
ಪ್ರಿಯ ಜೋಗಿ

ತುಂಬ ಸಮಚಿತ್ತದಿಂದ ಬರೆದಿದ್ದೀರಿ. ನನಗೆ ಅಂಥ ಸ್ಥಿತಿ ಸಾಧ್ಯವಿರುತ್ತಿದ್ದರೆ ಎಂದುಕೊಳ್ಳುತ್ತೇನೆ!
ಡಾ. ಮೋಹನ ಆಳ್ವರ ಜನಸೇವೆಯ ಬಗ್ಗೆ ಕೇಳಿದ್ದೇನೆ: ಸಾಹಿತ್ಯ ಮತ್ತು ಶಿಕ್ಷಣದ ಮೂಲಕ. ಅದನ್ನು ಮೆಚ್ಚುವುದು ಸಂಸ್ಕೃತಿಯ ಲಕ್ಷಣ. ಬದಲು ಕಲ್ಲೆಸೆಯಲು ಮುಂದಾಗುವುದಲ್ಲ. ಜೀಸಸ್ ಹೇಳಿದ್ದು ನೆನಪಿರಲಿ!
ಜೀಸಸ್ ಎಂದೊಡನೆ ನೆನಪಿಗೆ ಬಂದುದು, ಭಾರತದ ಉದ್ದಗಲಕ್ಕೆ ಕ್ರಿಶ್ಚಿಯನ್ ಮಿಶನರಿಗಳು ಮಾಡುತ್ತ ಬಂದಿರುವ ಸೇವೆ. ಇಗ್ನೇಶಿಯಸ್ ಲೊಯೊಲಾ ಒಬ್ಬ ಕಟ್ಟಾ ಪೋಪಿಸ್ಟ್ ಆಗಿದ್ದ; ಆದರೆ ಅವನಿಂದಾಗಿ ಶಿಕ್ಷಣಕ್ಕೆ ಆದ ಸೇವೆಯನ್ನು ಹೇಗೆ ಮರೆಯಲಿ?
ಮೋಹನ ಆಳ್ವರಿಗೂ ಅವರದೇ ಒಲವುಗಳಿರಬಹುದು; ಯಾರಿಗಿಲ್ಲ? ಅಷ್ಟಕ್ಕೆ ಅವರನ್ನು ಸಾಮಾಜಿಕವಾಗಿ ದೂರವಿಟ್ಟರೆ ಅದು self-righteousness-ನ ಪರಮಾವಧಿಯಾಗುತ್ತದೆ.
ಹೀಗೆ ಜನರನ್ನು ದೂರವಿಡುತ್ತ ಹೋದರೆ ಉಳಿಯುವುದೇನು?
ಕೆ.ವಿ. ತಿರುಮಲೇಶ್





0 Comments