ – ಇವರೆಲ್ಲರೂ ಹೆಣ್ಣಿನ ಹಿಂದೆ ಬಿದ್ದವರೇ. ಕೃಷ್ಣ ಕೂಡ. ಆದರೆ ಅವರೆಲ್ಲ ಆಯಾ ಹೆಣ್ಣುಗಳಿಂದ ಏನೋ ಪಡೆಯಲೆತ್ನಿಸಿದವರು. ಕೃಷ್ಣ ಬರೀ ಕೊಡಲು ಯತ್ನಿಸಿದವ. Mostly, ಪಡೆಯುವದಕ್ಕಿಂತ ಕೊಡುವದು ಆತನಿಗೆ ಬಹುಶಃ ಸುಲಭವಾಗಿ ಕಂಡಿರಬೇಕು. ಅಥವಾ ಹಾಗೆ ಕೊಡುವದರಿಂದ ಮಾತ್ರ ಪಡೆಯುವದು ಸಾಧ್ಯ ಅಂತ ಅನಿಸಿರಬೇಕು.
ಒಮ್ಮೆ ಭಗವಂತನಿಗೆ ಆತನದೇ ಅಂತಃಶಕ್ತಿ ಕೇಳಿತಂತೆ: “ಏನೂ? ಬರೀ ನೀನೇ ಎಲ್ಲಾ ಕಡೆ show ಕೊಡುತ್ತ ನನ್ನನ್ನು ಮಾತ್ರ ಶೇಷನಾಗ, ಗರುಡ, ಲಕ್ಷ್ಮಣ ಮುಂತಾದ ಪಾತ್ರಗಳಿಗೆ ಸೀಮಿತನಾಗಿಸುತ್ತೀಯಲ್ಲ..” ಅಂತ. ಆಗ ಭಗವಂತ, “ಆಯ್ತು,ಒಮ್ಮೆ ನನ್ನ ಅಣ್ಣನಾಗು..” ಅಂತ ನಕ್ಕನಂತೆ. ಹಾಗೆ ಹುಟ್ಟಿದ್ದು ಬಲರಾಮ. ಹೀಗೆ ಕೃಷ್ಣ ತನ್ನ ನಂಬಿ ಬಂದವರಿಗೆಲ್ಲ ಜಾಗಬಿಟ್ಟು ಔದಾರ್ಯ ಮೆರೆಯಬಲ್ಲ. ತಮ್ಮನಾಗಿಯೂ ದೊಡ್ದವನಾಗಬಲ್ಲ. ಆತನಿಗೆ ಯಾರ ಕುಪ್ಪಸ ಕದಿಯಬೇಕೆಂಬ ಪ್ರಜ್ಞೆಯಿದೆ. ಯಾರಿಗೆ ಸೀರೆ ಕೊಡಬೇಕೆಂಬ ಅರಿವಿದೆ. ಹಾಗೆಯೇ ಯಾರಿಗೆ ವಿಶ್ವರೂಪ ತೋರಿಸಬೇಕೆಂಬ ಜವಾಬ್ದಾರಿಯಿದೆ. ಆತ ಪ್ರೀತಿಗಾಗಿ ತಂಗಿಯನ್ನು ಓಡಿಸಬಲ್ಲ; ಪ್ರೇಮಕ್ಕಾಗಿ ತಾನೇ ಓಡಬಲ್ಲ. ಪೂಜಿಸಲೆಂದು ಇಡೀ ಜಗತ್ತಿಗೆ ಮುಕ್ಕಾಲು ಕೋಟಿ ದೇವರುಗಳನ್ನು ಸೃಷ್ಟಿಸಿಕೊಟ್ಟು ತಾನು ಮಾತ್ರ ಕಳ್ಳ, ಸುಳ್ಳ, ಉಲಕೋಚಿ, ಕಪಟನಾಟಕ ಸೂತ್ರಧಾರಿಯೆಂದು ಬಿಂಬಿಸಿಕೊಳ್ಳುತ್ತ, ಯಾರ್ಯಾರದೋ ಕನಸಿಗೆ ಕಮಾನು ಕಟ್ಟುತ್ತಲೇ ಹಲವಾರು ಮನಸುಗಳನ್ನು ಸಂತೈಸುತ್ತ ಇದ್ದುಬಿಡಬಲ್ಲ.ಬಹುಶಃ ಅವನಿರುವದು-ಪೂಜೆಗಲ್ಲ; ಆರಾಧನೆಗೆ!
ಹೀಗಿರುವಾಗ, ಹೆಣ್ಣೊಬ್ಬಳು ರಾಮನಂಥ ಗಂಡನಲ್ಲೂ ಇಂಥ ಕೃಷ್ಣನಿಗಾಗಿ ಆಗಾಗ ಹುಡುಕಾಡಿದರೆ, ಹಂಬಲಿಸಿದರೆ ಅದು ವ್ಯಾಸರ ತಪ್ಪೇ?
]]>
ನಿಮಗೆ ಇವೂ ಇಷ್ಟವಾಗಬಹುದು…






ಅಹುದಹುದು ರಾಘಣ್ಣಾ… ಒಪ್ಪಿದೆ…
ಬೋ ಪಸಂದಾಗದೆ ರಾಘಣ್ಣಜೀ .
Wow nice Sir. i like this article.:-)
Yes….your thought is right