ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ನಿನ್ನ ದಾಖಲೆ ಯಾವಾಗ ನೀಡುತ್ತಿ?’ ಕೃತಿ ಹೊರಬಂತು

‘ನಿನ್ನ ದಾಖಲೆ ಯಾವಾಗ ನೀಡುತ್ತಿ?’ – ಇದೀಗ ಪ್ರಕಟವಾಗಿದೆ

ಈ ಕವನ ಸಂಕಲನದಲ್ಲಿ ನನ್ನದೊಂದು ಕವನ ಇದೆ. ಸ್ನೇಹಿತರ ಹಲವು‌ ಕವನಗಳಿವೆ.

ಎನ್.ಆರ್.ಸಿ ಗೆ ಕಲಾ ಪ್ರತಿರೋಧದ ಕವಿತೆಗಳ, ಪೋಸ್ಟರುಗಳ, ಕಲಾಕೃತಿಗಳ ದಿಢೀರ್ ಸಂಕಲನ

ಕೊಪ್ಪಳದ ಕವಿ ಹಾಗೂ ಪತ್ರಕರ್ತ ಸಿರಾಜ್ ಬಿಸರಳ್ಳಿಯವರು ಇತ್ತೀಚೆಗೆ ನಡೆದ ಆನೆಗೊಂದಿ ಉತ್ಸವದಲ್ಲಿ ತಾವು ರಚಿಸಿದ್ದ ‘ನಿನ್ನ ದಾಖಲೆ ಯಾವಾಗ ನೀಡುತ್ತಿ?’ ಎಂ¨ ಕವಿತೆಯೊಂದನ್ನು ಓದಿದರು. ಪ್ರಭುತ್ವದ ಭಕ್ತರು ನೀಡಿದ ದೂರಿನ ಮೇರೆಗೆ ಪೊಲೀಸರು ಕವಿಯ ಮೇಲೆ FIR ಹಾಕಿದ್ದಾರೆ. ಒಂದು ಕವಿತೆಯ ಮೇಲೆ FIR ದಾಖಲಿಸಿದ್ದನ್ನು ಪ್ರತಿಭಟಿಸಿ, ಎನ್.ಆರ್.ಸಿ ಯನ್ನು ಪ್ರಶ್ನಿಸುವ, ಪ್ರಭುತ್ವಕ್ಕೆ ಸೆಡ್ಡು ಹೊಡೆಯುವ ಸಾಲು ಸಾಲು ಕವಿತೆಗಳು ಬಂದಿವೆ.

ಈಗಾಗಲೇ ಎನ್.ಆರ್.ಸಿ-ಪ್ರತಿರೋಧದ ಸಭೆ, ರ್ಯಾಲಿ, ಮೆರವಣಿಗೆಗಳಲ್ಲಿ ಕವಿತೆ ವಾಚನ ಸಾಮಾನ್ಯವಾಗಿತ್ತು. ಅತ್ಯಂತ ಸೃಜನಶೀಲ ಪೋಸ್ಟರುಗಳು, ಬ್ಯಾನರುಗಳು, ಕಲಾಕೃತಿಗಳು ದೇಶದಾದ್ಯಂತ ಪ್ರತಿರೋಧದ ಭಾಗವಾಗಿ ಬಂದಿವೆ. ಒಟ್ಟಾರೆಯಾಗಿ ಇದನ್ನು ‘ಎನ್.ಆರ್.ಸಿ ವಿರುದ್ಧü ಕಲಾ ಪ್ರತಿರೋಧ’ ಎಂದು ಕರೆಯಬಹುದಾದಷ್ಟು ನಿಚ್ಚಳವಾದ ಟ್ರೆಂಡ್ ಆಗಿದೆ. ‘ನಿನ್ನ ದಾಖಲೆ ಯಾವಾಗ ನೀಡುತ್ತಿ?’ ಇಂತಹ ಕಲಾ ಪ್ರತಿರೋಧದ ಕವಿತೆಗಳ, ಪೋಸ್ಟರುಗಳ, ಕಲಾಕೃತಿಗಳ ದಿಢೀರ್ ಸಂಕಲನ.

-ಯಮುನಾ ಗಾಂವ್ಕರ್ 

‍ಲೇಖಕರು avadhi

6 February, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading