ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾ ದಿವಾಕರ್ ನೇರನುಡಿ : ಬಂದ್ ರಸ್ತೆ ತಡೆಗೆ ಇದು ಸರಿಯೇ?

ಬಂದ್ ಆಚರಣೆ ರಸ್ತೆ ತಡೆಗೆ ಅಗ್ನಿದೇವನ ಮೊರೆ!

ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಪ್ರತಿಭಟನೆ, ಧರಣಿ, ಮುಷ್ಕರ, ಬಂದ್ ಮುಂತಾದ ಹೋರಾಟದ ಮಾರ್ಗಗಳು ಸ್ವಾಭಾವಿಕವಾಗಿ ಒದಗಿಬರುವ ಮೂಲಭೂತ ಹಕ್ಕುಗಳು. ಬಂದ್ ಆಚರಿಸುವ ಬಗ್ಗೆ ಆಳ್ವಿಕರ ಮತ್ತು ಸಮಾಜದ ಪ್ರಬಲ ವರ್ಗಗಳ ಆಕ್ಷೇಪಗಳೇನೇ ಇರಲಿ ಸಾರ್ವಜನಿಕರ ಆಕ್ರೋಶ ಮತ್ತು ಜಿಗುಪ್ಸೆಗಳನ್ನು ಹೊರಹಾಕಲು ಇರುವ ಒಂದು ಪ್ರಬಲ ಅಸ್ತ್ರ ಎಂದರೆ ಬಂದ್ ಆಚರಣೆಯೇ. ಬಂದ್ ಆಚರಿಸುವ ವೇಳೆ ಹಿಂಸಾತ್ಮಕ ಘಟನೆಗಳು ನಡೆಯದಂತೆ ನೋಡಿಕೊಳ್ಳುವ ಹೊಣೆಗಾರಿಕೆ ಇರುವುದು ಮುಷ್ಕರ ಹೂಡುವ ಸಂಘಟನೆಗಳ ಮೇಲೆ ಮತ್ತು ಪೊಲೀಸ್ ಹಾಗೂ ಆಡಳಿತ ಯಂತ್ರದ ಮೇಲೆ. ರಾಜಕೀಯ ಪಕ್ಷಗಳು ಬಂದ್ ಕರೆ ನೀಡುವ ಸಂದರ್ಭದಲ್ಲಿ ಪಕ್ಷಗಳ ನಾಯಕರೂ ಈ ಹೊಣೆಯನ್ನು ಹೊರಬೇಕಾಗುತ್ತದೆ. ಏನೆ ಇರಲಿ, ಬಂದ್ ಆಚರಿಸುವುದರಿಂದ ಸಾರ್ವಜನಿಕರ ಜೀವನ ಅಸ್ತವ್ಯಸ್ಥವಾಗುವುದಂತೂ ಸತ್ಯ. ಸಂಚಾರ ವ್ಯವಸ್ಥೆ ಇರುವುದಿಲ್ಲ, ಅಂಗಡಿ ಮುಗ್ಗಟ್ಟುಗಳು ಮುಚ್ಚಿರುತ್ತವೆ, ಶಾಲಾ ಕಾಲೇಜುಗಳು ರಜೆ ಘೋಷಿಸುತ್ತವೆ, ಜನರಿಗೆ ಓಡಾಡಲು ತೊಂದರೆಯಾಗುತ್ತವೆ, ನಿತ್ಯಾವಶ್ಯಕ ವಸ್ತುಗಳು ಅಲಭ್ಯವಾಗುತ್ತವೆ ಹೀಗೆ ಹತ್ತು ಹಲವಾರು ಸಮಸ್ಯೆಗಳು ಉದ್ಭವಿಸುತ್ತವೆ.

ಕಳೆದ ಒಂದು ತಿಂಗಳಿನಲ್ಲಿ ಕನರ್ಾಟಕದಲ್ಲಿ ಎರಡು ಬಾರಿ ಬಂದ್ ಆಚರಿಸಲಾಗಿದೆ. ಸಾರಿಗೆ ಸಂಸ್ಥೆ ನೌಕರರ ಮುಷ್ಕರವೂ ಸಹ ಬಂದ್ ರೀತಿಯಲ್ಲೇ ನಡೆದಿದ್ದು ಸಾರ್ವಜನಿಕ ಜೀವನವನ್ನು ಕಂಗೆಡಿಸಿದೆ. ಈ ಮೂರೂ ಮುಷ್ಕರಗಳು ಸಮರ್ಥನೀಯವೇ. ಬಂದ್ ವಿರುದ್ಧ ನ್ಯಾಯಾಲಯದ ತೀಪರ್ು ಏನೇ ಇದ್ದರೂ ಭಾರತದ ರಾಜಕೀಯ ವ್ಯವಸ್ಥೆಯಲ್ಲಿ ಈ ಒಂದು ಪ್ರತಿರೋಧದ ಅಸ್ತ್ರ ಇನ್ನೂ ತನ್ನ ಮೌಲ್ಯವನ್ನು ಉಳಿಸಿಕೊಂಡಿದೆ. ಕಾರಣ ಆಳ್ವಿಕರ ನಿಷ್ಕ್ರಿಯತೆ. ಮೂರೂ ಸಂದರ್ಭಗಳಲ್ಲಿ ಬಂದ್ ಆಚರಣೆಯನ್ನು ತಪ್ಪಿಸುವ ಅವಕಾಶ ಆಳ್ವಿಕರಿಗೆ ಇತ್ತು. ಆದರೆ ಇಚ್ಚಾಶಕ್ತಿ ಇರಲಿಲ್ಲ. ಕಾವೇರಿ ವಿವಾದದ ಸಂದರ್ಭದಲ್ಲಿ ಸಕರ್ಾರ ಅಸಹಾಯಕ ಸ್ಥಿತಿ ಎದುರಿಸಿದ್ದರೂ, ವಿವಿಧ ಸಂಘಟನೆಗಳೊಡನೆ ಚಚರ್ೆ ನಡೆಸಿ ಬಂದ್ ಅಚರಿಸುವ ಬದಲು ಹೋರಾಟದ ಅನ್ಯ ಮಾರ್ಗಗಳನ್ನು ಕುರಿತು ಆಲೋಚಿಸಬಹುದಿತ್ತು. ಆದರೆ ರಾಜ್ಯ ಸಕರ್ಾರ ತನ್ನ ಅಧಿಕಾರದ ಉಳಿವು ಮತ್ತು ಜನತೆಯ ಹಿತಾಸಕ್ತಿಗಳ ನಡುವೆ ಆದ್ಯತೆ ಯಾವುದೆಂದು ತೀಮರ್ಾನಿಸುವಷ್ಟು ಪ್ರಬುದ್ಧವಾಗಿಲ್ಲ. ಇದು ನಮ್ಮ ದೇಶದ ದುರಂತ.

ಆಳ್ವಿಕರ, ಆಡಳಿತ ಯಂತ್ರದ ನಿಷ್ಕ್ರಿಯತೆ, ನಿರ್ಲಕ್ಷ್ಯ ಮತ್ತು ಆಯ್ಕೆಗಳು ಏನೇ ಇರಲಿ, ಬಂದ್ ಆಚರಿಸುವ ಸಂಘಟನಾತ್ಮಕ ಶಕ್ತಿಗಳ ವರ್ತನೆಯೂ ಇತ್ತೀಚೆಗೆ ಪ್ರಶ್ನಾರ್ಹವಾಗುತ್ತಿದೆ. ಹಣಕಾಸಿನ ಮುಗ್ಗಟ್ಟು ಎದುರಿಸುತ್ತಿರುವ ಸಾಮಾನ್ಯ ಜನತೆ ಮತ್ತು ಮಧ್ಯಮ ವರ್ಗಗಳಿಗೆ ಬಂದ್ ಆಚರಣೆ ಒಂದು ಕಂಟಕವಾಗಿಯೇ ಕಾಣುತ್ತದೆ. ಸಣ್ಣ ಪುಟ್ಟ ವ್ಯಾಪಾರಿಗಳಿಗೆ ಬಂದ್ ಆಚರಿಸುವುದು ಒಂದು ದಿನದ ವ್ಯಾಪಾರ ನಷ್ಟವಾಗುವ ಭೀತಿ ಹುಟ್ಟಿಸುತ್ತದೆ. ಆದರೂ ವ್ಯಾಪಾರ ಸ್ಥಗಿತಗೊಂಡರೆ ಅದಕ್ಕೆ ಎರಡು ಕಾರಣಗಳಿರುತ್ತವೆ. ಒಂದು ಸಂಘಟನೆಗಳಿಂದ ಆಕ್ರಮಣಕ್ಕೊಳಗಾಗುವ ಭೀತಿ ಮತ್ತೊಂದು ಸಮಸ್ಯೆಯ ಬಗ್ಗೆ ಇರುವ ಕಾಳಜಿ, ಜನಪರ ಕಳಕಳಿ. ಬಲವಂತವಾಗಿ ಬಂದ್ ಮಾಡಿಸುವುದು ಕಾನೂನಿನ ಪ್ರಕಾರ ನಿಷಿದ್ಧವಾದರೂ ಬಂದ್ ವೇಳೆಯಲ್ಲಿ ಸೃಷ್ಟಿಯಾಗುವ ಉನ್ಮಾದವನ್ನು ತಡೆಗಟ್ಟುವವರಾರು ? ಅವಶ್ಯ ವಸ್ತುಗಳಾದ ಔಷಧಿ ಅಂಗಡಿಗಳನ್ನೂ ಮುಚ್ಚಿಸುವ ಪ್ರವೃತ್ತಿಯ ಹಿಂದೆ ಈ ಉನ್ಮಾದ ಕಂಡುಬರುತ್ತದೆ.

ಇತ್ತೀಚೆಗೆ ನಡೆದ ಕಾವೇರಿ ಬಂದ್ ಮತ್ತು ಭಾರತ್ ಬಂದ್ ವೇಳೆಯಲ್ಲಿ ಮೈಸೂರು, ಬೆಂಗಳೂರು ನಗರಗಳನ್ನು ಹೊರತುಪಡಿಸಿ ಕಂಡುಬಂದ ಒಂದು ವಿದ್ಯಮಾನ ಎಂದರೆ ಬಂದ್ ವೇಳೆಯಲ್ಲಿ ಸಾರ್ವಜನಿಕರಿಗೆ ಓಡಾಡಲು ಅವಕಾಶ ನೀಡದಂತೆ ತಡೆಗಟ್ಟಲು, ರಸ್ತೆಗಳಲ್ಲಿ ಸಂಚಾರ ವ್ಯವಸ್ಥೆಗೆ ಅಡ್ಡಿಪಡಿಸಲು ಹೋರಾಟಗಾರರು ಅನುಸರಿಸಿದ ನೂತನ ವಿಧಾನ. ಸಾಮಾನ್ಯವಾಗಿ ಬಂದ್ ಆಚರಿಸುವಾಗ ರಸ್ತೆ ತಡೆ ನಡೆಸುವ ಪ್ರತಿಭಟನಾಕಾರರು ರಸ್ತೆಯಲ್ಲಿ ಅಧಿಕ ಸಂಖ್ಯೆಯಲ್ಲಿ ಜಮಾಯಿಸಿ, ಸಂಘಟನೆಯ ಕಾರ್ಯಕರ್ತರು ಮತ್ತು ಸಾರ್ವಜನಿಕರು ಖುದ್ದಾಗಿ ರಸ್ತೆಯಲ್ಲಿ ನಿಂತು, ಘೋಷಣೆಗಳನ್ನು ಕೂಗುತ್ತಾ ವಾಹನಗಳನ್ನು, ಜನಸಾಮಾನ್ಯರನ್ನು ತಡೆಗಟ್ಟುವುದುಂಟು. ಇಂತಹ ಅನೇಕ ಹೋರಾಟಗಳನ್ನು ಕಂಡಿದ್ದೇವೆ. ರಸ್ತೆಗೆ ಅಡ್ಡಲಾಗಿ ಬಿಸಿಲು, ಮಳೆಯನ್ನೂ ಲೆಕ್ಕಿಸದೆ ಕುಳಿತು ಸಂಚಾರ ವ್ಯವಸ್ಥೆಯನ್ನು ಅಸ್ತವ್ಯಸ್ಥಗೊಳಿಸುವ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುವ ಹೋರಾಟಕ್ಕೆ ಒಂದು ಮೌಲ್ಯವಿರುತ್ತದೆ. ತಮ್ಮ ಬೇಡಿಕೆಗಳನ್ನು ಈಡೇರಿಸದ ಆಳುವ ವರ್ಗಗಳನ್ನು ಎಚ್ಚರಿಸುವ ಮತ್ತು ಆಡಳಿತಾರೂಢ ಪಕ್ಷಗಳಿಗೆ ಎಚ್ಚರಿಕೆ ನೀಡುವ ಒಂದು ಪ್ರಜಾಸತ್ತಾತ್ಮಕ ವಿಧಾನವಾಗಿ ಈ ಹೋರಾಟದ ಅಸ್ತ್ರವನ್ನು ಬಳಸಲಾಗುತ್ತದೆ.

ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಕಾವೇರಿ ಮತ್ತು ಭಾರತ್ ಬಂದ್ ಸಂದರ್ಭದಲ್ಲಿ ದಿನಕ್ಕೊಂದು ಊರಿನಲ್ಲಿ ಬಂದ್ ಆಚರಿಸಿದಾಗ ಮತ್ತು ಅಕ್ಟೋಬರ್ 6ರಂದು ರಾಜ್ಯವ್ಯಾಪಿ ಬಂದ್ ಆಚರಿಸಿದಾಗ ರಸ್ತೆ ತಡೆ ನಡೆಸುವ ವಿನೂತನ ಶೈಲಿಯನ್ನು ಕಾಣಬಹುದಿತ್ತು. ರಸ್ತೆಗೆ ಅಡ್ಡಲಾಗಿ ಮರಗಿಡಗಳನ್ನು ಇಟ್ಟು, ತೆಂಗಿನ ಗರಿಗಳನ್ನು ಇಟ್ಟು , ಟೈರುಗಳನ್ನು ಇಟ್ಟು ಬೆಂಕಿ ಹಚ್ಚಲಾಗಿತ್ತು. ದ್ವಿಚಕ್ರವಾಹನಗಳೂ ದಾಟಿ ಹೋಗದಂತೆ ರಸ್ತೆಯ ಉದ್ದಗಲಕ್ಕೂ ಬೆಂಕಿ ಹಾಕಲಾಗಿತ್ತು. ಮೈಸೂರು , ಬೆಂಗಳೂರು ನಗರಗಳಲ್ಲಿ ಇದು ಕಾಣದಿದ್ದರೂ ಸುತ್ತಲಿನ ಪಟ್ಟಣಗಳಲ್ಲಿ ಇದೇ ವಿಧಾನವನ್ನು ಅನುಸರಿಸಲಾಗಿತ್ತು. ಇಲ್ಲಿ ಒಂದು ವಿಪಯರ್ಾಸ ಎದ್ದುಕಾಣುತ್ತದೆ. ಬಂದ್ ಆಚರಿಸುವ ಸಂಘಟನೆಗಳ ಕಾರ್ಯಕರ್ತರು ದಿನದ ಆರಂಭದಲ್ಲಿ ರಸ್ತೆಯಲ್ಲಿ ಜಮಾಯಿಸುತ್ತಾರೆ. ಕೊಂಚ ಹೊತ್ತು ಅಲ್ಲಿಯೇ ಇದ್ದು ರಸ್ತೆಯನ್ನು ಆಕ್ರಮಿಸಲಾಗುತ್ತದೆ. ನಂತರ ಈ ಹೋರಾಟಗಾರರು (?) ರಸ್ತೆಗೆ ಅಡ್ಡಲಾಗಿ ಮರಗಿಡಗಳನ್ನು ಇರಿಸಿ, ಟೈರುಗಳನ್ನು ಇಟ್ಟು, ಬೆಂಕಿ ಹಚ್ಚಿ ರಸ್ತೆ ರೋಕೋ ಜವಾಬ್ದಾರಿಯನ್ನು ಅಗ್ನಿದೇವನಿಗೆ ಅಪರ್ಿಸಿ, ರಸ್ತೆ ಬದಿಯಲ್ಲಿ ಕೇರಂ ಆಡುತ್ತಲೋ, ಇಸ್ಪೀಟ್ ಎಲೆ ಆಡುತ್ತಲೋ ಕಾಲ ಕಳೆಯುತ್ತಾರೆ. ಇಲ್ಲವಾದರೆ ಶಾಮಿಯಾನ ಹಾಕಿಕೊಂಡು ಅಡುಗೆ ಮಾಡಲಾರಂಭಿಸುತ್ತಾರೆ.

