ನಿರ್ಲಿಪ್ತ ಬದುಕು

ನವೀನ ಸೊರಬ
ಬುದ್ಧ,
ಆಗ ನೀನು ಶಿಸ್ತಾಗಿ ಧ್ಯಾನಮಾಡಿ
ಎದ್ದಿದ್ದೆಯಲ್ಲಾ ಆ ಬೋಧಿವೃಕ್ಷದ
ಕೆಳಗೆ,
ತಣ್ಣನೆ ನೆರಳಿತ್ತು
ವೃಕ್ಷಕ್ಕೆ ದೊಡ್ಡ ಬಿಳಲಿತ್ತು
ಹಚ್ಚ ಹಸಿರ ಮೆಳೆಗಳಿತ್ತು
ತಣ್ಣನೆಯ ಗಾಳಿ; ನೆಮ್ಮದಿಯ ಗಂಧ
ಅದರಲ್ಲಿ ನನ್ನ ವಂಶಸ್ಥರ ಉಸಿರಿತ್ತು.
ಈಗ ಅದೇ ಮರದ ಕೆಳಗೆ
ನೀನಿಲ್ಲ, ನೆರಳಿಲ್ಲ
ನರಳುವ ಬೋಳು ಮರ
ಅರಳುವ ಹೂವಿಲ್ಲ
ಬೆಯ್ಯುವ ಗಾಳಿ; ಅಶಾಂತಿಯ ದುರ್ಗಂಧ
ಕಾಡು ಬಿಟ್ಟು, ನಾಡ ಶಿಲೆಯಾದ
ನಿನ್ನಂತೆಯೇ ನನ್ನ ಬದುಕು
ನನಗೂ ಈ ನಿರ್ಲಿಪ್ತತೆಯೇ ಸಾಕು..!!





0 Comments