ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾಟ್ಯ ರಂಗದ ಹೆಮ್ಮೆ ಹೆಚ್ಚಿಸಿದ ಸಂಭ್ರಮ ಈ ತಿಂಗಳ ಪ್ರದರ್ಶನದಲ್ಲಿ!..

ನೀವೂ ಬಂದು ಜೊತೆಯಾದ್ರೆ ನಮಗೂ ಖುಷಿ….

ನಮಸ್ತೆ…

ಎಂದಿನಂತೆ ಈ ತಿಂಗಳು ನೃತ್ಯ ಕಾರ್ಯಕ್ರಮ ನಡೆಯಲಿದೆ. ಆದರೂ ಕೇವಲ‌ ಎಂದಿನಂತಲ್ಲ. ಮಹಿಳಾ ದಿನಾಚರಣೆ ಈ ಮಾಸದ ವಿಶೇಷ!

ನಾಟ್ಯರಂಗದ ಕಲಾವಿದೆಯರಾದ ಅನ್ನಪೂರ್ಣ.ಎಸ್.ಕೆ. ರಾವ್, ವಿನೀತಾಶೆಟ್ಟಿ‌ ಹಾಗೂ ವೀಣಾಪ್ರತಾಪ್ ವರ್ಮ ನೃತ್ಯ ಪ್ರದರ್ಶನ ನೀಡಲಿದ್ದಾರೆ.

ಈ ತ್ರಿಮೂರ್ತಿಗಳ ಪ್ರದರ್ಶನದಲ್ಲಿ ವಿಶೇಷ ಏನಿದೆ ಅಂತೀರಾ?

ಇವರ್ಯಾರು ಪ್ರದರ್ಶನ ಕಲಾವಿದರಾಗೋ ಹಂಬಲದಿಂದ ನೃತ್ಯಕಲಿತದ್ದಲ್ಲ. ಪ್ರಶಸ್ತಿಗಳ ಬೆನ್ನು ಹತ್ತಿದವರು ಖಂಡಿತಾ ಇಲ್ಲ. ಗೃಹಿಣಿಯರಾಗಿದ್ದು ಕೌಟುಂಬಿಕ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸುತ್ತಾ ತಮಗಾಗಿ ಒಂದಷ್ಟು ಸಮಯವನ್ನು ವಿನಿಯೋಗಿಸುವ ಕನಸು ಕಂಡ ವನಿತೆಯರು.

ಇಲ್ಲಿ ಯಾವ ಸ್ಪರ್ಧೆಗಳಿಲ್ಲ, ಹೋರಾಟಗಳಿಲ್ಲ, ಮಹತ್ತರವಾದ ಧೋರಣೆಗಳಿಲ್ಲ, ವಾದಗಳಿಲ್ಲ…. ಬದುಕು ಇದೆ ಅಷ್ಟೆ. ಕಲೆಯ ಜೊತೆಗಿನ ಒಡನಾಟ. ಮತ್ತು ಆ ಒಡನಾಟದಿಂದ ಬದುಕಿನ ಒತ್ತಡಗಳಿಂದ ಹಗುರಾಗುವ ಪ್ರಯತ್ನ ಇವರದ್ದು. ಅದು ತಮ್ಮದೇ ಆದ ಒಂದಷ್ಟು space ನ್ನು ನೃತ್ಯದಲ್ಲಿ ಈ ಹೆಂಗಳೆಯರು ಕಂಡುಕೊಂಡಿದ್ದಾರೆ. ಕಲೆ ಅವರೊಂದಿಗೆ ಕಲೆತಿದೆ. ಖುಷಿ ಕೊಟ್ಟಿದೆ.

ಅಷ್ಟು ಮಾತ್ರ ಅಲ್ಲ…

ಆದಿನ ಅಪರೂಪದ ಜಾದು ಕಲಾವಿದೆ ಸಾಧಕಿ ಶಮಾಪರ್ವೀನ್ತಾಜ್ ನಮ್ಮ ಜೊತೆಗಿರುತ್ತಾರೆ.

ಇನ್ನೊಬ್ರಿಗೆ ಖುಷಿ ಕೊಡೋದಕ್ಕಿಂತ ದೊಡ್ಡ ಖುಷಿ ಬದುಕಿನಲ್ಲಿ ಇನ್ನೇನಿದೆ ಅಲ್ವ? ತಮ್ಮವರ ಖುಷಿಗಾಗಿ ತಮ್ಮನ್ನೇ ಮರೆತು ತೊಡಗಿಸಿಕೊಳ್ಳುವ ಗೃಹಿಣಿಯರು ತಮ್ಮ ಖುಷಿಗಾಗಿ ನೃತ್ಯ ಕಲ್ತಿದಾರೆ. ಅದನ್ನು ನಿಮ್ಮೆದುರು ಪ್ರದರ್ಶನ ಮಾಡ್ತಾರೆ. ನೀವೂ ಬಂದ್ರೆ ಅವರ ಖುಷಿ ಹೆಚ್ಚಾಗ್ತದೆ. ಅವರ ಖುಷಿಯಲ್ಲಿ ನಮ್ಮದೂ ಪಾಲಿದೆ ಅಂತ ನಾವೂ ಖುಷಿ ಪಡ್ತೇವೆ… ಖುಷಿಯಿಂದ ಬನ್ನಿ… ಖುಷಿ ಪಡೆದು ತೆರಳಿ…..

ದಿನಾಂಕ : 12-03-2022
ಶನಿವಾರ ಸಂಜೆ 6.00 ಗಂಟೆಗೆ
ಸ್ಥಳ: ಕೀರ್ತನಾ ರೆಸಿಡೆನ್ಸಿ, ಬೊಳುವಾರು. ಪುತ್ತೂರು.

‍ಲೇಖಕರು Admin

9 March, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading