ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನೀನು? ಯಾವುದೋ ಬೆಟ್ಟದ ಹಸಿರಲ್ಲಿ..

ರಾಜೇಶ್ವರಿ ಚನ್ನಂಗೋಡ್ 

ಮುಂದಿನ ಸಿಮೆಂಟು ಕಟ್ಟಡದ ಮೈಮೇಲೆ
ಮಳೆಹನಿಗಳು ರಂಗೋಲಿಯಾಗತೊಡಗಿದಂತೆ
ನಿನ್ನೆ ರಾತ್ರಿ ಸರಿದು ಹೋದ
ಮಾತೆಲ್ಲ ಬಂದೆರಗುತ್ತದೆ

ಯಾವ ಯಾಮ? ಎರಡು? ಮೂರು?
ಯಾಮಗಳ ಗಡಿಗಳೆಡೆಯ ಕಂದರಗಳಲ್ಲಿ
ನೀನು ಕಾಣೆಯಾಗುತ್ತೀ
ಮುರಳಿಯ ಸ್ವರವೆಲ್ಲ ಮಳೆಯಾಗುತ್ತಿದೆ.

ನಾನು ಮಳೆಯ ಹನಿಹನಿಯಲ್ಲೂ
ಹಾಡು ಹುಡುಕುತ್ತೇನೆ
ಹಪಹಪಿ, ವಿರಹ, ಪರಿತಾಪಗಳಂಥಾ ಪದಗಳು
ಚೂರೇಚೂರು ತೆರೆದು ನಿಲ್ಲುತ್ತವೆ

ನಿನ್ನ ಧ್ವನಿರಹಿತ ಮಾತುಗಳಲ್ಲಿದ್ದ
ಬಂಧನದಲ್ಲಿ ನಾನು ಮುಲುಗುತ್ತೇನೆ
ಯಾಕೆ ಬರಬೇಕಿಂಥಾ ಮಳೆ?

ಹನಿಸಿ ಹೋಗಾಯ್ತು, ಬೆಳಕು ಮೂಡಾಯ್ತು
ನೀನು? ಯಾವುದೋ ಬೆಟ್ಟದ ಹಸಿರಲ್ಲಿ
ಏನೋ ಹುಡುಕಿ, ಸಿಗದೆ
ಕಂಗಾಲಾಗಿ ಕುಳಿತಿರಬಹುದಾದ
ನೀನು?

‍ಲೇಖಕರು Admin

22 August, 2016

1 Comment

  1. S.p.vijaya Lakshmi

    Beautiful..
    Vijaya lakshmi

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading