ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾ ಹೊಲೆದ ಜೋಡಿ ಚಪ್ಪಲಿಗಳು…..

ನಾಗರಾಜ್ ಹೆತ್ತೂರು

 
ಇವು ನಾ ಹೊಲೆದ
ಜೋಡಿ ಚಪ್ಪಲಿಗಳು
ನೀವು ಕಣ್ಣೆತ್ತಿಯೂ ನೋಡದ
ಚರಂಡಿಗಿಳಿದ ಇತಿಹಾಸ…
ಹೇಳುತ್ತವೆ
 
ನಾ ಹೊಲೆದ ಜೋಡಿ ಚಪ್ಪಲಿಗಳು
ದೇವಸ್ಥಾನ ಹೊರಗೆ
ನಿಮ್ಮ ಚಪ್ಪಲಿಗಳನ್ನು
ಕಾದವರ ಇತಿಹಾಸ
ಹೇಳುತ್ತವೆ
 
ನಾ ಹೊಲೆದ ಜೋಡಿ ಚಪ್ಪಲಿಗಳು
ನಿಮ್ಮ ಮಲ-ಮೂತ್ರಗಳನ್ನು
ತೊಳೆದ ನನ್ನ ತಂದೆ-ತಾಯಿಯರ
ಇತಿಹಾಸ ಹೇಳುತ್ತವೆ

ನಾ ಹೊಲೆದ ಜೋಡಿ ಚಪ್ಪಲಿಗಳು
ಶತಮಾನಗಳ ಕಾಲ
ನಿಮ್ಮಿಂದ ತುಳಿಸಿಕೊಂಡ
ನಮ್ಮ ಪೂರ್ವಜರ
ಇತಿಹಾಸ ಹೇಳುತ್ತವೆ
 
ನಾ ಹೊಲೆದ ಚಪ್ಪಲಿಗಳು
ಜೀತಕ್ಕಿದ್ದ ನಮ್ಜೂರ
ಕರಿಯನ ಪಾದಗಳ ಕತೆ
ಹೇಳುತ್ತವೆ
 
ನಾ ಹೊಲೆದ ಜೋಡಿ ಚಪ್ಪಲಿಗಳು
ನನ್ನನ್ನೇ ಹೊಡೆದ
ಇತಿಹಾಸವನ್ನೂ
ದುಃಖದಿಂದ ಹೇಳುತ್ತವೆ

‍ಲೇಖಕರು avadhi

25 January, 2014

1 Comment

  1. ಮಾಲತೇಶ್‌ ಅರಸ್‌. ಬೆಂಗಳೂರು

    ಗೆಳೆಯ, ನಾಗರಾಜ್‌ ಹೆತ್ತೂರು ಕವಿತೆಯಲ್ಲಿ ಚಪ್ಪಲಿ ಹೊಲೆಯುವ ಹಲವು ನೊಂದ ಮನಗಳ ಮನದಾಳದ ಮಾತನ್ನು ಬಿಂಬಿಸಿದ್ದಾರೆ.ನಿಜಕ್ಕೂ ಅದ್ಬುತ ಕವಿತೆ..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading