ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಟ್ಟ ನಿರ್ದೇಶಕರ ಅಳಲು: ನಾವು ಹೋಗುವ ಮುನ್ನ ನೀವೂ ಬನ್ನಿ …

ಒಂದು ಗೌರವಾನ್ವಿತ ನಿರ್ಗಮನವನ್ನು ಆಶಿಸುತ್ತ

ಆತ್ಮಿಯರೆ,
ನಿಮಗೆ ಗೊತ್ತಿರುವ ಹಾಗೆ ಸದ್ಯದ ಸ್ಥತಿಯಲ್ಲಿ ಮಲ್ಟಿಪ್ಲೆಕ್ಸಗಳು ನಮ್ಮ ಸಿನಿಮವನ್ನ ಓಡಿಸುವುದು ಡೌಟು ಮತ್ತು ನಿಮಗೆ ಗೊತ್ಶ್ನಾತಿರುವ ಹಾಗೆ ನನಗೆ ಮಾರ್ಕೆಟಿಂಗ್ ಮಣ್ಭಂಗಟ್ಟೆನೂ ಬರಲ್ಲ. ಅದಕ್ಕೆ ನಾನು ಯೋಚಿಸಿದ್ದು. ಇನ್ನೂ ತನಕ ಕಾಂಪಿಟೇಷನ್ನಿಗೆ ಬಿದ್ದು ನಾವು ಅಷ್ಟೋ ಇಷ್ಟೋ ಥೇಟರ್ನಲ್ಲಿ ಬಿಡುಗಡೆ ಮಾಡಿದ್ವಿ. ಎಂಥ ಸಾ ಆಗಿಲ್ಲ. ಎಲ್ಲ ಮಾಲೀಕರು ಮೊಖಕ್ಕೆ ಉಗಿತ್ತಿದ್ದಾರೆ. ಮಲ್ಟಿಪ್ಲೆಕ್ಸಿದು ಅದೇ ಕಥೆ. ಅದಕ್ಕೆ ಹೇಗೊ ಅವರು ಮುಂದಿನ ಶುಕ್ರವಾರ ತೆಗೀಬೇಕು ಅಂತ ಇದ್ದಾರೆ. ಅಲ್ಲಿಗೆ ಗುರುವಾರ ಲಾಸ್ಟ್ಟಡೆ. ಆದ್ರೆ ಓರಾಯನ್ ಮಾಲ್ ಅಲ್ಲಿ ಬುಧವಾರ ಟಿಕೆಟ್ ದರ ಕಡಿಮೆ ಇರುತ್ತೆ (100ರ ಒಳಗೆ. 80 ಇರಬೇಕು) ಮತ್ತು ಬುಧವಾರ ರಜೆ ಇದೆ. ಮದ್ಯಾಹ್ನ 1 ಘಂಟೆಗೆ.
ಅದಕ್ಕೆ ಒಂದು ವೇಳೆ ಇದೇ ನಮ್ಮ ಚಿತ್ರದ ಕೊನೆಯ ಶೋ ಆದರೆ, ಒಂದು ಹೌಸ್ ಫುಲ್ ಎಕ್ಸಿಟ್ ತಗೊಂಡು ಬಿಡುವ ಅಂತ. ಇನ್ನೂ ಹೊರಾಡಲು ನಾವೆಲ್ಲ ಅಣಿ ಇದ್ದರೂ, ಅದ್ಯಾಕೊ ಥೇಟರ್ ಬಾಡಿಗೆನೂ ಬರದೇ ಇದ್ದರೆ, ಹೇಳೋಕೂ ಏನು ಮರ್ಯಾದೆ ಇರುತ್ತೆ. ಅದಕ್ಕೆ now I’m fighting for an honourable death. ಬುಧವಾರ ರಜೆ ಇದೆ. ಟಿಕೆ್ಟ ಕಡಿಮೆ. ನಾನು ಅವತ್ತು ಟಿಕೆಟ್ ಕೊಟ್ಟು ಸಿನಿಮ ನೋಡ್ತೀನಿ. ನಿಮ್ಮಲ್ಲಿ ಅನುಕೂಲಾರಾಮವಾಗಿ ಸಾಧ್ಯ ವಾದವರು ಮತ್ತು ಆಸಕ್ತಿ ಇರೋರು ಅಂದು ಬಂದು ಸಿನಿಮ ನೋಡಿದ್ರೆ, ಒಂದಾದ್ರು ಈ ಉಳ್ಳವರ ಕಾಳಜಿ ರಹಿತ ಮಲ್ಟಿಪ್ಲೆಕ್ಸಿನಲ್ಲಿ ಒಂದಾದ್ರು ಹೌಸ ಫುಲ್ ಶೋ ನೋಡಬಹುದು.
ಇದರಿಂದ ಎರೆಡು ಲಾಭ ಇದೆ. ಒಂದು ನೀವೆಲ್ಲ ಇಷ್ಟ ಪಟ್ಟಿರುವ ಚಿತ್ರಕ್ಕೆ ಒಂದು ಗೌರಾನ್ವಿತ ನಿರ್ಗಮನ ದೊರಕಲಿದೆ. ಇನ್ನೊಂದು ಬಹುಶಃ ಇದರಿಂದ ಮಲ್ಟಿಪ್ಲೆಕ್ಸಗಳು ಚಿತ್ರ ಮಂದಿರ ತುಂಬಿದೆ ಅಂತ ಅಂದ್ಕೊಂಡು ಇನ್ನೊಂದು ವಾರ ಕೊಡಬಹುದು. ನಾನು ಹೀಗೆ ನೇರವಾಗಿ ಎಲ್ಲ ಹೇಳುವುದರ ಬಗ್ಗೆ ನನ್ನ ತಂಡದವರು ಗುರ್ರ್ ಅನ್ನುತ್ತಾರೆ. ಬಟ್ ಹೀಗಿದೆ ಸ್ವಾಮಿ.
ಆದರೆ ದಯವಿಟ್ಟು, ಅಯ್ಯೊ ಪಾಪ ಅಂತ ಅಂದುಕೊಂಡು ಬರಬೇಡಿ. ಒಂದು honourable exitಗೆ ಎದೆಯಲ್ಲಿ ನಿಗಿನಿಗಿ ಉರಿಯುವ ಗೌರವದ ಬೆಂಕಿ ಇರಬೇಕು. ಅನುಕಂಪದ ಕರಟು ಮಸಿ ಬೇಡ, ಅಂತ ನನ್ನ ನಂಬಿಕೆ. ಬೀಳ್ಕೊಡುಗೆಯ ತರಹವೇ ಅಂದುಕೊಳ್ಳಿ.
ಜಟ್ಟವನ್ನ ಹೆಚ್ಚಿನ ಜನರು ನೋಡಿಲ್ಲ. ಆದರೆ ನೋಡಿದವರೆಲ್ಲ ಹೆಚ್ಚಿನವರಾಗಿದ್ದಾರೆ. ಅಂತ ಜನರ ಅಭಿಪ್ರಾಯದ ಮೇಲೆ ನನ್ನ ಅಭಿಪ್ರಾಯ. ಈಗ ಇದು ನೂರು ದಿನ ಹೋಗಲಿ, ಕೋಟಿ ಸಂಪಾದಿಸಲಿ ಇವೆಲ್ಲ ಸಧ್ಯಕ್ಕೆ ಆಗದೇ ಇರೋ ಮಾತುಗಳು. ಒಂದು ಸಿನಿಮಾವನ್ನು ಪ್ರೀತಿಸುವ ಎಲ್ಲರೂ ಒಂದು ಮದ್ಯಾಹ್ನ ಒಟ್ಟಿಗೆ ಕಳೆಯಬಹುದು. ನಿಮ್ಮ ಇಚ್ಛಾನುಸಾರವಾಗಿ ಪರಾಮರ್ಶಿಸಿ.
ಶರಣು
 

‍ಲೇಖಕರು G

16 October, 2013

7 Comments

  1. Manoj

    “ಜಟ್ಟವನ್ನ ಹೆಚ್ಚಿನ ಜನರು ನೋಡಿಲ್ಲ. ಆದರೆ ನೋಡಿದವರೆಲ್ಲ ಹೆಚ್ಚಿನವರಾಗಿದ್ದಾರೆ”…!!!!!

  2. ರಮ್ಮಿಗ

    ಈ ಸಿನೆಮಾ ನಾನು ನೋಡಿಲ್ಲ. ಆದರೆ ರಸ್ತೆ ಪಕ್ಕದ ಕಂಪೌಂಡ್ ಗೋಡೆಗಳ ಮೇಲೆ ಪೋಸ್ಟರ್ ನೋಡಿದ್ದೇನೆ. ಒಂದು ಹೆಣ್ಣು ಬಟ್ಟೆ ಎಲ್ಲಾ ಅಸ್ತವ್ಯಸ್ತವಾಗಿ ನೆಲದ ಮೇಲೆ ಬಿದ್ದು ಆರ್ತಳಾಗಿ ನೋಡುತ್ತಿದ್ದಾಳೆ. ಆಕೆಗೆ ಒಂದು ಬೆಲ್ಟ್ ಕಟ್ಟಲಾಗಿದೆ. ಬೆಲ್ಟಿನ ಒಂದು ತುಂಡಿಯನ್ನು ರೌಡಿ ತರಹ ಕಾಣುವನೊಬ್ಬ ಹಿಡಿದು ಕ್ರೂರ ದೃಷ್ಟಿ ಬಿಟ್ಟಿದ್ದಾನೆ. “ಸೇದೊಂದೇ ಪರಮ ಸುಖ” ಚಿತ್ರದ ಟ್ಯಾಗ್ ಲೈನ್. ಚಿತ್ರದ ಹೂರಣ ಏನು ಅಂತ ಅರ್ಥ ಮಾಡಿಕೊಳ್ಳಲು ಪೋಸ್ಟರ್ ಹಾಗೂ ಟ್ಯಾಗ್ ಲೈನ್ ಸಾಕು. ನಿರ್ದೇಶಕರ ನೋವಿಗೆ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ, ಕ್ಷಮಿಸಿ.

  3. ಸುಧನ್ವಾ

    ‘ಜಟ್ಟ’ ಸಿನಿಮಾ ಒಳ್ಳೆಯ ಪ್ರಯತ್ನಕ್ಕೆ ಸಿಕ್ಕ ಕೆಟ್ಟ ಫಲದಂತಿದೆ. ದಾಂಪತ್ಯ, ಕೋಮುವಾದ, ಆಧುನಿಕ ಬದುಕು, ಜಾನಪದ ನಂಬಿಕೆಗಳು..ಹೀಗೆ ಹಲವಾರು ವಿಷಯಗಳನ್ನು ಮೈಮೇಲೆಳೆದುಕೊಂಡು ಸೋತುಹೋಗಿದೆ. ಉದ್ದೇಶ ಒಳ್ಳೆಯದಾಗಿದ್ದರೂ ತೆರೆಯ ಮೇಲೆ ಯಾವ ವಿಭಾಗಗಳಲ್ಲೂ ಈ ಸಿನಿಮಾ ನನಗೆ ಇಷ್ಟವಾಗಲಿಲ್ಲ. ದೃಶ್ಯ ಮಾಧ್ಯಮದ ಭಾಷೆ ಮರೆತಂತೆ, ಅದರ ಸಾಧ್ಯತೆಗಳನ್ನು ಒಳಗೊಳ್ಳಲಾಗದಂತೆ ಕಂಡಿತು. ಈ ಸಿನಿಮಾವನ್ನು ಜನ ಥಿಯೇಟರಿಗೆ ಬಂದು ನೋಡಬೇಕು ಅಂತ ಅಪೇಕ್ಷಿಸುವುದು ತುಂಬಾ ಕಷ್ಟ.

  4. Pramod

    Don’t judge a movie by its poster neither trailer

    • ರಮ್ಮಿಗ

      ನೀವು ಹೇಳುವುದನ್ನು ಒಪ್ಪುತ್ತೇನೆ, ಆದರೆ ಸದಭಿರುಚಿಯ ಪೋಸ್ಟರ್ ಕೂಡ ಮಾಡಲಾಗದವರು ಚಿತ್ರ ಚೆನ್ನಾಗಿ ಮಾಡಿರುತ್ತಾರೆ ಅಂತ ಪ್ರೇಕ್ಷಕರಿಗೆ ಹೇಗೆ ಗೊತ್ತಾಗಬೇಕು ಹೇಳಿ?

      • Pramod

        ನಿರ್ದೇಶಕರು ಸಿನೆಮಾದ ಕೆಲವೊ೦ದು ವಿಷಯಗಳಲ್ಲಿ ಚಿತ್ರವನ್ನು ಪೋಲಿಶ್ ಮಾಡಬೇಕು. ಮು೦ದಿನ ಚಿತ್ರಗಳಲ್ಲಿ ಈ ನ್ಯೂನತೆಗಳನ್ನು ಹೋಗಲಾಡಿಸಿ ಒಳ್ಳೆಯ ಚಿತ್ರ ಕೊಡುತ್ತಾರೆ. ಕೊಡಬೇಕು ಎ೦ಬುದು ನಮ್ಮ ಆಶಯ. ಒ೦ದ೦ತೂ ಸತ್ಯ ಮೈನ್ ಸ್ಟ್ರೀಮ್ ರಿಮೇಕ್ ಕೊಚ್ಚೆಗಿ೦ತ ಎಷ್ಟೋ ವಾಸಿ.

  5. ಅರುಣ್ ಜೋಳದಕೂಡ್ಲಿಗಿ

    ಜಟ್ಟ ನಿಜಕ್ಕೂ ಹೊಸ ಪ್ರಯೋಗ. ಹೀಗೆ ಹೊಸ ಪ್ರಯೋಗಗಳನ್ನು ಮಾಡಿದಾಗ ಈಗಾಗಲೆ ಕನ್ನಡ ಸಿನೆಮಾ ನೋಡುವಿಕೆಯ ಒಂದು ಗ್ರಹಿಕೆ ಇದೆ, ಅದನ್ನು ತಕ್ಷಣಕ್ಕೆ ಬಿಡಿಸಿಕೊಂಡು ಬೆಂಬಲಿಸುವುದೂ ಕಷ್ಟವೆ. ಹೊಸ ಪ್ರಯೋಗದಲ್ಲಿ ಇಂತಹ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ.ಇದರಾಚೆಗೂ ನಿಮಗೆ ಯಶಸ್ಸು ಸಿಗಲಿ ಎಂದು ಆಶಿಸುವೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading