ನಮಸ್ಕಾರ, ಇದು ರಂಗಭೂಮಿ ಕರೆ.
ರಾಜ್ಯಕ್ಕೆ ನೆರೆಯ ಹೊರೆ ಅಪಾರ . ನೆರವು ಬರುತಿದೆ. ಬಂದದ್ದಕಿಂತ ಬೇಕಾದ್ದೇ ಹೆಚ್ಚು.
ಪರಿಹಾರ ಕಾರ್ಯಕ್ಕೆ ರಾಜಕಾರಣಿಗಳು, ನಾಯಕರು, ಪತ್ರಿಕೆಗಳು, ಸಂಘ – ಸಂಸ್ಥೆಗಳು
ಸಾಕಷ್ಟು ದುಡಿಯುತ್ತಿದ್ದಾರೆ.
ನಾವು, ಕಲಾವಿದರು, ಸುಮ್ಮನೆ ನೋಡುತ್ತ ಕೂಡಬೇಕೇ?
ಬನ್ನಿ, ನೆರವಾಗೋಣ.ಸಾಂತ್ವನ ಹೇಳೋಣ –
ಕಷ್ಟದಲ್ಲಿ ನಾವು ನಿಮ್ಮೊಂದಿಗೆ ಇದ್ದೇವೆ ಅನ್ನೋಣ
ಬನ್ನಿ, ಒಂದು ದೀಪ ಹಚ್ಚಿ,
ಕನಿಷ್ಠ 500 ರೂ ನೀಡಿ, ಸಂತ್ರಸ್ತರ ಮುಖದಲ್ಲಿ ಬೆಳಕು ತನ್ನಿ.
ಬಾಗಲಕೋಟೆಯ ಬಾದಾಮಿ ತಾಲೂಕಿನ ಹಂಸನುರ್ ವೃತ್ತಿ ರಂಗ ಭೂಮಿ ಕಲಾವಿದರೇ ಹೆಚ್ಚಾಗಿರುವ ಹದಿನಾರು ಮನೆಗಳ ಗ್ರಾಮ.
ನೆರೆ ಈ ಗ್ರಾಮವನ್ನ ನಾಶ ಮಾಡಿದೆ. ಈ ಗ್ರಾಮವನ್ನ ಪುನರ್ ನಿರ್ಮಾಣ ಮಾಡುವುದು ನಮ್ಮ ಸಂಕಲ್ಪ. ನಾಟಕ ಅಕಾಡೆಮಿ ಮತ್ತು ರಂಗ ಭೂಮಿ ಕ್ರಿಯಾ ಸಮಿತಿ ಇದನ್ನು ಸಂಘಟಿಸುತ್ತಿದೆ.
ಹತ್ತು ಸಾವಿರ ಕೊಡಿ .ಒಂದು ಪೇಂಟಿಂಗ್ ತಮ್ಮದು, ಮನೆಯಮೇಲೆ ತಮ್ಮ ಹೆಸರು.
500 ಕೊಡಿ, ಹಣತೆ ಹಚ್ಚಿ. ಚೆಕ್ ಕೊಡಬಹುದು . ಕರ್ನಾಟಕ ನಾಟಕ ಅಕಾಡೆಮಿ ಹೆಸರಿಗೆ.
– ಶ್ರೀನಿವಾಸ ಜಿ ಕಪ್ಪಣ್ಣ
ಸಂಪರ್ಕ: 98440 12241

ನವೆಂಬರ್ ೧ (ಭಾನುವಾರ), ಬೆಳಿಗ್ಗೆ 10 ರಿಂದ.
ರವಿಂದ್ರ ಕಲಾಕ್ಷೇತ್ರದ ಮುಂಬಾಗಿಲ ಆವರಣ.
10 ಕ್ಕೆ ಸಂಚಲನದ 25 ಕಲಾವಿದರಿಂದ ಚಿತ್ರ ಶಿಬಿರ.
4 ರಂಗ ಗೀತೆ
4.30 ಜನಪದ ಮೇಳ
5 ಜನಪದ ಗೀತೆಗಳು
5 .30 ಚಿಣ್ಣರ ಕಾರ್ಯಕ್ರಮ
6 ಸುಗಮ ಸಂಗೀತ
6 .30 ಭರತನಾಟ್ಯ
7 ಯಕ್ಷಗಾನ
7 .15 ಕಾಲೇಜ್ ವಿದ್ಯಾರ್ಥಿಗಳ ಕಾರ್ಯಕ್ರಮ
8 ಟಿ.ವಿ.ಕಲಾವಿದರ ಕಾರ್ಯಕ್ರಮ
8 .30 ರಂಗ ಗೀತೆ ಬಿ. ಜಯಶ್ರಿ ಅವರಿಂದ
ನಮಸ್ಕಾರ, ಇದು ರಂಗಭೂಮಿ ಕರೆ…
ನಿಮಗೆ ಇವೂ ಇಷ್ಟವಾಗಬಹುದು…





0 Comments