ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ನಿಂಗರ್ತ ಆಯ್ಕಿಲ್ಲ, ಮುಚ್ಕೊಂಡಿರು'

ಪರಮೇಶ್ವರ ಗುರುಸ್ವಾಮಿ

 
“ಒಂಟೋಯ್ತಿರ್ಬೇಕು.” ಅಂದ.
ಯಾರಿಗೆ ಹೇಳುತ್ತಿದ್ದಾನೆ ಎಂದು ಸುತ್ತ ನೋಡಿದೆ. ಯಾರೂ ಇರಲಿಲ್ಲ.
“ಯಾರಿಗೆ ಹೇಳುತ್ತಿದ್ದೀಯೇ?” ಎಂದು ಕೇಳಿದೆ.
“ಇಂಗೇ ಏಳ್ಕೊಂಡೆ.” ಅಂದ.
“ಎಲ್ಲಿಗೆ ಹೊರಟು ಹೋಗಬೇಕು?”, ಪ್ರಶ್ನಿಸಿದೆ.
ನಿಧಾನವಾಗಿ ಕತ್ತನ್ನು ಎತ್ತಿ ಆಕಾಶ ನೋಡುತ್ತ,
” ಅಲ್ಲಿಗೆ”, ಅಂತಂದ. ಅವನು ನೋಡುತ್ತಿರುವ ಕಡೆ ಅಲ್ಲಿ ಒಂದು ಮನೆ ಇದೆಯೇನೊ ಎಂಬಂತಿತ್ತು ಅವನ ಮುಖಭಾವ. ನಾನೂ ಅಲ್ಲೇ ನೋಡಿದೆ. ಅಲ್ಲಿ ಮೋಡಗಳು ನಿಧಾನವಾಗಿ ಹಿಂಜಿದ ಅರಳೆಯ ದೊಡ್ಡ ದೊಡ್ಡ ರಾಶಿಗಳಂತೆ ಚಲಿಸುತ್ತಿದ್ದುವು. ಮನೆಯೇನೂ ಕಾಣಿಸಲಿಲ್ಲ. ಕಡೆಯ ಪಕ್ಷ ಒಂದು ಮರದ ಮೇಲಿನ ಹಕ್ಕಿಯ ಗೂಡೂ ಇರಲಿಲ್ಲ. ಕೇಳಿದೆ,
“ಅಲ್ಲಿಗೆ ಯಾಕೆ ಹೋಗ ಬೇಕು?”
“ಇಲ್ಲೇನೈತೆ?”, ಮರು ಪ್ರಶ್ನೆ ಹಾಕಿದ.
” ಸಂಬಂಧಗಳು, ಸ್ನೇಹಿತ ಸ್ನೇಹಿತೆಯರು, ಮನೆ ಮಠ, ಕೊನೇ ಪಕ್ಷ ಬದುಕು.” ಶಮನ ಮಾಡಲು ಯತ್ನಿಸಿದೆ.
“ಅವೆಲ್ಲ ಸುಳ್ಳು.” ಅಂದ.
” ಅದು ಹೇಗೆ ಹೇಳುವೆ?” ಅಂತ ಕೇಳಿದೆ.
“ನಿಂಗರ್ತ ಆಯ್ಕಿಲ್ಲ, ಮುಚ್ಕೊಂಡಿರು.” ಅಂದ್ಬಿಟ್ಟ.

‍ಲೇಖಕರು admin

30 June, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading