ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ನಮ್ಮ ಇಂದಿರೆ…’ – ವೇದಾ ಬರೀತಾರೆ

ವೇದಾ

ನಮ್ಮ ಇಂದಿರೆ ಅತೀ ಸುಂದರಿ ಅಲ್ಲದಿದ್ದರೂ ಸರಳ ಉಡುಗೆಯ, ಸ್ನೇಹಪೂರ್ಣ ಕಣ್ಣುಗಳ, ಸ್ನಿಗ್ದನಗೆಯ ಮೆಲುಮಾತಿನ ಸರಳಸುಂದರಿ ಅಂಬೋದ್ರಲ್ಲಿ ಎರಡು ಮಾತಿಲ್ಲ, ಒಮ್ಮೆ ಅವಳನ್ನ ನೋಡಿದ್ರೆ ನೀವೆಲ್ರೂ ಈ ಮಾತನ್ನ ಒಪ್ಪೇ ಒಪ್ತೀರಾ ಅಂತ ನನ್ಗೊತ್ತು.

ದೊಡ್ಡಮ್ಮ ಓರಿಗಾಮಿಯ ವಿನ್ಯಾಸ ಮಾಡುವುದರಲ್ಲಿ ಮಗ್ನರಾಗಿರುವುದು

ಇಂದಿರೆಗೆ ಹದಿನೈದು ವಯಸ್ಸಾಗುವ ಮೊದಲೇ ಅವಳಪ್ಪ ಅಮ್ಮ ಅವಳಿಗೆ ಮದುವೆ ಮಾಡಿಬಿಟ್ರು, ಅವಳಿಗೆ ವಯಸ್ಸು 30 ಆಗುವ ಹೊತ್ತಿಗೆ 2 ಗಂಡು ಹಾಗು 3 ಹೆಣ್ಣುಮಕ್ಕಳ ತಾಯಾಗಿದ್ಳು ಇಂದಿರೆ . ಪ್ರೀತಿಸುವ ಪತಿ ಹಾಗು ಮುದ್ದಾದ ಮಕ್ಕಳ ಸುಖೀ ಸಂಸಾರ ಅವಳದ್ದಾಗಿತ್ತು , ಆದ್ರೆ ಈ ಸುಖ ಸಂತೋಷ ಇಂದಿರೆಯ ಪಾಲಿಗೆ ಜಾಸ್ತಿ ದಿನವೇನೂ ಉಳಿಯಲಿಲ್ಲ. ಹೀಗೊಂದು ದಿನ ಕೆಲಸಕ್ಕೆಂದು ಲವಲವಿಕೆಯಿಂದ ಹೋದ ಪತಿ ಸಂಜೆ ಹೊತ್ತಿಗೆ ಕೆಂಡಾಮಂಡಲ ಜ್ವರದೊಂದಿಗೆ ವಾಪಸ್ಸಾಗಿದ್ದಷ್ಟೇ ಕಾರಣವಾಗಿ ಒಂದೆರಡು ದಿನ ನರಳಿ ವಿಧಿವಶವಾಗಿದ್ದು ಇಂದಿರೆಗೆ ದೊಡ್ಡ ಆಘಾತವನ್ನೇ ತಂದಿತ್ತು . ಹೆಚ್ಚು ಓದಿರದ ಕಾರಣ ಎಲ್ಲೂ ಕೆಲಸ ಸಿಗದೇ ಅವರಿವರ ಸಹಾಯದಿಂದ ಮಕ್ಕಳನ್ನು ಓದಿಸಿ ಬೆಳೆಸಿ ಮದುವೆ ಮಾಡುವ ಹಂತದವರೆಗೂ ಇಂದಿರೆ ಪಟ್ಟ ನೋವು ಸಂಕಟ ಅವಮಾನಗಳನೆಲ್ಲ ಬರೆಯ ಹೊರಟರೆ ಒಂದು ದೊಡ್ಡಕಾದಂಬರಿಯೇ ಆದೀತಷ್ಟೇ.
ಇಷ್ಟೆಲ್ಲಾ ಕಷ್ಟಗಳಿದ್ದರೂ ಅವಳ ಜೀವನ ಪ್ರೀತಿ ಮೆಚ್ಚಲೇಬೇಕು. ನಿರಂತರವಾಗಿ ಓದುವ, ಹೊಸದನ್ನು ಕಲಿಯುವ, ಹೊಸ ವಿಚಾರಗಳನ್ನು ಜೀವನದಲ್ಲಿ ರೂಢಿಸಿಕೊಂಡಿರುವ, ಜೀವನದಲ್ಲಿ ಅನೇಕ ನೋವುಗಳನ್ನುಂಡಿದ್ದರೂ ಸದಾ ಹಸನ್ಮುಖಿಯಾಗಿರುವ ರೀತಿ ನೋಡಿದ್ರೆ ಯಾರಾದ್ರೂ ಅವಳನ್ನ ಮೆಚ್ಚದೇ ಇರರು.
ಇಷ್ಟೆಲ್ಲಾ ಇಂದಿರೆ ಇಂದಿರೆ ಎಂದು ಸ್ತುತಿಸುತ್ತಿರುವ ಈ ಇಂದಿರೆ ಯಾರು ಎಂದು ನೀವೆಲ್ಲ ಯೋಚಿಸ್ತಿರಬಹುದು , ಇಂದಿರೆ ನನ್ನ ತಾಯಿಯ ದೊಡ್ಡಕ್ಕ ಅರ್ಥಾತ್ 90 ವಯಸ್ಸಿನ ನಮ್ಮ ಅಚ್ಚು ಮೆಚ್ಚಿನ ದೊಡ್ಡಮ್ಮ. ಇಷ್ಟು ವಯಸ್ಸಾದ್ರೂ ಅವರ ಕಲಿಕೆಯ ಆಸಕ್ತಿ ಒಂದಿನಿತೂ ಕುಂದಿಲ್ಲ. ಕಾಗದದಿಂದ ತರಹೇವಾರಿ ವಿನ್ಯಾಸಗಳನ್ನುಮಾಡುವ ಓರಿಗಾಮಿ ಕಲೆಯನ್ನು ಈ ಇಳಿವಯಸ್ಸಿನಲ್ಲಿ ಮಕ್ಕಳು, ಹಾಗು ಮೊಮ್ಮಕ್ಕಳಿಂದ ಕಲಿತು ಅವರಿಗಿಂತಲೂ ವೇಗವಾಗಿ ಹಾಗು ಸೊಗಸಾಗಿ ಮಾಡುವುದನ್ನು ನೋಡಿಯೇ ಆನಂದಿಸಬೇಕು.
ಇಂದಿಗೂ ವಿವಿಧ ಕೈ ಕೆಲಸಗಳನ್ನು ಮಾಡುವುದರಲ್ಲಿ ದೊಡ್ಡಮ್ಮ ನಿಪುಣೆ. ಕ್ರೋಶ, ಸ್ವೆಟರ್ಹೆಣೆಯುವುದು, ಪದಬಂಧ, ಸುಡೋಕೋ ಬಿಡಿಸುವುದು, ಕತೆ ಕವನ ಓದುವುದು ದೊಡ್ಡಮ್ಮನ ಹಲವು ಹವ್ಯಾಸಗಳು.
ವೃದ್ಧಾಪ್ಯದ ತೊಂದರೆಗಳಿಂದ ನಲುಗಿರುವ ದೊಡ್ಡಮ್ಮ, ತನ್ನ ಕಣ್ಣ ಮುಂದೆಯೇ ಜರುಗಿದ ಹಲವಾರು ಸಾವು ನೋವುಗಳಿಂದ ಬೇಸತ್ತು , ಆದೇವ್ರು ಯಾಕೆ ಅಷ್ಟು ಕ್ರೂರಿ ನಮ್ಮಂತ ಮುದಿಜೀವಗಳನ್ನು ಉಳಿಸಿ ಚಿಕ್ಕಾ ಪುಟ್ಟವ್ರನೆಲ್ಲ ಬಲಿತೆಗೆದ್ಕೊಳ್ತಾನಲ್ಲ ಅಂತ ಹಲುಬಿದ್ರೂ ಮರುಗಳಿಗೆಯೇ ಯಾವುದಾದರೊಂದು ಹೊಸ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡು ಮತ್ತೆ ಜೀವನ್ಮುಖಿಯಾಗೋದು ಅವ್ರ ಸ್ವಭಾವ. ಯಾವುದಕ್ಕೂ ಗೊಣಗದೆ ದೂರದೇ ಸಮಾಧಾನ ಚಿತ್ತದಿಂದ ಇರುವುದನ್ನು ಯಾರಾದ್ರೂ ಅವರನ್ನ ನೋಡಿಯೇ ಕಲಿಯಬೇಕು.

ದೊಡ್ಡಮ್ಮ ತಾನು ಹೊಸದಾಗಿ ಕಲಿತು ಮಾಡಿದ ಒರಿಗಾಮಿ ವಿನ್ಯಾಸವನ್ನು ನೋಡಿ ಸಂತೋಷಿಸುತ್ತಿರುವುದು:

ಇದ್ದಕ್ಕಿದಂತೆ ಹೀಗೆ ದೊಡ್ಡಮ್ಮನ ಸ್ತುತಿ ಯಾಕೆ ಮಾಡ್ತಿದ್ದೀನಿ ಅಂತ ನೀವೆಲ್ಲ ಯೋಚಿಸ್ತಿರ್ಬಹುದು.  ನಾವು ಅಪ್ಪನ ದಿನ, ಅಮ್ಮನ ದಿನ, ಪ್ರೇಮಿಗಳ ದಿನ, ಸ್ನೇಹಿತರ ದಿನ ಎಂದೆಲ್ಲ ಹೆಸರಿಟ್ಟು ಇವ್ರನೆಲ್ಲ ಜ್ಞಾಪಿಸಿಕೊಂಡು ಸಂತೋಷಿಸ್ತೀವಿ. ಅದೇ ನಮ್ಮ ಸುತ್ತಮುತ್ತಲೇ ಇರುವ , ನಮಗೆ ಎಷ್ಟೋ ರೀತಿಯಲ್ಲಿ ಸ್ಫೂರ್ತಿಯಾಗಿರುವ ಹಿರಿಯ ಜೀವಗಳನ್ನು ನೆನೆಯಬಾರದೇಕೆ ಎನ್ನುವ ವಿಚಾರ ಮೂಡಿದಾಗ ಮೊದಲು ನೆನಪಾದವರೇ ದೊಡ್ಡಮ್ಮ .
ಸಣ್ಣ ವಯಸ್ಸಿನಿಂದಲೂ ಜೀವನದಲ್ಲಿ ಸಾಕಷ್ಟು ಕಹಿಯನ್ನುಂಡಿದ್ದರೂ ಅದನ್ನು ಯಾರ ಬಳಿಯೂ ವೈಭವೀಕರಿಸದೆ ನಾವೇನಾದ್ರೂ ಕೆದಕಿ ಕೇಳಿದರೂ ಅಯ್ಯೋ ಬಿಡು ಮರಿ ಜೀವನದಲ್ಲಿ ಬಂದದ್ದನ್ನು ಬಂದಹಾಗೆ ಸ್ವೀಕರಿಸುವ ಮನೋಭಾವ ರೂಡಿಸ್ಕೊಳೋದು ನಂಗೆ ಚಿಕ್ಕಂದಿನಿಂದಲೂ ಅಭ್ಯಾಸವಾಗಿದೆ. ಹಾಗಿರೋದು ನಂಗೂ ಒಳ್ಳೇದು ಬೇರೆಯವ್ರಿಗೂ ನೆಮ್ಮದಿ ಎಂದು ಹೇಳಿ ಒಮ್ಮೆ ಮಗುವಿನ ನಗೆ ನಕ್ಕು ಮಾತನ್ನು ಮೊಟಕು ಗೊಳಿಸುವ ದೊಡ್ಡಮ್ಮ ನಿಜಕ್ಕೂ ಸ್ಥಿತಪ್ರಜ್ಞೆ.
ಯಾವುದಕ್ಕೂ ಗೊಣಗದ, ದೂರದ, ಹಾಗೆಯೇ ನಮ್ಮಲ್ಲಿ ಒಳ್ಳೆಯ ವಿಚಾರಗಳನ್ನು ಮೂಡಿಸಿದ, ಎಂತಹುದೇ ವಿಚಾರವಿರಲಿ ಎಲ್ಲವನ್ನೂ ಸಮಾಧಾನ ಚಿತ್ತದಿಂದ ನೋಡುವ ಸ್ವಭಾವವನ್ನು ಕಲಿಸಿದ ನಿರಂತರ ಕಲಿಕೆಯಲ್ಲಿ ಅಚಲ ವಿಶ್ವಾಸವಿಟ್ಟಿರುವ ನಮ್ಮೆಲ್ಲರ ಪ್ರೀತಿಯ ಮುದ್ದಿನ ಚೆಲುವೆ ಇಂದಿರೆಗೆ ನಮೋನಮಃ
WE LOVE YOU DODDAMMA.
ಹೀಗೆ ನಮ್ಮ ದೊಡ್ಡಮ್ಮನ ಗುಣಗಾನ ಮಾಡಿ ಮುಗಿಸುವಷ್ಟರಲ್ಲಿ ಇದೋ ಬಂದೇ ಬಿಡ್ತು ನೋಡಿ ಹಿರಿಯ ನಾಗರೀಕರ ದಿನ (21 ಆಗಸ್ಟ್) ಪ್ರತೀ ದಿನವಲ್ಲದಿದ್ರೂ ಆಗೊಮ್ಮೆ ಈಗೊಮ್ಮೆ ಯಾದ್ರು ನಿಮ್ಮ ಮನೆಗಳಲ್ಲಿನ ಹಾಗು ನಿಮ್ಮ ಸುತ್ತಾಮುತ್ತಲಿನ ಹಿರಿಯ ಜೀವಗಳನ್ನು ಸ್ಮರಿಸಿ, ಶ್ಲಾಘಿಸುವ ಕಾರ್ಯವನ್ನು ನಾವೆಲ್ಲ ಮುಂದುವರೆಸೋಣ್ವಲ್ವೆ ಎನಂತೀರಾ??
 

