ವೀಣಾ ಭಟ್
” ರೀ .., ಈ ಸಲ ಹೊಸ ವರ್ಷದ ಪಾರ್ಟಿ ಹೇಗೆ ಮಾಡೋಣ ..?
ಏನಾದರೂ ಚೆನ್ನಾಗಿರೋ ಐಡಿಯಾ ಕೊಡ್ರಿ…”
” ನಾನು ಹೊಸ ಕ್ಲಬ್ ನಲ್ಲಿ ಮೆಂಬರ್ ಆಗಿದೀನಲ್ವ ..ಅಲ್ಲಿ ಹೋಗೋಣ್ವಾ ..?
ಸಂಗೀತ ಪ್ರೊಗ್ರಾಮ್ ಕೂಡಾ ಇದೆ .”
“ಬೇಡ …ಈ ಸಲ ಮನೆಯಲ್ಲೇ ಮಾಡೋಣ….ದಿಫ್ಫೆರೆಂಟ್ ಆಗಿರುತ್ತೆ …”
” ಸರಿ ,ಏನ್ ನಿನ್ ಐಡಿಯಾ ಹೇಳ್ಬಿಡು …ಒಂದೇ ವಾಕ್ಯ ಹೇಳುವಷ್ಟು ಕಾಲಾವಕಾಶ ಅಷ್ಟೇ.
ಉದ್ದುದ್ದ ಭಾಷಣ ಕೊಡಬೇಡ …”
” ಆಯ್ತು….ಆಯ್ತು …ಈ ಎರಡು ಶಬ್ಧಗಳು ಆ ಒಂದು ವಾಕ್ಯಕ್ಕೆ ಸೇರೋಲ್ಲ….
ನನ್ ಐಡಿಯಾ ಏನಂದ್ರೆ…..
ನಾವು ಮನೆ ಎಲ್ಲಾ ಕ್ಲೀನ್ ಮಾಡೋಣ ..
ಈ ಸಲ ನೀವು ಹೊಸ ಪಟ್ಟಿ ಮಾಡೋದು ಏನೂ ಬೇಡ ….
ನೀವು ಕಳೆದ ವರ್ಷ ನ್ಯೂ ಇಯರ್ resolution ಅಂತ ಕೂತ್ಕೊಂಡು ಒಂದು ದೊಡ್ಡ ಪಟ್ಟಿ ಮಾಡಿದೀರಲ್ವಾ….,
ಅದನ್ನು ಓದೋಣ .ಅದರಲ್ಲಿ ಒಂದೇ ಒಂದು ಕೂಡಾ ನೀವು ಪಾಲಿಸಿಲ್ಲ.
ನಿಮ್ ಬುಕ್ ಶೆಲ್ಫ್ ಕ್ಲೀನ್ ಮಾಡ್ತೀನಿ ಅಂದಿದ್ರಿ…
ನಿಮಗೆ ಇಷ್ಟದ ಸ್ವೀಟ್ ತಿನ್ನಲ್ಲ ಅಂತ ಹೇಳ್ತಾ ಇದ್ರಿ….
ನನ್ನ ಬಟ್ಟೆ ಎಲ್ಲಾ ನಾನೇ ಇಸ್ತ್ರಿ ಮಾಡ್ಕೋತೀನಿ …
ಅವಾಗಾವಾಗ ತರಕಾರೀನೂ ತಂದ್ಕೊಡ್ತೀನಿ …
ನಿನಗೆ ಮನೆ ಕೆಲಸದಲ್ಲಿ ಸಹಾಯ ಮಾಡ್ತೀನಿ ,
ನಿಂಗೆ ಕಂಡ್ರೆ ಆಗದೆ ಇರೋ ಆ ಬೂದು ಬಣ್ಣದ ಶರ್ಟ್ ಹಾಕೋಲ್ಲ ಅಂತೆಲ್ಲ ..
ಎಷ್ಟೊಂದು ಹಸಿ ಹಸಿ ಸುಳ್ಳು ಹೇಳಿದ್ರಿ.ನಂಗೆ ಎಲ್ಲಾ ನೆನಪಿದೆ….
ಈ ವರ್ಷ ಆದರೂ ಅದನ್ನೆಲ್ಲಾ ಮಾಡಲೇಬೇಕು …”
” ಓಕೆ …ಓಕೆ….ನೀನು ಬರೀ ನನ್ ತಪ್ಪುಗಳನ್ನೇ ಹೇಳ್ಕೊಂಡಿದ್ರೆ ನಾನೇನು ಒಪ್ಕೋತೀನಿ ಅಂದ್ಕೊಂಡ್ಯಾ …
ನಿನ್ನ resolutions ಏನಿತ್ತು ಹೇಳು ನೋಡೋಣ…..ಒಂದಾದರೂ ನೆನಪಿದ್ಯಾ…
ವಾರಕ್ಕೆ ನಾಲಕ್ಕು ದಿನ ನಂಗೆ ಆಗದೆ ಇರೋ ಅಡಿಗೆ ಮಾಡ್ತ್ಯ …
ಹೇಳಿದ್ರೆ ಅದರಲ್ಲಿ ಅಷ್ಟು ಸತ್ವಾಂಶಗಳಿವೆ…
ಆ ತರಕಾರಿ ತಿಂದರೆ ಆಯುಷ್ಯ ಹೆಚ್ಚುತ್ತೆ ,ಡಯಾಬಿಟಿಸ್ ಬರಲ್ಲ ,
ಬಿಪಿ ಬರಲ್ಲ ಅಂತೆಲ್ಲ ಶುರು ಮಾಡ್ತೀಯ .
ನಿನ್ನ ಭಾಷಣ ಕೇಳೋ ಬದಲು ತಿನ್ನೋದೇ ವಾಸಿ ಅಂತ ಕಣ್ಣು ಮುಚ್ಚಿ ತಿಂತೀನಿ .. ..
ನಿನಗೇನು ಗೊತ್ತು ನನ್ನ ಕಷ್ಟ….
ಆಫೀಸಿಂದ ಬಂದ್ರೆ ಕಾಫಿ ಕೊಡೋದಕ್ಕೆ ಎಷ್ಟು ಹೊತ್ತು ಮಾಡ್ತೀಯ …..”
“ಅಯ್ಯೋ ..ರಾಮ ….ಏನ್ರೀ ಹೀಗೆ ಹೇಳ್ತಾ ಇದೀರಾ …ಎಲ್ಲಾ ಗಂಡಸರ ಕತೆ ಇಷ್ಟೇ …
ನಾನು ಏನೋ ನೀವೂ ಸ್ವಲ್ಪ ಸ್ಲಿಮ್ ಆಗಿ ಸ್ಮಾರ್ಟ್ ಕಾಣಲಿ ಅಂತ ಎಲ್ಲಾ ಮಾಡ್ತಾ ಇದ್ದೆ.
ನೀವು ನೋಡಿದ್ರೆ ಹೀಗಂತೀರ….ನೀವು ಬೆಳಗ್ಗೆ ವಾಕಿಂಗ್ ಹೋಗಿ ಬರೋವಾಗ
ಎಂಟಿಆರ್ ನಲ್ಲಿ ದೋಸೆ ತಿಂದು ಬರೋದು ನಂಗೊತ್ತಿಲ್ಲ ಅಂದ್ಕೊಂಡ್ರಾ…
ವಾರಕ್ಕೆರಡು ಫ್ರೆಂಡ್ಸ್ ಜೊತೆ ಪಾರ್ಟಿ.. ಇದೆಲ್ಲಾ ಏನು …? ”
“ಈಗ ನೀನು ಹೇಳಿದ ಹಾಗೇ ಆಗಬೇಕು ..ಅಷ್ಟೇ ತಾನೆ..? ಸರಿ …
ನೀನು ಸಾಮಾನು ಪಟ್ಟಿ ಮಾಡು. ಕ್ಲೀನಿಂಗ್ items ಯಾವ
ಯಾವುದು ಬೇಕಂತ ಎಲ್ಲಾ ಬರೆದು ಬಿಡು.
ಡಿಸೆಂಬರ್ 31 ರ ಒಳಗೆ ಎಲ್ಲಾ ಕೆಲಸ ಮುಗಿಸಿ ಮನೆ ಎಲ್ಲಾ ಅಲಂಕಾರ ಮಾಡೋಣ .
ನೀನು ನ್ಯೂ ಇಯರ್ ಕೇಕ್ ಮಾಡ್ಬಿಡು . ಚಾಕಲೇಟ್ ಐಸಿಂಗ್ ಇರಲಿ.
ಆದರೆ ಆವತ್ತಿನ ಹಾಗೆ ಡಿಸಾಸ್ಟರ್ ಕೇಕ್ ಆಗಬಾರದಷ್ಟೇ ….
ರಾತ್ರಿ ಹನ್ನೆರಡು ಗಂಟೆಗೇ ಕಟ್ ಮಾಡೋಣ.ಮಜಾ ಇರುತ್ತೆ….. ”
” ಅಬ್ಬಾ …ಅಬ್ಬಾ….ಒಂದು ಸಲ ಹಾಳಾದ ಕೇಕ್ ಬಗ್ಗೆ ಎಷ್ಟು ಸಲ ಹೇಳಿ ತಮಾಷೆ ಮಾಡ್ತೀರ ..
ಮಾಡಿ..ಮಾಡಿ…ನಿಮ್ ತಮಾಷೆಗೆ ನಾನು ಕೇರ್ ಮಾಡೋಲ್ಲ …..
ನಿಮ್ ಕತೆಗಳನ್ನ ಬರೀತಾ ಹೋದ್ರೆ ಒಂದು ದೊಡ್ಡ ಗ್ರಂಥಾನೆ ಆಗುತ್ತೆ ಬಿಡಿ….”
“ನೀನು ಹಳೇ ಕತೆಗಳನ್ನೆಲ್ಲಾ ಹೇಳ್ಕೊಂಡು ಟೈಮ್ ವೇಸ್ಟ್ ಮಾಡಬೇಡ …
ಬೇಗ ಲಿಸ್ಟ್ ಮಾಡು ….
ಲಿಸ್ಟ್ ನಲ್ಲಿ ಚಾಕಲೇಟ್ ಮತ್ತು ಗೋಡಂಬಿ ಬರ್ಫಿ ಕೂಡಾ ಬರೆದುಬಿಡು.
ನಿನ್ನ ಕೇಕ್ ಹಾಳಾದ್ರೆ ತಿನ್ನೋದಕ್ಕೆ ಬೇಕಲ್ವಾ….”
“ವಾವ್ …ಪಾರ್ಟಿ ಅಂದ್ರೆ ಹೀಗಿರಬೇಕು…..
ನಿಮ್ಮ ಫ್ರೆಂಡ್ಸ್ ಗೂ ಸ್ವಲ್ಪ ಹೇಳಿ ….
ನಿಮ್ಮದು ಬರೀ ಹೊಟ್ಟೆ ಪೂಜೆ ….
ಇದರ ಜೊತೆ ಸ್ವಲ್ಪ ದೇಶ ಸೇವೇನೂ ಇರಲಿ …
ಏನಂತೀರಾ ಬಾಸ್ ….
ಲಂಚ ಕೊಡಲ್ಲ ,ಲಂಚ ತೆಗೆದುಕೊಳ್ಳಲ್ಲ….
ಟೈಮ್ ವೇಸ್ಟ್ ಮಾಡೋಲ್ಲ ,
ಎಲ್ಲದರಲ್ಲೂ ಶಿಸ್ತು …
ಗಂಡನ ಟೈಮ್ ಕೂಡಾ ಮ್ಯಾನೇಜ್ ಮಾಡ್ತೀನಿ …
ಡಯಟ್ ಮಾಡ್ತೀನಿ ..
ಇಷ್ಟದ ಅಡುಗೆ ಮಾಡೋದೇ ಇಲ್ಲ [ಹೋಟೇಲಲ್ಲಿ ತಿಂತೀನಿ]
ಇತ್ಯಾದಿ…ಇತ್ಯಾದಿ….”
“ಹೂಂ ….ಈ ಜನ್ಮದಲ್ಲಂತೂ ಇವಳಿಗೆ ಬುದ್ಧಿ ಬರೋಲ್ಲ .
ಇಷ್ಟೆಲ್ಲಾ ಮಾಡಿದ ಮೇಲೆ ನ್ಯೂ ಇಯರ್ ಪಾರ್ಟಿ ಮಾಡೋ ಸ್ಥಿತೀಲಿ ಇರ್ತೀನೋ
ಇಲ್ವೋ …..? ಹೊಸ ವರ್ಷದ ಸೂರ್ಯ ಕರುಣೆ ತೋರಪ್ಪಾ …..!!!!
2012 ರಲ್ಲಿ ಪ್ರಳಯ … ..ಇನ್ನೇನು ಕಾದಿದೆಯೋ ….
ಮನೆಯಲ್ಲಂತೂ ಪ್ರಳಯ ಕಾದಿದೆ ..ಅದು ಖಂಡಿತಾ……!!!”
—-








cake sari aadre nange dodda tundu kalsi 🙂
ಹ ಹ ಹ ಹ…”ನಿನ್ನ ಭಾಷಣ ಕೇಳೋ ಬದ್ಲು ತಿನ್ನೋದೇ ವಾಸಿ ಅಂತ ಕಣ್ಮುಚ್ಚಿ ತಿಂತೀನಿ…” ಈ ಸಾಲು ತುಂಬಾ ಇಷ್ಟ ಆಯ್ತು.
idu namma mane story tara ide !!!
Very Nice
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು…..:)