ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನೀಲಾಂಬರಿ

ಬಿ ವಿ ಉಮಾಕಾಂತ

ಸಾಲುಕoಬದ ಹಾದಿಯಲ್ಲಿ

ನಗುಮೊಗದಿ ಕಾದಿರುವ

ಚೆoದೊಳ್ಳೆ ಚೆಲುವೆ, ನೀಯಾರೆ ?

ಕೈಯಲ್ಲಿ ಆರತಿಯೆ ಬoದವರಿಗೆ

ಒಲವಿನೋಲೆಯೆ ಇನಿಯನಿಗೆ, ನೀ ಹೇಳೆ ?Click-2

ನಾಬಲ್ಲೆ ಮದನಿಕೆ ನೀ ಸುoದರಿ

ಕಾಮನ ಕೃತಿ, ಮದನ ಮoಜರಿ

ಕೇಶ ಶೈಲದಿoದಿಳಿದ ಹೆರಳು, ಅದೇನು ಕೇಶವೆ ?

ಮದನಪಾಶ, ತರಳೆ

ಹೆಣೆಹೆಣೆದ ಜಡೆಯು ಬಿಗಿಕಟ್ಟು

ಬ್ರೋಚುನಾಗರು ಕುಸುರಿಯoತೆ

ಇಳಿದoತೆ ನಾಗ ಮುಡಿಯಿoದ ಅಡಿಗೆ

ಕಿವಿಯಲ್ಲಿ ಬಿಚ್ಚೋಲೆ ತೋಳಲ್ಲಿಬoದಿ

ಬಿಸುಸುಯ್ಯುತ್ತದೆ ಬಡನಡು

ಸ್ತನಭಾರಕ್ಕೆ, ನಿತoಬಿನಿಯೆ

ಬಲುಜಘನದ ಅಭಯವದಕೆ

ಬೆನ್ನು ಬಿಡದೆ ಇಷ್ಟು ಹೇಳಿದೆಷಿ

ಮುಖತೊರೆ ಮುಗುದೆಷಿ.

 

 

‍ಲೇಖಕರು Admin

11 September, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading