ಬಂದ್ ಆಚರಿಸುವ ಮುನ್ನ
ಕಾವೇರಿಯಲ್ಲಿ ಪ್ರೀತಿ ಸದ್ಭಾವನೆ ಹರಿಯಲಿ
ಶತಮಾನದ ಸಮಸ್ಯೆಯಾಗಿರುವ ಕಾವೇರಿ ವಿವಾದ ಮತ್ತೊಮ್ಮೆ ಕಾವೇರುತ್ತಿದೆ. 1991ರ ಕರಾಳ ಛಾಯೆ ಮತ್ತೊಮ್ಮೆ ರಾಜ್ಯದಾದ್ಯಂತ ಆವರಿಸುತ್ತಿದೆ. ಮಾನವನ ಉಳಿವಿಗೆ ಅತ್ಯಗತ್ಯವಾದ ನೀರು, ಅಮಾಯಕರ ಅಂತ್ಯಕ್ಕೆ ಕಾರಣವಾಗುವ ಸನ್ನಿವೇಶ ಸೃಷ್ಟಿಯಾಗುತ್ತಿದೆ. ಕನರ್ಾಟಕದ ಜೀವನದಿ ಎಂದೇ ಜನಜನಿತವಾಗಿರುವ ಕಾವೇರಿ ಜೀವಹಾನಿಗೆ ವೇದಿಕೆಯಾಗುವ ಸಂಭವವೂ ಹೆಚ್ಚಾಗುತ್ತಿದೆ.
ಇದು ಆತಂಕಕಾರಿ ವಿಚಾರ. ನಿಜ, ರಾಜ್ಯದ ಸಮಸ್ತ ಜನತೆ ಹೋರಾಟದಲ್ಲಿ ತೊಡಗಿದೆ. ಜಾತಿ, ಧರ್ಮ, ಪಕ್ಷ, ಭಾಷೆಗಳ ಹಂಗನ್ನು ತೊರೆದು ಕನರ್ಾಟಕದ ಜನತೆ ಕಾವೇರಿ ನದಿ ನೀರಿನ ರಕ್ಷಣೆಗಾಗಿ ಹೋರಾಟದಲ್ಲಿ ತೊಡಗಿದ್ದಾರೆ. ಕೆಲವರು ಅನಿವಾರ್ಯತೆಯಿಂದ, ಕೆಲವರು ಭೀತಿಯಿಂದ, ಕೆಲವು ಸಂಘಟನೆಗಳು ತಮ್ಮ ಅಸ್ತಿತ್ವದ ಉಳಿವಿಗಾಗಿ ಇನ್ನು ಕೆಲವರು ಹೋರಾಟದ ಉತ್ಸಾಹದಿಂದ ಬೀದಿಗಿಳಿದು ಹೋರಾಡುತ್ತಿದ್ದಾರೆ. ಮೈಸೂರು, ಮಂಡ್ಯ ಜಿಲ್ಲೆಗಳಲ್ಲಿ ರಸ್ತೆಗಳಲ್ಲಿ ಜನರು ಬೀಡು ಬಿಟ್ಟಿದ್ದಾರೆ. ರಾಜ್ಯ ಸಕರ್ಾರದ ವಿರುದ್ಧ ವಾಗ್ದಾಳಿ ನಡೆಸುವ ವಿರೋಧ ಪಕ್ಷಗಳ ನಾಯಕರು ಮುಂದಿನ ಚುನಾವಣೆಗೆ ಹಣಕಾಸು ಬಂಡವಾಳದ ಬದಲು ಕಾವೇರಿ ನೀರನ್ನೇ ಬಂಡವಾಳವನ್ನಾಗಿ ಬಳಸಲು ಹರಸಾಹಸ ಮಾಡುತ್ತಿದ್ದಾರೆ. ಈ ಎಲ್ಲ ಪ್ರಹಸನಗಳ ನಡುವೆ ರಾಜ್ಯದ ಜನಸಾಮಾನ್ಯರು ಗೊಂದಲದಲ್ಲಿ ಸಿಲುಕಿದ್ದಾರೆ.
ಕಾರಣ ಇಷ್ಟೇ, ಒಂದು ಚುನಾಯಿತ ಸಕರ್ಾರ ಜನರ ಭಾವನೆಗಳಿಗೆ ಶರಣಾಗಬೇಕೇ ಅಥವಾ ತನ್ನ ಸಾಂವಿಧಾನಿಕ ಕರ್ತವ್ಯವನ್ನು ನಿಭಾಯಿಸಬೇಕೇ ಎಂಬ ಜಿಜ್ಞಾಸೆ ಇನ್ನೂ ಬಗೆಹರಿಯಬೇಕಾಗಿದೆ. ಬಿಜೆಪಿ ಸಕರ್ಾರ ತಮಿಳುನಾಡಿಗೆ ನೀರು ಹರಿಯಲು ಬಿಟ್ಟು ಕನರ್ಾಟಕದ ಜನತೆಗೆ ದ್ರೋಹ ಬಗೆದಿದೆ ಎಂದು ಆರೋಪಿಸಿವುದು ಭಾವನಾತ್ಮಕ ನೆಲೆಗಟ್ಟಿನಲ್ಲಿ ಸರಿ ಎನಿಸಬಹುದು. ಆದರೆ ವಾಸ್ತವತೆಯ ದೃಷ್ಟಿಯಿಂದ ನೋಡಿದಾಗ ಸುಪ್ರೀಂ ಕೋಟರ್್ ಆದೇಶದ ಹಿನ್ನೆಲೆಯಲ್ಲಿ ರಾಜ್ಯ ಸಕರ್ಾರದ ಆಯ್ಕೆಗಳೇನಿದ್ದವು ? ಕಾವೇರಿ ನದಿ ಪ್ರಾಧಿಕಾರದ ತೀಮರ್ಾನವನ್ನು ಧಿಕ್ಕರಿಸುವ ರಾಜ್ಯದ ಕ್ರಮವನ್ನೇ ತೀವ್ರವಾಗಿ ಖಂಡಿಸಿರುವ ಸುಪ್ರೀಂ ಕೋಟರ್್ ನ್ಯಾಯಾಧೀಶರು, ರಾಜ್ಯ ಸಕರ್ಾರಕ್ಕೆ ತನ್ನ ಸಾಂವಿಧಾನಿಕ ಹೊಣೆಗಾರಿಕೆಯನ್ನು ಮನದಟ್ಟಾಗುವಂತೆ ಎಚ್ಚರಿಕೆ ನೀಡಿದೆ.
ಇಂತಹ ಪರಿಸ್ಥಿತಿಯಲ್ಲಿ ಸಕರ್ಾರ ಏನು ಮಾಡಬಹುದಿತ್ತು. ಹೆಚ್ಚೆಂದರೆ ಪದತ್ಯಾಗ ಮಾಡಿ ಹುತಾತ್ಮ ಪಟ್ಟ ಪಡೆಯಬಹುದಿತ್ತು. ಆದರೆ ರಾಷ್ಟ್ರಪತಿ ಆಳ್ವಿಕೆಯಲ್ಲಿ ರಾಜ್ಯಪಾಲರು ಕೋಟರ್್ ಆದೇಶ ಪಾಲಿಸುತ್ತಿದ್ದರು. ಅಲ್ಲವೇ ? ಒಂದು ವೇಳೆ ಕಾಂಗ್ರೆಸ್ ಅಥವಾ ಜೆಡಿಎಸ್ ಅಧಿಕಾರದಲ್ಲಿದ್ದಿದ್ದರೆ ಅನ್ಯ ಮಾರ್ಗ ಅನುಸರಿಸುವ ಸಾಧ್ಯತೆಗಳಿದ್ದವೇ ? ಇವು ಗಂಭೀರವಾಗಿ ಯೋಚಿಸಬೇಕಾದ ಪ್ರಶ್ನೆಗಳು. ಇಲ್ಲವಾದಲ್ಲಿ ಕಾವೇರಿಯ ಪವಿತ್ರ ಜಲ ಕ್ಷುಲ್ಲಕ ರಾಜಕಾರಣಕ್ಕೆ ಬಲಿಯಾಗುವ ಸಾಧ್ಯತೆಗಳೇ ಹೆಚ್ಚು.
ಈಗಿನ ಪರಿಸ್ಥಿತಿಯಲ್ಲಿ ನೀರು ನಿಲ್ಲಿಸಲು ಸಾಧ್ಯವಿಲ್ಲ. ಮೇಲ್ಮನವಿ ಸಲ್ಲಿಸುವುದೊಂದೇ ಮಾರ್ಗ. ಹೀಗಿರುವಾಗ ಕನ್ನಡಪರ ಸಂಘಟನೆಗಳು ನಡೆಸುತ್ತಿರುವ ಹೋರಾಟದ ಧೋರಣೆಯಾದರೂ ಏನು ? ಯಾರ ವಿರುದ್ಧ ಹೋರಾಟ ನಡೆಯುತ್ತಿದೆ ? ನೀರು ಬಿಡಲು ಸಾಧ್ಯವಿಲ್ಲ ಎಂದು ರಾಜ್ಯ ಸಕರ್ಾರ ಹೇಳಲಾಗುವುದಿಲ್ಲ, ತನಗೆ ನೀರು ಅಗತ್ಯವಿಲ್ಲ ಎಂದು ತಮಿಳುನಾಡು ಸಕರ್ಾರವೂ ಹೇಳುವುದಿಲ್ಲ ಹಾಗಾದರೆ ಈ ಸಮಸ್ಯೆಗೆ ಪರಿಹಾರವೇನು ? ರಸ್ತೆ ತಡೆ, ಬಂದ್, ರೈಲು ತಡೆ, ಪ್ರತಿಕೃತಿ ದಹನ, ತಮಿಳುನಾಡಿನ ಬಸ್ ಸಂಚಾರ ಸ್ಥಗಿತ, ರಾಜ್ಯವ್ಯಾಪಿ ಬಂದ್ ಇತ್ಯಾದಿ ಹೋರಾಟದ ಮಾರ್ಗಗಳ ಧ್ಯೇಯವಾದರೂ ಏನಿರಬೇಕು ? ಇಲ್ಲಿ ರಾಜಕಾರಣ ಪ್ರಧಾನವೋ, ನದಿ ವಿವಾದದ ಕಾನೂನಾತ್ಮಕ ಅಂಶಗಳು ಪ್ರಧಾನವೋ ಅಥವಾ ಕನ್ನಡ-ಕನ್ನಡಿಗರ ಅಸ್ಮಿತೆಯ ಸುತ್ತ ನಿಮರ್ಿಸಲಾಗಿರುವ ಭಾವನೆಗಳು ಪ್ರಧಾನವೋ ? ವಸ್ತು ಸ್ಥಿತಿ ಎಂದರೆ ಕಾವೇರಿ ನದಿ ವಿವಾದ ಇಡೀ ರಾಜ್ಯದ ಜನತೆಯನ್ನು ಬಾಧಿಸುವ ಸಮಸ್ಯೆಯಲ್ಲ. ಒಂದು ನಿದರ್ಿಷ್ಟ ಪ್ರದೇಶದ ಜನತೆಯ ಸಮಸ್ಯೆ. ಆದರೆ ಭಾವನೆಗಳೇ ಮೇಲುಗೈ ಸಾಧಿಸಿದಾಗ ಇದು ರಾಜ್ಯದ ಬೃಹತ್ ಸಮಸ್ಯೆಯಾಗಿ ಹೊರಹೊಮ್ಮುತ್ತದೆ. ಕಾವೇರಿ-ಕನರ್ಾಟಕ-ಕನ್ನಡಿಗರ ಸಮೀಕರಣ ತೀವ್ರವಾದಂತೆಯೇ, ಕಾವೇರಿ-ತಮಿಳುನಾಡು-ತಮಿಳು ಭಾಷಿಕರ ಸಮೀಕರಣವೂ ಪ್ರತ್ಯಕ್ಷವಾಗುತ್ತದೆ.
ಇಲ್ಲಿ ರಾಜಕೀಯ ಪಕ್ಷಗಳ ನಿಲುವು ಮತ್ತು ಕನ್ನಡ ಪರ ಸಂಘಟನೆಗಳ ಧೋರಣೆ ಮುಖ್ಯವಾಗುತ್ತದೆ. ಎರಡು ರಾಜ್ಯಗಳ ನಡುವಿನ ಶತಮಾನಗಳ ಸಮಸ್ಯೆಯನ್ನು ನ್ಯಾಯಾಂಗದ ಅಂಗಣದಲ್ಲಿ ಪರಿಹರಿಸಿಕೊಳ್ಳುವುದು ಅಸಾಧ್ಯ. ನ್ಯಾಯಾಂಗದ ದೃಷ್ಟಿಯಲ್ಲಿ ಭಾವನೆಗಳಿಗಿಂತಲೂ ವಸ್ತು ಸ್ಥಿತಿ ಮತ್ತು ಸಾಂವಿಧಾನಿಕ ಭಾದ್ಯತೆಗಳು ಪ್ರಧಾನವಾಗುತ್ತವೆ. ರಾಜಕೀಯ ಪಕ್ಷಗಳಿಗೆ ತಮ್ಮ ಜನಬೆಂಬಲ ಮತ್ತು ಈ ವಿವಾದದಿಂದ ಉಂಟಾಗುವ ರಾಜಕೀಯ ಸನ್ನಿವೇಶಗಳು ಪ್ರಧಾನವಾಗುತ್ತವೆ. ಹಾಗಾಗಿಯೇ ಕೆಲವರು ಕಣ್ಣೀರಿಡುತ್ತಾರೆ, ಕೆಲವರು ರಾಜೀನಾಮೆ ನೀಡುತ್ತಾರೆ, ಕೆಲವರು ಸಕರ್ಾರವನ್ನು ಹಳಿಯುತ್ತಾರೆ, ಆಳುವ ಪಕ್ಷದ ಶಾಸಕರು ಕೇಂದ್ರ ಸಕರ್ಾರವನ್ನು ದೂರುತ್ತಾರೆ. ಇನ್ನು ಹೋರಾಟ ನಿರತ ಸಂಘಟನೆಗಳು ರಕ್ತ ಕೊಟ್ಟೇವು ನೀರು ಕೊಡೆವು ಎಂಬ ಭಾವೋದ್ರೇಕದ ಘೋಷಣೆಗಳಿಂದ ತಮ್ಮ ರಾಜ್ಯಭಕ್ತಿಯನ್ನು ಪ್ರದಶರ್ಿಸುತ್ತವೆ. ಸಿನಿಮಾ ನಟರು, ಸಾಹಿತಿಗಳು, ಕ್ರೀಡಾಪಟುಗಳು ಹೀಗೆ ವಿವಿಧ ಕ್ಷೇತ್ರಗಳನ್ನು ಪ್ರತಿನಿಧಿಸುವ ಜನತೆಗೆ ಪಂಥಾಹ್ವಾನ ನೀಡಲಾಗುತ್ತದೆ. ಹೋರಾಟಕ್ಕೆ ಧುಮುಕಿದರೆ ದೇಶಪ್ರೇಮ ಇಲ್ಲವಾದರೆ ದ್ರೋಹದ ಪಟ್ಟ. ಹಾಗಾಗಿ ತಮ್ಮ ಸ್ಥಾನಮಾನ, ಅಸ್ತಿತ್ವಕ್ಕಾಗಿ ಹೋರಾಟದಲ್ಲಿ ತೊಡಗುವುದೂ ಅನಿವಾರ್ಯವಾಗುತ್ತದೆ. ತಮಿಳು ಸಂಘಟನೆಗಳಿಗಂತೂ ಇದು ಹೆಚ್ಚು ಅನಿವಾರ್ಯವಾಗುತ್ತದೆ.
ಆದರೆ ಈ ಎಲ್ಲ ಕ್ರಮಗಳಿಂದ ಸಮಸ್ಯೆ ಪರಿಹಾರವಾಗುವುದೇ ? ಎರಡು ರಾಜ್ಯಗಳ ನಡುವೆ ನೈಸಗರ್ಿಕ ಸಂಪನ್ಮೂಲದ ಹಂಚಿಕೆಗಾಗಿ ಒಂದು ಶತಮಾನದಿಂದಲೂ ವಿವಾದ ಬಗೆಹರಿದಿಲ್ಲ ಎಂದರೆ ಇದು ವ್ಯವಸ್ಥಿತ ಸಂಚು ಎಂದೇ ಭಾವಿಸಬೇಕಾಗುತ್ತದೆ. ರಾಜಕೀಯ ಪಕ್ಷಗಳಿಗೆ ಈ ವಿವಾದ ಚುನಾವಣಾ ಬಂಡವಾಳವಾದರೆ, ಭಾವನೆಗಳ ಸರಕುಗಳನ್ನು ಹೊತ್ತ ಸಂಘಟನಾತ್ಮಕ ಶಕ್ತಿಗಳಿಗೆ ಇದು ಅಸ್ಮಿತೆ, ಅಸ್ತಿತ್ವ ಮತ್ತು ಜನಪರ ಕಾಳಜಿಯ ದ್ಯೋತಕವಾಗಿ ಕಾಣುತ್ತದೆ. ನೀರು ಕೇಳುವುದು, ನೀರು ಬಿಡುವುದು ಎಂಬ ಪರಿಕಲ್ಪನೆಯೇ ಪಾಳೆಗಾರಿಕೆಯ ಸಂಕೇತವಾಗಿ ಕಾಣುತ್ತದೆ.
ಇಲ್ಲಿ ಹಂಚಿಕೊಳ್ಳುವ ಪರಿಭಾಷೆ ಎಲ್ಲೋ ಮರೆಯಾಗಿರುವುದು ವಿಪಯರ್ಾಸ. ಮನುಕುಲದ ಉಳಿವಿಗೆ ಭಾವನೆಗಳು ಮುಖ್ಯ, ಭಾವನಾತ್ಮಕ ಬದುಕೂ ಮುಖ್ಯ ಆದರೆ ಮನುಕುಲ ಬಾಳುವುದು ವಾಸ್ತವತೆಯ ನೆಲೆಗಟ್ಟಿನಲ್ಲೇ ಹೊರತು ಭಾವನೆಗಳ ಅಲೆಯ ಮೇಲಲ್ಲ. ಒಂದು ನೈಸಗರ್ಿಕ ಸಂಪನ್ಮೂಲವಾಗಿ ನದಿ ನೀರನ್ನು ನಾಲ್ಕು ರಾಜ್ಯಗಳು ಹಂಚಿಕೊಳ್ಳುವುದು ಅನಿವಾರ್ಯ. ಯಾವ ಪ್ರಮಾಣದಲ್ಲಿ ಹಂಚಿಕೊಳ್ಳಬೇಕು, ಕೊರತೆ ಇದ್ದ ಸಂದರ್ಭದಲ್ಲಿ ಎಷ್ಟು ಹಂಚಿಕೊಳ್ಳಬೇಕು ಎಂದು ವಿವೇಕಯುತವಾಗಿ ನಿರ್ಧರಿಸುವ ದಾಷ್ಟ್ರ್ಯತೆ ಇಲ್ಲಿ ಅತ್ಯಗತ್ಯ ಎನಿಸುತ್ತದೆ.
ಈ ದಾಷ್ಟ್ರ್ರ್ಯತೆ ಇರಬೇಕಾದ್ದು ಉಭಯ ರಾಜ್ಯಗಳ ರೈತ ಸಮುದಾಯಗಳಲ್ಲಿ. ರೈತ ಸಂಘಟನೆಗಳು ಪ್ರಬುದ್ಧತೆಯಿಂದ ವತರ್ಿಸಿದಲ್ಲಿ ಭಾವನೆಗಳಿಗೆ ಬಲಿಯಾಗದೆ, ಕಾವೇರಿ ನದಿಯಲ್ಲಿ ಪ್ರೀತಿ, ಸದ್ಭಾವನೆಗಳನ್ನು ಹರಿಸಬಹುದು. ಇಲ್ಲವಾದಲ್ಲಿ ದ್ವೇಷದ ಅಲೆಗಳು ಎರಡೂ ಕಡೆಯಿಂದ ಅಪ್ಪಳಿಸುತ್ತಲೇ ಇರುತ್ತವೆ. ಕಾವೇರಿ ಮೌನವಾಗಿ ಹರಿಯುತ್ತಲೇ ಇರುತ್ತಾಳೆ, ಕಾವೇರಿದ ಸನ್ನಿವೇಶ ಉಲ್ಬಣಿಸುತ್ತಿರುತ್ತದೆ. ಇದು ಅಗತ್ಯವೇ ? ಯೋಚಿಸೋಣ. ಕನರ್ಾಟಕ ಬಂದ್ ಆಚರಿಸುವ ಮುನ್ನ ಬಂದ್ ಆಗಿರುವ ನಮ್ಮ ಮುಕ್ತ ಚಿಂತನೆಗಳಿಗೆ ಬಿಡುಗಡೆ ನೀಡೋಣವೇ ?






0 Comments