
ಮುರಳೀಧರ ಉಪಾಧ್ಯ, ಹಿರಿಯಡ್ಕ
ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟರ ಕುರಿತ ಸಂಪ್ರಬಂಧ ‘ನಿನ್ನೆಗೆ ನನ್ನ ಮಾತು’ ಕೃತಿಗೆ ಬರೆದ ಬೆನ್ನುಡಿ
ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರ ಕಾವ್ಯದಲ್ಲಿ ಕನ್ನಡ ನವ್ಯ ಕಾವ್ಯದ ವಿಶಿಷ್ಟ ಕವಲುಗಳಿವೆ.
‘ಪಾಂಚಾಲಿ’ಯಲ್ಲಿ (೧೯೯೬) ಅವರ ಪ್ರಾತಿನಿಧಿಕ ಕವನಗಳಿವೆ. ‘ದೆವ್ವದ ಜೊತೆ ಮಾತುಕತೆ’ ಯಂಥ ಕವನ ಗುಚ್ಛಗಳು, ‘ಚಿನ್ನದ ಹಕ್ಕಿ’ (ಯೇಟ್ಸ್ ಕವಿಯ ಕವನಗಳ ಅನುವಾದ) ಅವರ ಅಸಾಧಾರಣ ಕೊಡುಗೆಗಳು.
‘ಶೇಕ್ಸ್ಪ್ ಪಿಯರ್ ನ ಸಾನೆಟ್ ಗಳನ್ನು, ಶೂದ್ರಕನ ’ ಮೃಚ್ಛಕಟಿಕ ’ ನಾಟಕವನ್ನು ಅವರು ಕನ್ನಡಕ್ಕೆ ತಂದಿದ್ದಾರೆ. ನವ್ಯದ ಏರುದಿನಗಳಲ್ಲಿ ಅನಾದರಕ್ಕೆ ಗುರಿಯಾಗಿದ್ದ ಭಾವಗೀತೆ ಮತ್ತು ಮಕ್ಕಳಸಾಹಿತ್ಯವನ್ನು ಜವಪ್ರಿಯಗೊಳಿಸಿದ ಕವಿ ಎನ್. ಎಸ್. ಎಲ್.
ಅವರ ಕಾವ್ಯ , ಲವಲವಿಕೆ , ‘ಇದ್ದು ಜೈಸಬೇಕು’ ಎಂಬ ಜೀವನಪ್ರೀತಿ ಮತ್ತು ಮಾಧುರ್ಯ ತುಂಬಿದ ಕಾವ್ಯ. ಅವರು ‘ಹಚ್ಚಿದ ದೀಪ ಎಲ್ಲ ಗಡಿಯಾಚೆಗೂ ಬೆಳಕು ಸುರಿವಂಥದು “.




ಪ್ರೊ.ಬಸವರಾಜ ಪುರಾಣಿಕ
“ಸಹನೆ ಗೆಲ್ಲಲಿ” ಎಂದು ಹಾಡಿದ ಕವಿಯ ಕುರಿತ ಡಾ. ಪ್ರಜ್ಙಾ ಅವರ ಥೆಸಿಸ್ ಬಂದದ್ದು ಸಕಾಲಿಕ ಹಾಗು ಸಮುಚಿತ.
ಭಟ್ಟರ ಸಾಹಿತ್ಯ ಕೃಷಿ ಅವಲೋಕಿಸಿದವರಿಗೆ “ನಿನ್ನೆಗೆ ನನ್ನ ಮಾತು” ಕೃತಿ ರಚಿಸಿ ಪ್ರಜ್ಙಾ ಬಹುಮುಖೀ ಸಾಧನೆ ಸಿದ್ಧಿಯ ಭಟ್ಟರಿಗೆ ಅಪರೂಪದ ಗೌರವ ನೀಡಿರುವರು
ನಿನ್ನೆಗೆ ನನ್ನ ಮಾತು – ಪುಸ್ತಕದ ಬೆಲೆ ರೂ- 150. ಪ್ರತಿಗಳಿಗಾಗಿ ಉಡುಪಿಯ ಸೀತಾ ಬುಕ್ ಹೌಸ್ ಅವರನ್ನು ಸಂಪರ್ಕಿಸಿ-ಮೊಬೈಲ್- 9901728373 . email- prajnamarpally@gmail.com
ನಾನು ನಿಮ್ಮ ಕೃತಿಯನ್ನು ಓದಬೇಕೆಂದಿದ್ದೇನೆ ಓದಿದ ನಂತರ ಹೇಳುವೆ
ಧನ್ಯವಾದಗಳು..
ಧನ್ಯವಾದಗಳು..
ಧನ್ಯವಾದಗಳು