‍ಲೇಖಕರು avadhi

22 August, 2013

15 Comments

  1. ನಾಗಮಣಿ

    ಇಂತಹ ಹಿರಿಯರಿಂದ ಕಲಿಯುವುದು ಬಹಳಷ್ಟಿರುತ್ತದೆ. ಒಳ್ಳೆಯ ಲೇಖನಕ್ಕಾಗಿ ವಂದನೆಗಳು ವೇದ.

  2. Deva Prasad

    Hi Veda,
    Nice article and very well articulated. My compliments to you to remember elders who made significant differentiators to our lives.
    With blessings
    Nimmanna

  3. Swarna

    ಸುಂದರ ಬರಹ. ಕಷ್ಟಗಳ ನಡುವೆಯೂ ಜೀವನ ಪ್ರೀತಿಯನ್ನು ಕಾಯ್ದುಕೊಂಡು ತಾವೇ ಓದಲು ಕಲಿತು ಭಾರತ, ರಾಮಾಯಣದಿಂದ ವಾರಪತ್ರಿಕೆಗಳವರೆಗೂ ಓದುವ ಅಭ್ಯಾಸ ಮಾಡಿಕೊಂಡ ನನ್ನಜ್ಜಿ ನೆನಪಾದರು.

  4. geethasam

    love u vedu lovely baraha thumba chennagi moodi bandide

  5. M S Suma

    Dear Vedu,
    Thanks for the wonderful article on Amma. I am overwhelmed with gratitude.
    I shall take a printout of this show it to “Indire”!
    Thanks once again!

  6. Prabha

    Kashtakke, dhairyakke, jeevanapreetige sankethavaada doddammanannu kuritu bareda baraha channagide vedu…

  7. Ramya S Raju

    supper article….. Thumba chennagide…. You should write more articles… !!!

  8. bharathi

    Doddammanigondu salaam … nanna doddamma obru .. avranna thangi doddamma anta karithidvi .. avra nenapaythu … nimma baraha kushi kodthu

  9. jyothi umesh

    Vedoo, tumba sundaravaada baraha. Hiriyara dinakke apt aagide. Nimma barahada style, doddamma.. ibbarigoo ondu dodda salute! Innashtu mattashtu nimma barahagalu barali 🙂

  10. Rekha

    Hi Veda,
    Article tumba channagi moodi bandide. Odutta namma doddammana baggene oduttiruvante anisitu. Innastu bareyiri
    Rekha

  11. ರಶ್ಮಿ

    ಲೇಖನ ತುಂಬಾ ಚೆನ್ನಾಗಿದೆ ವೇದ! ಮತ್ತಷ್ಟು ಕಾಲಂಗಳನ್ನ ಬರೆಯಿರಿ

  12. Santosh

    Vedu,
    Love the flow of thought and the way the article is structured!!
    It’s a moving article which highlights there is so much more to learn from our elders. You should write more articles 🙂
    Luv, Santu

  13. Anant

    Nice article madam,
    Hiriyar baggeya gourava,adara, olavina tumba hridaya lekhana, nammelara kannu teresive & Hridaya tumbi baruvantide

  14. Anjali

    Tumba chennagide 🙂 Thank you for sharing

  15. Prathima

    Article tumba chennagide!!!!!!!! Veda…. Tumba sundaravada baraha

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading