ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಮ್ಮ ನಡುವಣ ದೊಡ್ಡ ಶಕ್ತಿ..

ಪುರುಷೋತ್ತಮ ಬಿಳಿಮಲೆ 

ಶ್ರೀನಿವಾಸ್ ನಮ್ಮ ನಡುವಣ ದೊಡ್ಡ ಶಕ್ತಿ. ಎಷ್ಟೋ ವಿಷಯದಲ್ಲಿ ಅವರು ನಮ್ಮ ಶ್ರದ್ಧೆಯ ಕೇಂದ್ರ ಕೂಡಾ ಹೌದು.

ತಮ್ಮ ತಕ್ಷಣದ ಮತ್ತು ಪ್ರಖರ ಪ್ರತಿಕ್ರಿಯೆಗಳ ಮೂಲಕ ಅವರು ನಮ್ಮನ್ನು ಸದಾ ಎಚ್ಚರಿಸುತ್ತಲೇ ಬಂದಿದ್ದಾರೆ. ಮೂಲತಹ ಅವರು ಬಹಳ ಒಳ್ಳೆಯ ನಟ. ಬ್ರೆಕ್ಟ್ ನ ‘ತಾಯಿ’ಯೂ ಸೇರಿದಂತೆ ಮಂಗಳೂರಿನ ಹೊಸ ಅಲೆಯ ಯಶಸ್ವೀ ನಾಟಕಗಳ ಹಿಂದೆ- ಮುಂದೆ ಶ್ರೀನಿವಾಸ್ ಇದ್ದರು.

ಕರಾವಳಿಯ ಅನೇಕ ಬೆಟ್ಟ-ಗುಡ್ಡಗಳನ್ನು ಹತ್ತಿ ಇಳಿದ ಅವರಿಗೆ ಪ್ರಕೃತಿ ಒಂದು ಕೊನೆಯಿಲ್ಲದ ಚೋದ್ಯವಾಗಿ ಕಂಡಿದೆ. ಹಾಗಾಗಿಯೇ ಅವರಿಗೆ ಶಿವರಾಮ ಕಾರಂತ, ಪೂರ್ಣಚಂದ್ರ ತೇಜಸ್ವಿ , ಮತ್ತು ಕುವೆಂಪು ಅಂದರೆ ತುಂಬಾ ಗೌರವ ಮತ್ತು ಪ್ರೀತಿ.

ಅವರ ತಂದೆ (ಈಗ ದಿವಂಗತರು) ಒಳ್ಳೆಯ ಯಕ್ಷಗಾನ ಕಲಾವಿದರೂ ಆಗಿದ್ದರು. ಈಗ ಸುಳ್ಯದಲ್ಲಿರುವ ಅವರ ತಾಯಿ ಮುಗ್ಧತೆಗೆ ಇನ್ನೊಂದು ಹೆಸರು.

ಕಳೆದ 18 ವರ್ಷಗಳಿಂದ ಮನೆಯೊಳಗೇ ಇರಬೇಕಾಗಿ ಬಂದಿರುವ ಶ್ರೀನಿವಾಸ್ , ತನ್ನ ಅಂತರಂಗದ ಚೈತನ್ಯ ಎಂದೂ ಬತ್ತದಂತೆ ನೋಡಿಕೊಂಡಿದ್ದಾರೆ.

srinivasa karkala with mattu and bilimale

‍ಲೇಖಕರು admin

12 April, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading