ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನನ್ನ ಬುಕ್: ಎಲ್ಲ ಬಿಚ್ಚಿಟ್ಟ ಆ ಆತ್ಮಕಥನ

kuntady nithesh

ಕುಂಟಾಡಿ ನಿತೇಶ್ 

ಆತ್ಮಕಥನದ ಮೂಲ ಬೇಡಿಕೆ ಪ್ರಾಮಾಣಿಕತೆ . ಕನ್ನಡದ “ಪ್ರಗತಿಪರ” ಲೇಖಕರಲ್ಲಿ ಯಾವತ್ತಿಗೂ ಅಗ್ರಸ್ಥಾನ ಪಡೆಯುವ ಲಂಕೇಶರಿಗೆ ಹುಳಿ ಮಾವಿನ ಮರ ದಲ್ಲಿ ಹಾಗೂ ಅನಂತಮೂರ್ತಿಗಳಿಗೆ ಸುರಗಿಯಲ್ಲಿ ( ಸಾಹಿತ್ಯಕ , ಸಾಂಸ್ಕೃತಿಕ ವಲಯದಲ್ಲಿ ಹೆಚ್ಚಿನವರಿಗೆ ತಿಳಿದಿರುವ ವಯಕ್ತಿಕ ಬದುಕು ) ಸಾಧ್ಯವಾಗದಿದ್ದನ್ನು ಒಂದು ಸಾಂಪ್ರದಾಯಿಕ ಮನೆತನ ಮತ್ತು ವಾತಾವರಣದಲ್ಲೇ ಬದುಕು ನಡೆಸಿದ ಕೆರೆಮನೆ ಶಿವರಾಮ ಹೆಗಡೆ ಇಲ್ಲಿ ಸಾಧ್ಯವಾಗಿಸಿದ್ದಾರೆ .

“ಇಷ್ಟೆಲ್ಲ ಬದುಕಿನ ಬಗ್ಗೆ ಹೇಳಿದ ಮೇಲೆ ನನ್ನ ಬದುಕಿಗೆ ಒಲಿದು ಬಂದವಳ ಬಗ್ಗೆ ಹೇಳದಿದ್ದರೆ ಅದು ಮೋಸ ಎನ್ನುತ್ತಾ ನಿಜಾರ್ಥದಲ್ಲಿ ಸೂಳೆಯೊಬ್ಬಳಿಂದಲೇ ತನಗೆ ಸಾಂಸಾರಿಕ ಬದುಕಿನಲ್ಲಿ ಆಸಕ್ತಿ ಹುಟ್ಟಿತು” ಎಂದು ಅಂಜಿಕೆಯಿರದೆ ಹೇಳಿದ್ದಾರೆ . ಆತ್ಮಕಥವೊಂದು ಬೇಡುವುದು ಇಂತಹ ಮುಜುಗರವಿರದ ನಿರ್ಭೀತತೆಯಲ್ಲವೇ ?

ಯಕ್ಷಗಾನದ ಗೀಳಿರದ ವ್ಯಕ್ತಿಗೂ ಕೂಡ ಅರ್ಥವಾಗುವಂತೆ , ಯಾವುದೇ ಗ್ರಾಂಥಿಕ ಬಾಷೆಯ ಹಂಗಿಲ್ಲದೆ , ಪ್ರಾಮಾಣಿಕವಾಗಿ ತನ್ನ ಜೀವನದ ಕಥೆಗೆ ಬರಹ ರೂಪ ಕೊಟ್ಟದ್ದು ಇಷ್ಟವಾಯಿತು . ಕಾರಂತರು ಇದನ್ನು “ಕಪಟವರಿಯದ ಆತ್ಮಕಥೆ” ಎಂದಿದ್ದಾರೆ .

 

‍ಲೇಖಕರು Admin

25 January, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading