ಇಲ್ಲೇ ಇರು ಅಲ್ಲಿ ಹೋಗಿ ಮಲ್ಲಿಗೆಯನು ತರುವೆನು…
ನೇಹಕೆಂದು ನಲುಮೆಗೊಂದು ಗುರುತನಿರಿಸಿ ಬರುವೆನು.
ಹೀಗೆಂದು ಹಾಡಿದವರು ಕನ್ನಡಕ್ಕೆ ಐದನೆಯ ಜ್ಞಾನಪೀಠ ಪ್ರಶಸ್ತಿ ಅರಸಿಬರಲು ಕಾರಣರಾದ ನಮ್ಮ ಹೆಮ್ಮೆಯ ಕವಿ ಡಾ. ವಿನಾಯಕ ಕೃಷ್ಣ ಗೋಕಾಕರು.
ಇಂದು ಅವರ 104 ನೆಯ ಜನ್ಮದಿನ. ಬೇಂದ್ರೆ ನೇತೃತ್ವದ ಗೆಳೆಯರ ಗುಂಪಿನ ಪ್ರಮುಖ ಸದಸ್ಯರಲ್ಲೊಬ್ಬರಾಗಿದ್ದ ಗೋಕಾಕರು ಶಿಕ್ಷಣತಜ್ಞರಾಗಿ ಕನ್ನಡಕ್ಕೆ ಸಲ್ಲಿಸಿದ ಸೇವೆ ಅನುಪಮವಾದದ್ದು.
ಅವರ ಜೊತೆ ಒಂದಷ್ಟು ಸಮಯ ಕಳೆಯುವ ಅಲಭ್ಯ ಅವಕಾಶ ಪಡೆದ ನಾನು ಧನ್ಯನೆಂಬ ಭಾವ ನನ್ನದು.
ಅವರಿಗೊಂದು ನಮನ.
]]>







0 Comments