ಇದು ವಿನೂತನ ಶೈಲಿ ಎಂದು ಹೋರಾಟಗಾರರು ಹೆಮ್ಮೆ ಪಡಬಹುದು. ಈ ವಿಧಾನದಿಂದ ಸಾರ್ವಜನಿಕರಿಗೆ ಓಡಾಡದಂತೆ ಮಾಡುವ ಉದ್ದೇಶ ಸಫಲವಾಗಬಹುದು. ಆದರೆ ಇದರಿಂದ ಸಾರ್ವಜನಿಕರಿಗೆ ಉಂಟಾಗುವ ತೊಂದರೆ, ಪರಿಸರಕ್ಕೆ ಉಂಟಾಗುವ ಮಾಲಿನ್ಯದ ಹಾನಿಯನ್ನು ಪರಿಗಣಿಸುವವರಾರು ? ಟೈರುಗಳನ್ನು ಸುಡುವುದರಿಂದ ಉಂಟಾಗುವ ಪರಿಸರ ಮಾಲಿನ್ಯ ಎಷ್ಟು ಗಂಭೀರವಾಗಿರುತ್ತದೆ ಎಂಬ ಪರಿಜ್ಞಾನ ಸಂಘಟಕರಿಗೂ ಇರಬೇಕು, ಹೋರಾಟಗಾರರಿಗೂ ಇರಬೇಕು. ಇನ್ನು ರಸ್ತೆಗಡ್ಡಲಾಗಿ ಮರದ ದಿಮ್ಮಿಗಳನ್ನು ಇರಿಸಿ ಬೆಂಕಿ ಹಚ್ಚಿದ್ದಾಗ ಉಂಟಾಗಬಹುದಾದ ಸಂಭಾವ್ಯ ಅನಾಹುತಗಳ ಬಗ್ಗೆಯೂ ಪರಿಜ್ಞಾನ ಇರಬೇಕಲ್ಲವೇ ? ಯಾವುದೇ ಪ್ರಚೋದನೆ ಇಲ್ಲದೆಯೇ ಬಸ್ಸುಗಳಿಗೆ, ಕಟ್ಟಡಗಳಿಗೆ ಬೆಂಕಿ ಹಚ್ಚುವ ಕಿಡಿಗೇಡಿಗಳು ಅಪಾರ ಸಂಖ್ಯೆಯಲ್ಲಿರುವ ನಮ್ಮ ಸಮಾಜದಲ್ಲಿ, ವ್ಯವಸ್ಥಿತವಾಗಿ ಬೆಂಕಿ ಹಚ್ಚಿಟ್ಟು ಸಿದ್ಧ ಪರಿಕರಗಳನ್ನು ಒದಗಿಸುವುದು ಎಷ್ಟು ವಿವೇಕಯುತ ಎಂದು ಯೋಚಿಸಬೇಕಾಗುತ್ತದೆ.

ಮೇಲಾಗಿ ಹೋರಾಟಗಾರರು ರಸ್ತೆಯಲ್ಲಿ ಕೇರಂ ಆಡುತ್ತಾ ಮನರಂಜನೆ ಪಡೆಯುವುದು ಯಾವ ರೀತಿಯಲ್ಲಿ ಪ್ರತಿಭಟನೆ ಎನಿಸಿಕೊಳ್ಳುತ್ತದೆ ? ಬಂದ್ ಆಚರಿಸುವ ಸಂಘಟನೆಗಳು ಎಷ್ಟೇ ಬಯಸಿದರೂ, ಕೆಲವು ಸಕರ್ಾರಿ ಕಚೇರಿಗಳಿಗೆ ಹೋಗಲೇಬೇಕಾದ ಅನಿವಾರ್ಯತೆ ನೌಕರರಿಗೆ ಇರುತ್ತದೆ ಎಂಬುದನ್ನು ಗಮನಿಸಬೇಕು. ಊರಿಂದ ಊರಿಗೆ ಪ್ರಯಾಣ ಮಾಡುವ ಬ್ಯಾಂಕ್ ನೌಕರರು, ಸಕರ್ಾರಿ ನೌಕರರು ಬಂದ್ ವೇಳೆ ಮನೆಯಲ್ಲಿ ಕುಳಿತಿರಲು ಸಾಧ್ಯವಿಲ್ಲ. ಕಚೇರಿಗೆ ತೆರಳಿ ನಂತರವೇ ಹಿಂದಿರುಗಬೇಕಾದ ಅನಿವಾರ್ಯತೆ ಇರುತ್ತದೆ. ಇದು ಕಾನೂನಾತ್ಮಕ ಸಮಸ್ಯೆಯೂ ಹೌದು. ಇಂತಹ ಕಾಮರ್ಿಕರಿಗೆ ದ್ವಿಚಕ್ರ ವಾಹನದಲ್ಲಿ ಸಂಚರಿಸಲೂ ಅವಕಾಶ ನೀಡದೆ ರಸ್ತೆಗೆ ಬೆಂಕಿ ಹಾಕಿ ಅಡ್ಡಿಪಡಿಸುವುದು ಭಂಡತನ ಎನಿಸುವುದೇ ಹೊರತು ಹೋರಾಟ ಎನಿಸುವುದಿಲ್ಲ. ಒಂದು ವೇಳೆ ಬಂದ್ ವೇಳೆಯಲ್ಲೇ ತುತರ್ು ಚಿಕಿತ್ಸೆ ಬೇಕಾದ ರೋಗಿಗಳನ್ನು ಆಂಬುಲೆನ್ಸ್ಗಳಲ್ಲಿ ಕೊಂಡೊಯ್ಯಬೇಕಾದರೆ ಏನು ಮಾಡುವುದು ? ರಸ್ತೆಗೆ ಅಡ್ಡಡ್ಡವಾಗಿ ಹಾಕಿರುವ ಬೆಂಕಿಯನ್ನೂ ಕೂಡಲೇ ನಂದಿಸಲಾಗುವುದೇ ? ಬೆಂಕಿ ಆರುವವರೆಗೂ ರೋಗಿ ಬದುಕಿರಲು ಸಾಧ್ಯವೇ ? ಉರಿವ ಬೆಂಕಿಯನ್ನು ಬದಿಗೆ ಸರಿಸಿ ದಾರಿ ಮಾಡಿಕೊಡುವುದೂ ದುಸ್ತರವಾಗಿರುತ್ತದೆ. ಇಂತಹ ವೇಳೆಯಲ್ಲಿ ಹೊಣೆಗಾರಿಕೆ ಯಾರದು ?

