ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾಗತಿಹಳ್ಳಿ ಚಂದ್ರಶೇಖರ್ ಪುಸ್ತಕ ಬಿಡುಗಡೆ

1 Comment

  1. mahipalreddy munnur

    ನಾಗತಿಹಳ್ಳಿ ಚಂದ್ರಶೇಖರ ನನ್ನ ಪ್ರೀತಿಯ ಲೇಖಕ. ನಾನು ಅತ್ಯಂತ ಇಷ್ಟಪಡುವ ಸಾಹಿತಿ. ಅವರ ಬರಹಗಳೆಂದರೆ, ನನಗೆ ಕೊಬ್ಬರಿ ಬೆಲ್ಲ. ಗುಲ್ಬರ್ಗಕ್ಕೆ ಬಂದಾಗ ಅವರ ಜೊತೆ ನಾನು, ಕತೆಗಾರ ಚಿತ್ರಶೇಖರ ಕಂಠಿ ಮಾತಾಡಿದ್ವಿ. ಊಟ ಮಾಡಿದ್ವಿ. ಹರಟೆ ಹೊಡೆದಿದ್ವಿ.

    ಗುಲ್ಬರ್ಗದ ಅಮರ ಪ್ರಕಾಶನದಿಂದ ನಾಗತಿಹಳ್ಳಿ ಬಗ್ಗೆ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ ನಾಗತಿಹಳ್ಳಿ ಬಂದಿದ್ರು. ಅವರ ಸಮ್ಮುಖದಲ್ಲಿಯೇ ನಾನು ಅವರ ಅಂಕಣ ಬರಹಗಳಾದ ‘ ನನ್ನ ಪ್ರೀತಿಯ ಹುಡುಗಿಗೆ’ ಎರಡು ಸಂಪುಟಗಳ ಬಗ್ಗೆ ಪ್ರಬಂಧ ಮಂಡಿಸಿದ್ದೆ. ನನ್ನ ಜೊತೆ ಆರ್.ಜಿ,ಹಳ್ಳಿ ನಾಗರಾಜ ಮತ್ತಿತರರು ಇದ್ದರು.

    ನನ್ನ ಮಾತುಗಳನ್ನು ಆಲಿಸಿದ ನಾಗತಿಹಳ್ಳಿ ಆಮೇಲೆ, ‘ಚೆನ್ನಾಗಿ ನನ್ನನ್ನು ಓದಿಕೊಂಡಿದ್ದೀರಿ. ‘….ಹುಡುಗಿ’ ಅಂಕಣ ಅಷ್ಟು ಪರಿಯಾಗಿ ಗಮನವಿಟ್ಟು ಓದಿದ್ದೀರಿ.ಥ್ಯಾಂಕ್ಸ್’ ಅಂದಿದ್ರು.
    ಅದಾಗಿ ಸರಿಸುಮಾರು ಐದಾರು ವರ್ಷಗಳಾದರೂ, ನನಗಿನ್ನು ನೆನಪಿದೆ.

    ಇವತ್ತಿಗೂ ನಾಗತಿಹಳ್ಳಿ ಅವರಿಂದ ಹೊಸ ಬರಹ, ಪುಸ್ತಕ ಬಂದರೆ, ಖರೀದಿ ಮಾಡಿಯೇ ಓದುತ್ತೇನೆ.

    ಅವರು ಫೆಂಟಾಸ್ಟಿಕ್ ರೈಟರ್.

    ನೂರ್ಕಾಲ ಬಾಳಲಿ ಎನ್ನೋದೇ ನಮ್ಮಂಥವರ ಅಭಿಮಾನದ ಮಾತು.

    ಪ್ರೀತಿಯಿಂದ
    ಮಹಿಪಾಲರೆಡ್ಡಿ ಮುನ್ನೂರ್
    ಗುಲ್ಬರ್ಗ.
    ಜಂಗಮ – 9611365002

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading