ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾಗು ಟ್ಯಾಟುಯಿಸ್ಟ್‌ ಜೊತೆ ʼಫಟಾ ಫಟ್‌ʼ

ಕುಂಚ, ಬೆರಳು, ಕಾಲಿನಿಂದ ಪೇಂಟಿಂಗ್‌ ಮಾಡಿರುವುದನ್ನ ಕಂಡಿದ್ದೇವೆ. ಆದರೆ ಇಲ್ಲೊಬ್ಬ ಕಲಾವಿದ  ಮೂಗಿನಿಂದ ಊಸಿರಾಡುವುದಷ್ಟೇ ಅಲ್ಲ ಚಿತ್ರವನ್ನೂ ಬಿಡಿಸಬಹುದು ಎಂದು ತೋರಿಸಿಕೊಟ್ಟಿದ್ದಾರೆ.

ಹೌದು ದಾವಣಗೆರೆ ಜಿಲ್ಲೆಯವರಾದ ನಾಗರಾಜ ಭಿನ್ನವಾಗಿ ಮೂಗಿನಿಂದ ಚಿತ್ರವನ್ನು ಬಿಡಿಸುತ್ತಾರೆ.

ಇವರು ಮೂಗಿನಿಂದ ಮಹಾನಾಯಕ ಧಾರಾವಾಹಿಯ ಚಿತ್ರವನ್ನು ಬಿಡಿಸಿದ್ದು, ತಮ್ಮ ಫೇಸ್‌ ಬುಕ್‌ ನಲ್ಲಿ ಹಂಚಿಕೊಂಡಿದ್ದಾರೆ.  

ನಾಗರಾಜ ಮೂಗಿನಿಂದ ಚಿತ್ರಬಿಡಿಸುವುದೊಂದೇ ಅಲ್ಲದೆ ಪೆನ್ಸಿಲ್‌ ಸ್ಕೆಚ್‌, ವಾಲ್‌ ಪೇಂಟ್‌, ಟ್ಯಾಟೂ ಹಾಕುವುದು, ಮೈಕ್ರೋ ಆರ್ಟ್‌ ಗಳನ್ನೂ ಮಾಡುತ್ತಾರೆ.

ನಾಗರಾಜ ಅವರು ಮೂಗಿನ ಆರ್ಟ್ ಬಗ್ಗೆ ʼಅವಧಿʼ ನಡೆಸಿದ ಫಟಾ ಫಟ್‌ ಸಂದರ್ಶನ ಇಲ್ಲಿದೆ. 

ಮೂಗಿನಿಂದ ಚಿತ್ರ ಬಿಡಿಸುವುದನ್ನು ಕಲಿತದ್ದು ಹೇಗೆ ?

> ಯೂಟ್ಯೂಬ್‌ ನಲ್ಲಿ ನೋಡಿ ಕಲಿತದ್ದು.

ನಾಗರಾಜ ನೀವು ಹಾವು ಅಲ್ಲ ತಾನೇ ?

> ಖಂಡಿತ ಅಲ್ಲ.

ಮೂಗನ್ನು ಕುಂಚವನ್ನಾಗಿಸಿಕೊಂಡಿದ್ದು ಹೇಗೆ ?

> ಭಿನ್ನವಾಗಿ ಏನಾದರೂ ಮಾಡಬೇಕು ಅಂದುಕೊಂಡಿದ್ದೆ. ಹಾಗಾಗಿ ಮೂಗಿನಿಂದ ಚಿತ್ರ ಬಿಡಿಸುವುದನ್ನ ಕಲಿತೆ. 

ಈ ಕಲೆಗೆ ನಿಮಗೆ ಸ್ಪೂರ್ತಿ ಯಾರು ?

> ಯಾರು ಇಲ್ಲ. ನನ್ನ ಕಲೆಗೆ ನನ್ನ ಮನೆಯವರು ಸಹಕಾರ ನೀಡುತ್ತಾರೆ. ಅದೇ ನನಗೆ ಸ್ಪೂರ್ತಿ.

ಮೂಗಿನಿಂದ ಮತ್ತೆ ಯಾರ ಚಿತ್ರವನ್ನು ಬಿಡಿಸಬೇಕು ಅಂದುಕೊಂಡಿದ್ದೀರಿ ?

> ತುಂಬಾ ಜನ ಚಿತ್ರ ಬಿಡಿಸಿಕೊಡಿ ಎಂದು ಕೇಳಿದ್ದಾರೆ. ಆದರೆ ಯಾರ ಚಿತ್ರ ಬಿಡಿಸುತ್ತೇನೆಂದು ನನಗೂ ತಿಳಿದಿಲ್ಲ.

‍ಲೇಖಕರು Avadhi

7 October, 2020

1 Comment

  1. T S SHRAVANA KUMARI

    ಇಂಟೆರೆಸ್ಟಿಂಗ್

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading