ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾನೆತ್ತಿಕೊಂಡೆ ಬಿದ್ದ ಆಕಾಶವನ್ನು..

ನಾನು ಆಕಾಶವನ್ನು ಎತ್ತಿಕೊಂಡೆ
ಆಂಗ್ಲ ಮೂಲ: ರವಿಚಂದ್ರ ಚಿಟ್ಟಂಪಳ್ಳಿ
ಕನ್ನಡಕ್ಕೆ: ಕಮಲಾಕರ ಕಡವೆ

ನಾನೆತ್ತಿಕೊಂಡೆ ಬಿದ್ದ ಆಕಾಶವನ್ನು,
ಬೀದಿಬದಿಯ ರದ್ದಿಯಂಗಡಿಯಲ್ಲಿ.
ನನ್ನ ಪ್ಯಾಂಟಿನ ಜೇಬಿನಲ್ಲಿ ಅಚ್ಚುಕಟ್ಟಾಗಿ
ಮಡಿಸಿಡಲು ಸರಿಯಿತ್ತು ಅದು.

ಪೇಟೆಯ ರಸ್ತೆಯಲ್ಲಿ ಸುತ್ತಾಡಿದೆ.
ಅಲ್ಲೊಂದು ಒಂಟಿ ದಾಸನಹಕ್ಕಿ ಬೀಗುತ್ತಾ ಕುಳಿತಿತ್ತು
ಬೋಳು ರೋಸ್ ಆಪಲ್ ಮರದ ಮೇಲೆ,
ಕೆಲಕಾಲ ಇದ್ದು ಮರೆಯಾಗುವ ನೆನಪಿನಂತೆ.

ಋತುಗಳ ವ್ಯವಹಾರ ನಡೆಸಿದ ಭೂಮಿಯು
ತನ್ನ ಆಸ್ತಿಯನ್ನು ಹಾಳುಗೈದಂತೆ ತೋರುತ್ತಿತ್ತು:
ನನ್ನ ಜೇಬಿನಿಂದ ಅಸಂಖ್ಯ ನಕ್ಷತ್ರಗಳು
ಬಹುಭಾರದ ಚಿಲ್ಲರೆಯಾಗಿ ಚೆಲ್ಲಿದವು.

ಕೈಚೀಲ ತೀರಾ ಅಂದಗೆಟ್ಟು, ಅಸ್ತವ್ಯಸ್ತಗೊಂಡು
ಬಳಕೆಗೆ ಬಾರದಷ್ಟು ಸವೆದುಹೋಗಿತ್ತು,
ಎಂದೇ ಅದನ್ನು ಎತ್ತಿ ಹೆಗಲ ಮೇಲೆ ಎಸೆದಿದ್ದೇನೆ:
ಮತ್ತೆ ದಾಸನಹಕ್ಕಿಯ ಗರಿಗಳ ಹೊಳಪು!

‍ಲೇಖಕರು Admin

4 January, 2026

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading