ನೀವು ನಾಟಕ ನೋಡ್ತೀರಿ.. ನಾಟಕದ ರಿಹರ್ಸಲ್ ನೋಡಿದ್ದೀರಾ? ಇಲ್ಲಾ ತಾನೇ.. ಹಾಗಾದ್ರೆ ಹೀಗೆ ಬನ್ನಿ
ನೀವು ರಂಗದ ಮೇಲೆ ನಾಟಕ ನೋಡುವಾಗ ಅದರಲಿ ಅದ್ಭುತ ಅಚ್ಚುಕಟ್ಟುತನ ಇರುತ್ತೆ. ನಾಟಕದ ರಿಹರ್ಸಲ್ ಅನ್ನೋದು ಸರಿಸುಮಾರು ಒಂದು ತಿಂಗಳು, ಹತ್ತಾರು ಜನ, ಒಂದು ಕಿಲ ಕಿಲ ಎನ್ನುವ ಕುಟುಂಬವನ್ನೂ ಕಟ್ಟೋ ರೀತಿ ಇರುತ್ತೆ.
ನಿರ್ದೇಶಕರ ಸಿಟ್ಟು, ನಟರ ಗುಸು ಗುಸು, ಗಂಭೀರ ಸೀನ್ ನ ರಿಹರ್ಸಲ್ ಮಧ್ಯೆ ಗೊಳ್ಳನೆ ನಗು, ಎರಡು ಪಾತ್ರ ರಿಹರ್ಸಲ್ ನಲ್ಲಿದ್ದರೆ ಮೂರನೆಯ ಪಾತ್ರ ಅವರ ಕಾಲೆಳೆಯೋದು, ಚಿತ್ರಾನ್ನ ಇಲ್ಲವೇ ಉಪ್ಪಿಟ್ಟು, ಬೇಕಾದಷ್ಟು ಸಲ ಟೀ ಕಾಫಿ, ರಿಹರ್ಸಲ್ ಮಾಡೋದಿಕ್ಕೆ ಜಾಗಕ್ಕಾಗಿ ಪರದಾಟ, ರಿಹರ್ಸಲ್ ಮಾಡುವಾಗ ಜೋರಾಗಿ ಕೂಗಬೇಡಿ ಅಂತ ಅಕ್ಕ ಪಕ್ಕದ ಜನರ ಆಕ್ರೋಶ, ಹಾಡು ಕುಣಿತ ಅಳು ನಗು ಕೇಕೆ ಬಿಂಕ ಬಿಗುಮಾನ ಹೆಜ್ಜೆ ಗೆಜ್ಜೆ ಈ ಎಲ್ಲವನ್ನೂ ಒಟ್ಟಿಗೇ ಹಾಕಿದರೆ ಹುಟ್ಟೋದೆ ನಾಟಕ
ಒಂದು ತಿಂಗಳಷ್ಟು ಕಾಲದ ಕಥೆಗೆ ಈಗ ಎಂಟ್ರಿ ಕೊಡಿ
ಇಲ್ಲಿರೋದು ಎನ್ ಮಂಗಳ ಸಂಚಾರಿಗಾಗಿ ನಿರ್ದೇಶಿಸಿದ ‘ನರಿಗಳಿಗೇಕೆ ಕೋಡಿಲ್ಲ’ ನಾಟಕದ ಫೋಟೋಸ್.
ಕುವೆಂಪು ಬರೆದ ಮಕ್ಕಳ ನಾಟಕ ಇದು
ಫೋಟೋ ತೆಗೆದಿದ್ದು ಕಾರ್ತೀಕ್.ವಿ.ಎನ್






0 Comments