ಎಂ ಬಿ ನದಾಫ
ಎಲ್ಲಾರೂ ಈ ಮಾತ ಹೇಳ್ತಾರ…ರೀ. ಯಾಕಂತ್? ಕೇಳಿದ್ರ ನಾನೂ ಧಾರ್ವಾಡ್ದಾಗನ ಶಿಕ್ಷಣ ಮುಗಿಸಿದ್ದೆ, ಧಾರ್ವಾಡ್ ಅಂದ್ರ ನನ್ನ ಜೀವನದಾಗ ಮರ್ಯಾಕಾಗದ ಕ್ಷಣವು ಐತಿ. ಹಂಗ ಗಾಳಿ, ಗಂಧ ನೋಡ್ರಿ ಧಾರ್ವಾಡುದ್ದು. ಧಾರ್ವಾಡ್ ಅಂದ್ರನ ಸಾಕು ತುಂಬ ಪ್ರೀತಿ ತೊರಸ್ತಾರ ಧಾರ್ವಾಡಕ್ಕ ಮತ್ತ ಧಾರ್ವಾಡ್ದವರಿಗೆ…!
ನಾನು ಹಂಗ ಮೈಸೂರಗೆ ಹೋದಾಗ ಮತ್ತ ನಮ್ಮ್ ಜನರ್ಾಸಲಿಸಂ ಡಿಪಾರ್ಟಮೆಂಟ್ದ ಮಿಡಿಯಾ ಫೇಸ್ಟ್ ಇತ್ತ್ರಿ. ಅವಾಗ, ಒಬ್ರು ಮೇಡಮ್ ಭೇಟಿ ಆದ್ರ ನಮ್ಗ. ಅವರ ಅವಸರದಾಗ ಬಂದು ಚೂಲೂ ಅಧೀರೆನ? ತಮ್ಮ ಅಂದ್ರು! ನಾವೇನ್ ಅವ್ರನೇನ್ ಕಂಡೆಯಿಲ್ಲ! ಅವ್ರರೇನ್ ನಮ್ಮನೇನ್? ಅದು ಅಲ್ದ ಮುಖಾಸತಾ ನೋಡಿಲ್ಲ! ಅವರ್ ಬಂದ ನಮ್ಮ ಕಡೆರಂಗ ಮಾತಾಡಿದ್ದು, ಪೀವರ್ ಜವಾರಿ ಧಾರ್ವಾಡ್ ಭಾಷೆನ ರೀ! ಮತ್ತ್. ನಮ್ಮಗೂ ಇವರು ಗೊತ್ತ್ ಅನ್ನಂಗ ನಾಟಕಾ ಮಾಡದಂಗ ನಮಸ್ತೆರೀ ಮೇಡಮ್ ಅಂದ. ಅಂದಂಗ ಆರಾಮ ಅದೀರೇನ್ ಮೇಡಮ್ ಅಂತ ನಸುನಗುತ ಹಲ್ಲುಕಿರುದ್ವೀ. ಅವಾಗ ಆ ಮೇಡಮೊರು ಹುಡ್ರಪ್ಪಾ ನಾನು ನಿಮ್ಮ ಯುನಿವೆಸರ್ಿಟಿದಾಗ ಸ್ಟುಡೆಂಟ್ ಆಗಿ ಕಲ್ತಿದ್ದನಪ್ಪಾ ಅಂದ ಕೈ ಮಿಲಾಯಿಸಿದರು. ಮುಂದಕ ಅವ್ರು ಧಾರ್ವಾಡ್ ಅಂದ್ರ ನಂಗ ತೌರಮನಿಗಿಂತನ ಹೊಂದಾನಿಕಿ ನೋಡ್ರಪಾ ಅಂತ ಅವ್ರು ಪಕ್ಕಾ ಜವಾರಿ ಧಾರ್ವಾಡ್ ಮಾತನ್ಯಾಗ ಸುರುವು ಹಚ್ಚಿಕೊಂಡಿದ್ದು ಮಾತಂತೂ ‘ಏಪ್ಪಾ’ ಅನ್ನೂಂಗ, ಬಾಯಿಮ್ಯಾಗ ಕೈಯಿಟ್ಟಂಗ ಆಚ್ಚರ್ಯ ಅನ್ಸತ್ ನಮ್ಗ್!.

ಹಿಂಗ್ ಪರಿಚಯ ಆದ ಮೇಡಮ್ ಅವರು ಒಂದವಂದ್ ಆಸೆ ಹೇಳಿದ್ರ ನಮ್ಮುಂದ. ಅದು ಅವ್ರು ಧಾರ್ವಾಡ್ ಬಿಟ್ಟ ಹತ್ತವರ್ಷ ಆತಂತ. ಅದಕ ಅವರು ಮಂಗ್ಳೂರಿಗೆ ಬಂದ ಹತ್ತು ವರ್ಷ ಹೋತು ತಮ್ಮ್ಯಾ ಧಾರ್ವಾಡದ್ದು ಮೀಚರ್ಿ, ಮಂಡಕ್ಕಿ, ಗೀರ್ಮೀಟ್ ರುಚಿನ ನೋಡಿಲ್ಮತ್ತ ತಮ್ಮ್ಯಾಗೋಳ ಈ ಕೆಲಸದ ಬಿಜ್ಯಾಗ. ಹಿಂಗ್ ಅಂದ್ ಮೇಡಮ್ ಬರೀ ಅಲಾ ಪ್ಯಾಟಿಗೆ ಹೋಗಿ ತಿಂದ ಬರೊನಂತ ಬರೀ ಅಂದ್ರ. ಮೇಡಮ್ ಅವ್ರ ಮಾತ ಕೇಳಿ ಖುಷಿ ಆತೂ. ಮತ್ಯಾಕ ತಡಾ ಅಂದ ಮೇಡಮ್ ಅವ್ರೀಗೆ ಧಾರ್ವಾಡ್ ಪ್ಯಾಟಿಗೆ ಕರಕೊಂಡ ಹೋಗಿ ಬೀಸಿ-ಬೀಸಿ ಮೀಚರ್ಿ, ಚುರು-ಚರು ಖಾರಚುರುಮರಿ, ಗೀರಮಿಟ್ ತಿಂದ ಬಂದ್ವೀ.
ಹಿಂಗ್ ನಮ್ಮ ಧಾರ್ವಾಡ್ ಅಂದ್ರ ಎಲ್ಲಾರಿಗೂ ಇಷ್ಟಾ ಐತ್ರೀ… ನಾವು ಧಾರವಾಡದವರೂ ಸ್ವಲ್ಪ ಖಡಕ್ ಅದೇವರೀ. ಅದು ಬಿಟ್ರ ಬಾಳ್ ಚೂಲೋ ಅದೇವ್ವೀ ಅಂತ ಧಾರ್ವಾಡರಂತ ಕೇಳ್ದವರೇಲ್ಲಾ ಹೇಳ್ತಾರ ರೀ. ನಮ್ಮ ನಳೀನಿ ಭೀಮಪ್ಪ ಮೇಡಮ್ ಅವರ್ ಹೇಳೊ ಹಂಗ್ ಧಾರ್ವಾಡ್ದ ಮಂದಿ ಅಂದ್ರ ಏರಡ್ ಮಾತ ಇಲ್ಲರೀ. ಇನ್ನ ನಮ್ಮ್ ವಾರಗಿ ಗೆಳ್ಯಾರು ಬಗ್ಗೆ ಹೇಳಕೊಂಡ್ರ ಒಂದ್ ರಾತ್ರಿನೂ ಸಾಲೊದಿಲ್ಲಾ ನೋಡ್ರಿ. ಯುನಿವಸರ್ಿಟಿಗೆ ಕಲ್ಯಾಕಂತ ಬಂದೊರು ಎರಡವರ್ಷ ಹೆಂಗ್? ಹೋಯ್ತ್ಂತ ಬೇಜಾರ ಆಗ್ಯಾರರಿ ಗೆಳ್ಯಾರು. ಕೈಗೆ ನೊಕ್ರಿ ಸಿಕ್ರು ಧಾರ್ವಾಡ ಮರ್ಯಾಕ ಅಸಾದ್ಯ ಐತಿ. ಹಂಗ್ ಮಸ್ಸನ್ಯಾಗ ನೆನಪು ಕಾಡ್ತೈತಂತ್ ಧಾರ್ವಾಡ್ ಅಂತಾರರೀ ಗೆಳ್ಯಾರು.
