ಮರಣಾನಂತರದ ಜೀವನ
ರವಿವರ್ಮ ಹೊಸಪೇಟೆ
ಶಿಷ್ಯ “ಗುರುಗಳೇ ಮರಣದ ನಂತರ ಜೀವನ ಇದೆಯಾ?”
ಗುರುಗಳು “ಏಕೆ ಹೀಗೆ ಕೇಳಿದೆ?”
ಶಿಷ್ಯ “ಪ್ರೇಮ ಇಲ್ಲದೆ,ನಗು ಇಲ್ಲದೆ, ಹಾಡು ಹಾಡದ ಹಾಗೆ, ಕನಸುಕಾಣದ ಹಾಗೆ, ಇರುವುದು ದಾರುಣ ಅನಿಸಿ ಹಾಗೆ ಕೇಳಿದೆ”
ಗುರುಗಳು ನಕ್ಕು.
“ಬಹಳಷ್ಟು ಜನ ಮನುಸ್ಯರು ಅವೆಲ್ಲವುಗಳನ್ನು ,ಮರಣದ ಮೊದಲು ಕೂಡ ಮಾಡುವುದಿಲ್ಲ . ಒಂದುವೇಳೆ ಅವನ್ನು ಮಾಡಿದರು ಬರಿ ಮೇಲ್ಮೇಲೆ ಮಾತ್ರ ಮಾಡುತ್ತಾರೆ …
ನಿಜವಾದ ಪ್ರಶ್ನೆ ಅದಲ್ಲ … ನಿಜವಾದ ಪ್ರಶ್ನೆ ಎಂದರೆ ..ಸಾಯುವ ಮೊದಲು ಜೀವನ ಇದೆಯೇ ಎನ್ನುವುದೇ”
*****
ತೆಲುಗು ಪ್ರಖ್ಯಾತ ಕವಿ ಸೌಭಾಗ್ಯ ಅವರು ಬರೆದ “ಜೆನ್ ಕಥೆಗಳು ” ಅನುವಾದ ಅರ್ದ ಮುಗಿದಿದೆ.. ಅದರ ಒಂದೊಂದು ಕಥೆ ದಿನಾಲೂ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ….
ಅಂದಹಾಗೆ ಸೌಭಾಗ್ಯ ಹೆಸರು ಕೇಳಿ ಲೇಖಕಿ ಎಂದು ಭಾವಿಸಬೇಡಿ.. ಇದು ಒಬ್ಬ ಮಹಾ ಮೇಧಾವಿ ಲೇಖಕ ..






………..