–ಗೋಪಾಲ ತ್ರಾಸಿ
“ಕಲಾವಿದ ತನ್ನ ತಾನು ಪ್ರೀತಿಸಲು ಕಲಿಯಬೇಕು“ ನಿರ್ಮಲಾ ನಾದನ್.
ಮುಂಬೈನ ಹಿರಿಯ ಕಲಾ ಸಂಸ್ಥೆಯಾದ ಕನ್ನಡ ಕಲಾ ಕೇಂದ್ರ (ರಿ), ಇತ್ತೀಚೆಗೆ ಮುಂಬಯಿಯ ವಿವಿಧೆಡೆ ಸಮಾನ ಮನಸ್ಕ ಸಂಸ್ಥೆಗಳ ಜೊತೆಸೇರಿ ರಂಗ ತರಬೇತಿ ಶಿಬಿರವನ್ನು ಆಯೋಜಿಸಿ ಹಿರಿಕಿರಿಯ ಕಲಾವಿದರ, ರಂಗಾಸಕ್ತರ ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ.
ಈ ಸಂದರ್ಭದಲ್ಲಿ ತರಬೇತಿ ಶಿಬಿರಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಬೆಂಗಳೂರಿನಿಂದ ಆಗಮಿಸಿದ ಪ್ರತಿಭಾವಂತ ರಂಗಕಲಾವಿದೆ, ನಾಟಕ, ಸಿನೆಮಾ ನಿರ್ದೇಶಕಿ ನಿರ್ಮಲಾ ನಾದನ್ ಅವರ ಜೊತೆಗೆ ಕಲಾ ಕೇಂದ್ರದ ಸಯನ್ ಕಛೇರಿಯಲ್ಲಿ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಪ್ರಶ್ನೆ : ಒಂದು ನಾಟಕದ ಪ್ರಯೋಗ ಆದ ಮೇಲೆ ನಟನಾದವ ಏನು ಮಾಡುತ್ತಿರಬೇಕು ?
ನಿರ್ಮಲಾ : ನಟರಂತಲ್ಲ, ರಂಗಭೂಮಿಯಲ್ಲಿ ತೊಡಗಿಸಿಕೊಂಡವರೆಲ್ಲರೂ ನಿರಂತರ Alert ಆಗಿದ್ದು ಸುತ್ತಮುತ್ತ ನಡೆಯುವುದನ್ನು Observe ಮಾಡುತ್ತಿರಬೇಕು. ಭಾಷೆಯ ಮೇಲೆ ತುಸು ಹಿಡಿತ ಸಾಧಿಸಲು ನಿರಂತರ ಓದು ಬಹಳ ಮುಖ್ಯ. ಆದಷ್ಟು ಭಿನ್ನಭಿನ್ನ ರೀತಿಯ Modern Theater, ಜಾನಪದ ನಾಟಕಗಳನ್ನು, ಸಿನೇಮಾಗಳನ್ನೂ ಸಹ ನೋಡುತ್ತಿರಬೇಕು. ಬರೇ ನೋಡೋದಲ್ಲ ಗಮನಿಸಬೇಕು.
ಪ್ರಶ್ನೆ : ಪುಟಗಟ್ಟಲೆ ಉದ್ದುದ್ದ dialogues ಬಾಯಿಪಾಠ ಮಾಡೋ ವಿಶೇಷ ವಿಧಾನಗಳು ಇವೆಯಾ?
ನಿರ್ಮಲಾ.: ವಿಶೇಷ ವಿಧಾನ ಏನಿಲ್ಲ. ಬರೇ ಬಾಯಿಪಾಠ ಮಾಡೋದಕ್ಕಿಂತ ಸಂಭಾಷಣೆಯನ್ನು ಸುಮ್ನೆ ಓದಬೇಕು. ನಂತರ, ಓದಿದ್ದನ್ನು ಪಾತ್ರಕ್ಕೆ ತಕ್ಕಂತೆ ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಓಡಾಡುತ್ತ ಜೋರಾಗಿ ಓದೋದು, ವೇಗವಾಗಿ ಓದೋದು ಸಹ ಸಹಾಯ ಆಗುತ್ತದೆ. ಇದನ್ನೇ ಪಠಣ, ಮನನ, ಧಾರಣ ಮತ್ತು ಪ್ರದರ್ಶನ ಅಂತಾರೆ. Rehersal ಮಾಡುವಾಗ Script ಕೈ ಬಿಟ್ಟು ಮಾಡಬೇಕು. ಸಂಭಾಷಣೆ ಸಂದರ್ಭದಲ್ಲಿ ಮಾತಿನಂತೆ ದೇಹಭಾಷೆ ಸಹ ಮುಖ್ಯ ಆಗುತ್ತದೆ.








0 Comments