ಹಿಂಗ್ ಇಲ್ಲಿ ಏಷ್ಟ್? ಮಂದಿ ಕಲತ ಹೋಗ್ಯಾರ ಲೇಕ್ಕೀಲ್ಲ್ರಿ, ಆದ್ರ ನಾವು ಮಾತನಾಡೂ ಭಾಷೆ ಕೇಳಿ ಪರಿಚಯ ಆದ ಜನ್ರೇಲ್ಲಾ ‘ಧಾರ್ವಾಡದವರಾ’? ಅಂತ ನಸುನಗ್ತಾ ನಾವೆಲ್ಲ ಧಾರವಾಡಗನ ಅದು-ಇದು ಕಲಿದ್ದಂತ ಖುಷಿ ಹಂಚ್ಚಕೊಂಡ ಬಾಳಂದ್ರ ಬಾಳ ಪ್ರೀತಿ ತೋರಸ್ತಾರ. ಇಡೀ ಧಾರ್ವಾಡದ್ದ ಪೂರಾಣನೇ ಹೇಳಿದ ಕ್ಷಣಕ್ಕ ಅವಾಗ ನಂಗಂತು ಖುಷಿ ಉಕ್ಕಿ ಹೇಮ್ಮೆ ಅನ್ಸೈತ್ರೀ. ಹಿಂಗ್ ಐತೀ ನೋಡ್ರಿ ಧಾರ್ವಾಡಂದ್ರ.
ಇಸ್ಟೋಮಟಾ ನಾನು ಹೇಳಿದ್ದ ಖರೆ ಐತಿ. ಯಾಕಂದ್ರ ಧಾರ್ವಾಡ್ ಅಂದ್ರ ಹೇಳೊಕೂ ಆಗದಷ್ಟ ಬೇರೆ ಊರಮಂದಿಗೆ ಧಾರ್ವಾಡಂದ್ರ ಇಷ್ಟಾ.! ಅಷ್ಟ್ಯಾಕ್ರೀ ಹಿಂಗ್ ಧಾರ್ವಾಡಾ ಪ್ರೀತಿ ಮಾಡೋ ಮಂದಿ ಅದಾರೀಪಾ. ಆದ್ರೆ ಒಂದ್ ಮಾತಂದ್ರ ಅವರೇಲ್ಲಾ ಅದು ಯಾವ ಸಂಬಂಧವೆನೋ ಗೊತ್ತಿಲ್ಲರೀ ನೋಡಿದ ಕ್ಷಣಕನ ಪ್ರೀತಿ ತೋರಸಿ, ಪರಿಚಯದ ಜನ್ರು ಅನ್ನೊಹಂಗ ಮಾತಾಡಿ, ಮನಸ್ಸನ್ಯಾಗ ಹತ್ತಿರ ಆಗ್ತಾರ. ಮುಂದ ಧಾರ್ವಾಡದ ಅನುಭವಾ ಹೇಳ್ಕೂಂಡು ‘ಧಾರ್ವಾಡನಾ’ ಅಂತ ಬೆಟ್ಟದಷ್ಟ ಪ್ರೀತಿ ಹರಸ್ತಾರ.
ಸುತ್ತೇಲ್ಲ ಇಡೀ ಕನರ್ಾಟಕದ ಮಂದಿ ಮುಖಬೇಟಿ ಮಾಡಿದೋರಲ್ಲ ಹಿಂಗ್ ಮಾತಾಡ್ಯಾರಿ. ತುಂಬ ಪ್ರೀತಿ ತೋರಿಸಿ, ಚಾ ಫಾನಿ ಕುಡಿಸಿ ಕಳಸ್ಯಾರರೀ. ಧಾರವಾಡಕ್ಕ ಬಂದ್ರ ಖಂಡಿತ ಕೂಡೊನಂತ ಪ್ರೀತಿ ಹಂಚಿದ ಆ ಖುಷಿಮಾತ್ರ ಧಾರವಾಡಿ ಮಂದಿಗೇನ ಗೊತ್ತ..! ಆದ್ರ ಒಂದು ಮಾತಂತು ಖರೆಂದ್ರ ನಮ್ಮೂರು ನಮಗ ಚಂದ ಅನ್ನೂ ಅಟರ್ಿಕಲ್ ಓದಿದಾಗ ಹಿಂಗ್ ಅನ್ಸತ ನಂಗೆ. ಎಲ್ಲಾರಿಗೂ ತಮ್ಮೂರು ತಮ್ಮಗೆ ಚಂದ ಅಂದ್ರ ಖುಷಿ ಅನ್ನೊ ಮಾತ ಐತ್ರೀ. ಆದ್ರೆ ನಮ್ಮ ದಾರ್ವಾಡ ಎಲ್ಲಾರಿಗೀ ಇಷ್ಟಾ ಅನ್ನೊ ಮಾತು ಇಡೀ ಧಾರವಾಡಕ್ಕ ಮತ್ತ ಧಾರ್ವಾಡ ಮಂದಿಗೆ ಬೀಲ್ಕೂಲ್ ಹೇಮ್ಮೆ ಅನ್ಸತೈತೀ ನೋಡ್ರಿ…! ನಿಮ್ಮ ಪ್ರೀತಿಹಿಂಗ್ ಸಾಗಲೆಂದ ಹರಸ್ತಾ… ಅಂದಂಗ ನಮ್ಮ ಧಾರ್ವಾಡ ಪ್ರೀತ್ಸೂ ಮಂದಿಗೆೆ ನಮ್ಮದೊಂದ್ ಸಲಾಮುರೀ ಮತ್ತೆ ಸಿಗೊಣ್ರೀ ನಾನ್ ನಧಾಫಂತ ರೀ.






ತಮ್ಮಾ ಬಾಳ ಚೋಲೋ ಬರ್ದಿ ನೋಡ,ನಂಗ ಮಾತ್ರು ತುಂಬಾ ಇಷ್ಟ ಆತು
ಟ್ಯಾಕ್ಸ್ ರೀ ಅಣ್ಣಾರ…
ಭಾಳ್ ಛೊಲೋ ಬರ್ದೀ ಬಿಡ್ ದೋಸ್ತಾ ನಮ್ ಧಾರ್ವಾಡದ್ ಬಗ್ಗೆ… ಧಾರ್ವಾಡ್ ಅಂದ್ರನ ಹಂಗ್ ಮತ್ತ.. ಇಲ್ಲಿ ಗಾಳಿ ಒಂದ್ಸಲ ಕುಡುದ್ರ ಆತು.. ಮತ್ಯಾವತ್ತೂ ಅದನ್ ಮರಿಯಾಕ್ ಸಾಧ್ಯನ ಇಲ್ಲ
ಹು, ಗೆಳಯ…
nice article
ಟ್ಯಾಕ್ಸ್, ಗೆಳ್ಯಾ(ತಾವರೆ)
tamma nam dharwad sogadna bhal chand illi bhashadaga baradi.nangara bhal mansige bantu bidu pa.
ಟ್ಯಾಕ್ಸ್ ಅಕ್ಕಾ, ನಂಗೂ ಬರೆದಾಗ ಖುಷಿ ಅನಿಸಿತು…