ಸಂಧ್ಯಾರಾಣಿ
ಪುಸ್ತಕದ ಮುಖಪುಟ ನೋಡಿದ ಕೂಡಲೇ ಬಾಲ್ಯದ ನೆನಪುಗಳ ಕಿಟಕಿ ತೆರೆದಿತ್ತು. ಪುಸ್ತಕದ ಹೆಸರು Colour Of Gold, ಬರೆದವರು ಗೀತಾ ಅರವಮುದನ್.
ಕೆ ಜಿ ಎಫ್ ನ ಚಿನ್ನದ ಗಣಿಗಳ ಕಥೆ, ಮೂರು ಕಾಲಘಟ್ಟದಲ್ಲಿ ಕಥೆ ನಡೆಯುತ್ತದೆ. ಮೂರು ಕಾಲದ ಕಥೆ, ಎಷ್ಟೋ ಪಾತ್ರದಳು, ಆದರೆ ನನ್ನೊಳಗೆ ಇಳಿದದ್ದು ಕೆ ಜಿ ಎಫ್ ಎನ್ನುವ ಊರು. ಅದು ನಾನು ಬಾಲ್ಯ ಕಳೆದ ಊರು, ಅಲ್ಲಿನ ಸಾಲು ಸಾಲು ಕಲೋನಿಯಲ್ ಮನೆಗಳು, ನಾವು ಪ್ರೈಮರಿಯಲ್ಲಿದ್ದಾಗ ಸಂಜೆ ಆದರೆ ಆಂಗ್ಲೋ ಇಂಡಿಯನ್ ಕಾಲನಿಗಳಿಂದ ಸಣ್ನ ದನಿಯಲ್ಲಿ ಕೇಳಿಬರುತ್ತಿದ್ದ ಪಿಯಾನೋ ಸ್ವರಗಳು, ಅಲ್ಲಿನ ಕ್ರಿಸ್ ಮಸ್ ಸಂಭ್ರಮ, ಕಮಲಮ್ಮ ಟೀಚರ್ ಮನೆಯ ಕ್ರಿಸ್ ಮಸ್ ಬಿಸ್ಕತ್ತು…ಈ ಪುಸ್ತಕ ಹೇಳುವುದು ಚಿನ್ನದ ಕಥೆಯನ್ನು, ಪೊನ್ನಿಯ ಕಥೆಯನ್ನು, ಆದರೆ ಹೇಳಲು ಹೋಗದೆಯೂ ಹೇಳುವುದು ಕೆ ಜಿ ಎಫ್ ಕಥೆಯನ್ನು. ನನಗೆ ಇಷ್ಟವಾಗಿದ್ದು ಆ ಕಥೆ..
ಈ ಪುಸ್ತಕ ನಿಮಗೆ ಬೇಕಾದಲ್ಲಿ ಇಲ್ಲಿ ಕೊಳ್ಳಿ




ನಾನು ೧೯೬೦ ರ ದಶಕ್ದಲ್ಲಿ ಕೆಲವುವರ್ಷಗಳನ್ನೂ ೧೯೮೦ರ ದಶಕದಲ್ಲಿ ಕೆಲ್ವವುವರ್ಷಗಳನ್ನೂ ಕಕೆ.ಜಿ.ಎಫ್ ನಲ್ಲಿ ಕಳೆದಿದ್ದೇನೆ. ೬೦ರ ದಶಕ್ದಲ್ಲಿ ಇನ್ನೂ ಕೆಲವರು (೩-೪ ) ಇ೦ಗ್ಲಿಷರು ಉಳಿದುಕೊ೦ಡಿದ್ದರು. ಕ್ಲಬ್ಬುಗಳಲ್ಲಿ ಆ೦ಗ್ಲ ಸ೦ಸ್ಕೃತಿ ತಾ೦ಡವವಾಡುತ್ತಿತ್ತು. ಆದರೂ ಹಲ್ವಾರು ಭಾರತೀಯರು ದೊಡ್ಡ ದೊಡ್ಡ ಕೆಲಸಗಳಲ್ಲಿ ಇದ್ದರು. ೮೦ರ ದಶಕ್ದಲ್ಲಿ ಊರಿನ ಆನತಿ ಪ್ರಾರ್೦ಅಭವಾಗಿದ್ದಿತು. ಶಾಫ್ಟಗಳನ್ನು ಮುಚ್ಚಲು ಪ್ರಾರ್೦ಅಭಿಸಿದ್ದರು. ೧೦ ವರ್ಷಗ್ಳ ಹಿ೦ದೆ ಹೋಗಿದ್ದೆ. ಹಳೆಯ ಮೈನಿ೦ಗ್ ಜಾಗಗಳೆಲ್ಲ ‘ ಘೋಸ್ಟ್ ಟೌನ್ ‘ ಆಗಿ ಬಿಟ್ಟಿತ್ತು.
ಹೌದು ಸರ್, ಈಗ ಅದು ಘೋಸ್ಟ್ ಟೌನ್… ನಾನು ಪುಟ್ಟ ಹುಡುಗಿ ಆಗಿದ್ದಾಗ ಆಂಗ್ಲೋ ಇಂಡಿಯನ್ ಮನೆಗಳು ಇದ್ದವು, ನಮ್ಮ ಮನೆಯ ಬಳಿಯಲ್ಲೇ ಅವರ ಕಾಲನಿ ಇತ್ತು, ಕ್ರಿಸ್ಮಸ್ ಜೋರಾಗಿ ನಡೀತಾ ಇತ್ತು, ನಾನು ನಾಲ್ಕನೇ ಕ್ಲಾಸು ಓದುವವರೆಗೂ ಅಲ್ಲಿದ್ದೆ, ಮತ್ತೆ ಡಿಗ್ರಿಗೆ ಅಲ್ಲೇ ಹೋದೆ. ಕೆಜಿಎಫ್ ಅಷ್ಟರೊಳಗೆ ಕೆಜಿಎಫ್ ತುಂಬಾ ಬದಲಾಗಿತ್ತು..