ಕಳೆದ ಎರಡೂವರೆ ದಶಕಗಳಿಂದ ಚಲನಚಿತ್ರ-ಸಂಸ್ಕೃತಿ ಶಿಬಿರಗಳನ್ನು ಪ್ರತಿ ಅಕ್ಟೋಬರ್ನಲ್ಲಿ ನಡೆಸುತ್ತ ಬಂದಿರುವ ನೀನಾಸಮ್ ಈ ವರ್ಷವೂ `ಸಂಸ್ಕೃತಿ ಶಿಬಿರ 2013’ನ್ನು ಸಂಘಟಿಸುತ್ತಿದೆ.
2013 ಅಕ್ಟೋಬರ್ 13ರಿಂದ 19ರವರೆಗೆ ನಡೆಯಲಿರುವ ಈ ಶಿಬಿರದಲ್ಲಿ ರಂಗಭೂಮಿ, ಸಾಹಿತ್ಯ, ಸಂಗೀತ, ನೃತ್ಯ, ಚಲನಚಿತ್ರ ಮುಂತಾದ ಸಾಂಸ್ಕೃತಿಕ ಮಾಧ್ಯಮಗಳ ಸ್ವರೂಪ ಮತ್ತು ಪರಸ್ಪರ ಸಂಬಂಧ, ಹಾಗೂ ಒಟ್ಟೂ ಸಮಾಜದೊಂದಿಗೆ ಸಂಸ್ಕೃತಿಯ ಸಂಬಂಧ – ಈ ವಿಷಯಗಳ ಬಗ್ಗೆ ಕನ್ನಡದ ಹಾಗೂ ಹೊರನಾಡುಗಳ ಅನೇಕ ಗಣ್ಯರು ಉಪನ್ಯಾಸ,ಚರ್ಚೆ, ಪ್ರಾತ್ಯಕ್ಷಿಕೆಗಳನ್ನು ನಡೆಸಿಕೊಡಲಿದ್ದಾರೆ. ಪ್ರತಿದಿನ ಸಂಜೆ ನಾಟಕ, ಸಂಗೀತ, ನೃತ್ಯ ಇತ್ಯಾದಿ ಕಾರ್ಯಕ್ರಮಗಳನ್ನೊಳಗೊಂಡ ಸಾಂಸ್ಕೃತಿಕ ಉತ್ಸವವನ್ನು ಕೂಡಾ ಏರ್ಪಡಿಸಲಾಗಿದೆ.
ಶಿಬಿರದ ಎಲ್ಲ ದಿನಗಳ ಊಟ-ವಸತಿ ಸೇರಿ ಶಿಬಿರದ ಒಟ್ಟು ಶುಲ್ಕ ರೂ. 2500-00 (ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಿಂದ ದೃಢೀಕರಣ ಪತ್ರ ತರುವ ವಿದ್ಯಾರ್ಥಿಗಳಿಗೆ ರೂ. 2000). ಸಾಂಸ್ಕೃತಿಕ ಕಾರ್ಯಕರ್ತರು, ಶಿಕ್ಷಕರು, ವಿದ್ಯಾರ್ಥಿಗಳು, ಪತ್ರಕರ್ತರು ಹಾಗೂ ಗ್ರಾಮೀಣ ಪ್ರದೇಶದ ಆಸಕ್ತರುಗಳಿಗೆ ಶಿಬಿರದಲ್ಲಿ ಆದ್ಯತೆ ಇರುತ್ತದೆ. ಭಾಗವಹಿಸಲಿಚ್ಛಿಸುವವರು ಅಭ್ಯರ್ಥಿ ಪತ್ರವನ್ನು ತರಿಸಿಕೊಂಡು ತುಂಬಿ – ನೀನಾಸಮ್ ಸಂಸ್ಕೃತಿ ಶಿಬಿರ, ಹೆಗ್ಗೋಡು, ಸಾಗರ, ಕರ್ನಾಟಕ 577 417 – ಈ ವಿಳಾಸಕ್ಕೆ ಸೆಪ್ಟೆಂಬರ್ 30ರ ಒಳಗೆ ತಲುಪುವಂತೆ ಕಳಿಸಿಕೊಡಬೇಕು. ನೀನಾಸಮ್ನ ಅಂತರ್ಜಾಲ ತಾಣ (www.ninasam.org) ದಲ್ಲೂ ಕೂಡ ಅಭ್ಯರ್ಥಿ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಬಹುದು; ಅಥವಾ ನೇರವಾಗಿ ಅಂತರ್ಜಾಲದಲ್ಲೇ ಅಭ್ಯರ್ಥಿ ಪತ್ರವನ್ನು ತುಂಬಿ ಸಲ್ಲಿಸಬಹುದು.
NINASAM CULTURE COURSE 2013
One of Ninasam’s important activities for more than last 2 decades has been the Culture Course, conducted every October. This year, in 2013, Ninasam plans to conduct the Culture Course from 13th to 19th October. Dr. U.R. Anantha Murthy, former chairman of Sahitya Akademi will be the director of this course and several important writers and thinkers from Karnataka and elsewhere will be taking part as resource persons, special invitees or observers, and some 150 participants are likely to attend the course. The Course is designed around a specific theme every year, and organised as a combination of special lectures on the theme, lecture-demonstration-discussions on fundamentals of appreciation of art forms like literature, theatre, film, music, dance, and so on -all this during the day-sessions, and a series of cultural programmes in the evenings, like classical dance and music recitals, theatre and folk art performances, poetry readings, and film screenings.
Fee towards board, lodging & entrance: Rs. 2500 (for 7 days)
Concessional Fee for students: Rs. 2000 (A letter from the head of the educational Institution to be submitted)
Those who wish to attend the course could get the application from the web or from Ninasam office and post the filled in application to Ninasam, Heggodu, Sagara, Shimoga – 577 417
Last date for receiving the applications: September 30.
Online application facility is also available at www.ninasam.org.






ಕಿಡ್ನಿ ಸಮಸ್ಯೆಯಿಂದಾಗಿ ದಿನಕ್ಕೆ ಮೂರು ಬಾರಿ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿರುವ ಅನಂತಮೂರ್ತಿಯವರು ತಮ್ಮೆಲ್ಲ ದೈಹಿಕ ಬಾಧೆಗಳ ನಡುವೆಯೂ ಹೆಗ್ಗೋಡು ಶಿಬಿರಕ್ಕೆ ಬರುತ್ತಾರೆ! ಕನ್ನಡಕ್ಕೆ ಇದಕ್ಕಿಂತ ಹೆಮ್ಮೆ ಬೇರೆ ಇದೆಯೇ?