ತುದಿಗಾಲಿನ ತೂಕ
-ಮಲ್ಲಮ್ಮ ಯಾಟಗಲ್
ನೆಲಕ್ಕೆ ಮುಕ್ಕಿದ ಗಾಜೀನ ಚೂರುಗಳು
ಮುಗಿಲು ನೋಡಿದಾಗ
ನಕ್ಷತ್ರಗಳೆಲ್ಲವೂ ಮಂದವಾಗಿ
ನೀನು ಕೊಟ್ಟು ಹೋದ
ಕೆಟ್ಟ ನೆನಪುಗಳೆ ದಿನಾಲು ಪ್ರಜ್ವಲಿಸುತ್ತಿವೆ
ಹೆಪ್ಪುಗಟ್ಟಿ ಭಾವನೆಗಳಿಗೆ
ನಿನ್ನೆದೆಯ ಕಾವಿಗಾಗಿ ಕಾದು ಕುಳಿತ
ನೊಂದ ಹಕ್ಕಿಯ ಹಾಡು
ತಿಳಿಯದ ಸೋತ ಜಗಕ್ಕೆ
ನಿಮ್ಮ ಸಾಂತ್ವನದ ಕೂಗು ಯಾರಿಗೆ ಬೇಕು?
ಜಂಗಮನಾಗಬೇಕು ಈಗ
ಜೋಳಿಗೆಯಲ್ಲಿ ಬೀಳುವ
ಕನಸುಗಳಿಗೆ ನೀನು ಕಾವಲುಗಾರನಾಗದೆ
ಬೀದಿಯಲ್ಲಿ ಬಿಕ್ಷುಕನಾಗಿ ಅಲೆಯುವ
ಬೀಕಾರಿಗೆ ಈ ಮೋಕ್ಷ ಬೇಕೆ…?
ಈಗ ಅಂಧಕನಾಗಿದ್ದೇನೆ
ಬಿಳಿಯ ಕಣ್ಣು ಗುಡ್ಡೆಯ ಮುಂದೆ
ಜೋತು ಬಿದ್ದಿವೆ ನೂರಾರು ಕನ್ನಡಿಗಳ ಪರದೆ
ನಾನು ಕಾಣಲಾರದನ್ನು
ಒಳಗಣ್ಣು, ಎದುರುಗಣ್ಣು, ನೋಡುತಿದೆ
ಎನ್ನುವ ಸಮಾಧಾನ..
ಜೀವ ತುದಿ ತುಟಿಯಲ್ಲಿ ನಿಂತ
ತಕ್ಕಡಿಯ ಮುಳ್ಳಿನಂತೆ
ಈ ಕಡೆ ಕಡಿಮೆಯಾದರೆ ಆ ಕಡೆ ಭಾರವೆ !
ಆ ಕಡೆ ಕಡಿಮೆಯಾದರು ಈ ಕಡೆ ಭಾರವೆ.!
ತುದಿಗಾಲಿನ ತೂಕ ತೂಕದಷ್ಟು ನೋವೆ..






0 Comments