ಇಲ್ಲಿ ಮತ್ತೊಂದು ಗಮನಾರ್ಹ ಸಂಗತಿ ಎಂದರೆ ಬೆಂಕಿ ಹಚ್ಚುವವರಾರು, ಇದರ ಹೊಣೆಗಾರಿಕೆ ಯಾರದು ಎಲ್ಲವೂ ನಿಗೂಢವಾಗಿರುತ್ತದೆ. ಏಕೆಂದರೆ ಹೋರಾಟಗಾರರು ಸ್ಥಳದಲ್ಲಿ ಇರುವುದಿಲ್ಲ. ಬೈಕುಗಳಲ್ಲಿ ತಿರುಗಾಡಲು ಹೊರಟಿರುತ್ತಾರೆ. ಅಥವಾ ಅಡುಗೆ ಮಾಡಲು ತೊಡಗಿರುತ್ತಾರೆ. ಇಲ್ಲವೇ ಕೇರಂ ಆಡುತ್ತಿರುತ್ತಾರೆ. ಅದೂ ಇಲ್ಲವೆಂದರೆ ಮನೆಯಲ್ಲಿ ವಿಶ್ರಮಿಸುತ್ತಿರುತ್ತಾರೆ. ಆಕ್ರೋಶಭರಿತ ಜನತೆಯ ಪಾಲ್ಗೊಳ್ಳುವಿಕೆಯೇ ಇಲ್ಲದೆ ರಸ್ತೆ ತಡೆ ನಡೆಸುವ ಈ ವಿನೂತನ ಶೈಲಿ, ಬೆಂಕಿ ಹಚ್ಚುವ ಪರಂಪರೆ ಇತ್ತೀಚಿನದು. ಈ ವಿಧಾನ ಪರಿಣಾಮಕಾರಿಯಾಗಿರಬಹುದು ಆದರೆ ಸಮರ್ಥನೀಯವೇ ಎಂಬ ಪ್ರಶ್ನೆ ಕಾಡುತ್ತದೆ. ತಮ್ಮ ಬೇಡಿಕೆಗಳನ್ನು ಈಡೇರಿಸಲು ರಸ್ತೆಯ ಮಧ್ಯೆ ನಿಂತು ಹೋರಾಡುವ ಬದಲು, ರಸ್ತೆಯಲ್ಲಿ ಬೆಂಕಿ ಹಾಕಿ ಬದಿಯಲ್ಲಿ ವಿಶ್ರಮಿಸುತ್ತಾ ಮನರಂಜನೆಯಲ್ಲಿ ತೊಡಗುವವರನ್ನು ಹೋರಾಟಗಾರರೆಂದು ಪರಿಗಣಿಸುವುದಾದರೂ ಹೇಗೆ ? ಇದು ಪ್ರಜ್ಞಾವಂತರನ್ನು ಕಾಡಲೇಬೇಕಾದ ಪ್ರಶ್ನೆ .

‍ಲೇಖಕರು G

11 October, 2012

1 Comment

  1. Kiran

    Sir
    Bundhs are anti-national and illegal – any form of it.
    A mature democracy should not have scope for bundhs. These bundhs are handled by goonda elements. They never serve the purpose, howsoever noble the cause may be.
    Take price hike. It is done to fill in some losses. Once there is a bundh, the government discloses that the losses on the day of bundh were in thousands of crores. This amount adds on to cumulative losses and affects common man again. Every single thinking person knows the truth. Hence, no intelligent man would favor a bundh. It is only the politicians who need not pay taxes for the ill-gotten money and their goonda supporters who are fed with the ill-gotten money who run the bundh. No single taxpayer would ever support any bundh which would affect him directly and indirectly.
    Hence, bundhs are never by common public. It is always by politicians with ample help by rowdy elements. The common-man is dragged into bundh without his consent and wish. There is nothing bundhs have ever achieved and would ever achieve.
    We are yet to find reasons to live in this country amidst corruption, dirty politics, hypocrisy and so-on. We want a peaceful life. Nothing disturbs a common man as breaking of routine which is probably the only right he has!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading