ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಿಮ್ಮ ಸುಳ್ಳುಗಳಲ್ಲೇ ಸುಖವಾಗಿರುತ್ತೇವೆ..

ವಿನಂತಿ

ವನಮಾಲಾ ಸಂಪನ್ನಕುಮಾರ

ವೇದಿಕೆಯಲ್ಲಿ
ನಿಮ್ಮ ಭಾಷಣಕ್ಕೆ
ಚಪ್ಪಾಳೆ ತಟ್ಟಿದೆವು

ಪತ್ರಿಕೆಗಳಲ್ಲಿ
ಆಪ್ತಸಲಹೆಗಳನ್ನೋದಿ
ತಂಪಾದೆವು

ಕೃತಿಗಳಲ್ಲಿ
ಎದ್ದು ಚಿಮ್ಮುವ
ಮಾನವೀಯತೆಯ ಬುಗ್ಗೆಗಳಲ್ಲಿ
ಮಿಂದೆದ್ದೆವು

 

ನಿಮ್ಮ ಹೊರಗನ್ನಷ್ಟೇ ನೋಡಿ
ಕೃತಾರ್ಥರಾಗಿರುವ ನಮಗೆ
ನಿಮ್ಮೆದೆಯ ಅಗಾಧ ಕಸ ತೋರಿ
ಈಗ ಕಸಿವಿಸಿಗೊಳಿಸಬೇಡಿ

ನಿಮ್ಮ ಸುಳ್ಳುಗಳಲ್ಲೇ
ಸುಖವಾಗಿರುತ್ತೇವೆ
ದಯವಿಟ್ಟು ಹೃದಯ
ತೆರೆದಿಡಬೇಡಿ.

‍ಲೇಖಕರು avadhi

8 March, 2018

2 Comments

  1. ಹೇಮಾ

    Wonderful.

  2. Lalitha siddabasavayya

    ವಾಹ್ !! ಬ್ಯೂಟಿಫುಲ್

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading