ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನನ್ನ ಕಾಡಿದ 'ಕಾಡು' : ಮಂಜುಳ ಹುಲಿಕುಂಟೆ ಬರೆಯುತ್ತಾರೆ

ನಾನು ಕಿಟ್ಟಿಯನ್ನು ಒಬ್ಬ ಸಂಶೋಧಕನಂತೆಯೇ ನೋಡಿದ್ದೇನೆ

ಮಂಜುಳಾ ಹುಲಿಕುಂಟೆ

ಶ್ರೀ ಕೃಷ್ಣ ಆಲನಹಳ್ಳಿಯವರ ಕಾಡು ಕಾದಂಬರಿಯಾಧಾರಿತ ಚಿತ್ರ ಕಾಡು.  ಸಮಾಜದ ಹಲವಾರು ಮಜಲುಗಳನ್ನು ಒಳಗೊಂಡಿರುವ ಸಾಮಾಜಿಕ ಚಿತ್ರ.  ಚಿತ್ರದಲ್ಲಿ ಪ್ರತಿ ಪಾತ್ರವೂ, ನಮ್ಮ ಸಮಾಜದಲ್ಲಿನ ವ್ಯವಸ್ಥೆಯ ಸಂಕೇತಗಳಂತೆ ಬಿಂಬಿತವಾಗಿವೆ.  ಜಾತಿ ವ್ಯವಸ್ಥೆ, ವರ್ಗ ಸಂಘರ್ಷ, ಮೂಢ ನಂಬಿಕೆಗಳನ್ನು ಬಿಂಬಿಸುವ ಈ ಚಿತ್ರ, ಸಮಾಜದ ಸ್ಥಿತಿಗತಿಗಳನ್ನು ಇಂದಿನ ನಮ್ಮ ಹಿರಿಯರ ನಂಬಿಕೆಗಳನ್ನು ವಿವರಿಸುತ್ತದೆ.  ಶತಶತಮಾನಗಳಿಂದ ಸ್ತ್ರೀಯರ ಮಾತುಗಳನ್ನು ಕಿತ್ತುಕೊಂಡಿರುವ ಪುರುಷ ಪ್ರಧಾನ ಸಮಾಜದ ಕೌರ್ಯವನ್ನು ತಿಳಿಸುತ್ತದೆ.  ಇಲ್ಲಿ ‘ಕಿಟ್ಟಿ’ ಒಂದು ಅದ್ಭುತ ಪಾತ್ರ.  ಆತನ ಕಣ್ಣಿನಿಂದಲೇ ಇಡೀ ಚಿತ್ರವನ್ನು (ಸಮಾಜವನ್ನು) ಗುರುತಿಸುತ್ತಾ ಹೋದಂತಿದೆ.  ಆತನ ಮುಗ್ಧತೆ, ಕುತೂಹಲ, ಎಲ್ಲವನ್ನೂ ಪರೀಕ್ಷೀಸುವ ಮತ್ತು ಅರಿಯುವ ಹಂಬಲ ಒಬ್ಬ ಸಂಶೋಧಕನಿಗೆ ಇರಬೇಕಾದ ಗುಣವಾಗಿದೆ.  ನಾನು ಕಿಟ್ಟಿಯನ್ನು ಒಬ್ಬ ಸಂಶೋಧಕನಂತೆಯೇ ನೋಡಿದ್ದೇನೆ.

ಕಾಡು ಅಪರಿಚಿತವಾದ ವ್ಯವಸ್ಥೆಯನ್ನು ಬಿಂಬಿಸುವುದಿಲ್ಲ.  ನಮ್ಮ ಹಿರಿಯರ ಪಾಡು, ಅವರ ಬದುಕಿನ ಜಾಡನ್ನು ನಮ್ಮ ಮುಂದೆಯೇ ಗುರುತಿಸಿರುವ ಚಿತ್ರ.  ಕಾಡು ಚಿತ್ರದುದ್ದಕ್ಕೂ ಹೆಣ್ಣಿನ ಅಸಹಾಯಕತೆ, ಆಕೆಯ ಅಳಲು, ನೋವುಗಳನ್ನು ಮತ್ತು ತನಗಾಗುವ ಶೋಷಣೆಯ ವಿರುದ್ಧ ದನಿಯೆತ್ತದ ರೀತಿಯನ್ನು ತೋರಿಸುತ್ತದೆ.  ಹಾಗೆಯೇ ಆಧುನಿಕತೆ ಒಂದು ಸಮಾಜವನ್ನ ಬಲಿತೆಗೆದುಕೊಳ್ಳುವ ಆತಂಕ ವ್ಯಕ್ತವಾಗಿದೆ.  ‘ನಾಗಿ’ ಹೇಳುವಂತೆ ಬಸ್ಸು ಬಂದು ನಮ್ಮ ಊರು ಹಾಳಾಯ್ತು ಎಂಬ ಮಾತು ಇದಕ್ಕೆ ನಿದರ್ಶನವಾಗಿದೆ. ಹಾಗೆಯೇ ವರ್ಗ ಸಂಘರ್ಷ ಕೂಡ ಊರ ಗೌಡರಾದ ಚಂದ್ರಪ್ಪಗೌಡ (ಕೊಪ್ಪಳ) ಮತ್ತು ಶಿವಗಂಗಾ (ಹೊಸೂರು) ಇವರಿಬ್ಬರ ದ್ವೇಷಕ್ಕೆ ಅಮಾಯಕ ಹಳ್ಳಿಯ ಜನ ಸಾವನ್ನಪ್ಪುತ್ತಾರೆ. ಹಾಗೆ ಗೌಡರ ಪರವಾಗಿ ಹೋರಾಡಿ ಪ್ರಾಣ ತ್ಯಾಗ ಮಾಡುತ್ತಾರೆ. ಇದು ಅವರಿಗೆ ಅನಿವಾರ್ಯ ಹಾಗೂ ಅವರ ಅಸಹಾಯಕತೆಕ ಕೂಡ. ಇವರಿಬ್ಬರ ನಾನು-ತಾನು ಎನ್ನುವ ಹೋರಾಟದಲ್ಲಿ ಇಡಿ ಹಳ್ಳಿಯ ಬಣವೆಗಳಿಗೆ ಶಿವಗಂಗಾ, ಚನ್ನೂರ, ನೀಲಕಂಠ ಬೆಂಕಿ ಹಚ್ಚುತ್ತಾರೆ. ಇದು ಮನುಷ್ಯನ ಹೀನ ಕ್ರೌರ್ಯಕ್ಕೆ ಹಿಡಿದ ಕನ್ನಡಿ. ಹೊಸೂರಿನ ಬಸಕ್ಕ ಮತ್ತು ಕಮಲ ಇವರ ನೆಲೆಯಲ್ಲಿ ಈ ಚಿತ್ರವನ್ನು ವೀಕ್ಷಿಸುವಾಗ ಇಬ್ಬರ ಪರಿಸ್ತಿತಿಯಲ್ಲೂ ನೋವಿದೆ.

ಹೆಣ್ಣು-ಹೆಣ್ಣಿಗೆ ಶತ್ರು ಎಂಬುದನ್ನು ಬಿಂಬಿಸುತ್ತದೆ. ಆದರೂ ಇವರಿಬ್ಬರ ಈ ನೋವಿಗೆ ಕಾರಣನಾಗುವುದು ಚಂದ್ರಪ್ಪಗೌಡ ಎನ್ನುವುದನ್ನು ಗಮನಿಸಬೇಕು. ನೈತಿಕತೆ ಮತ್ತು ಅನೈತಿಕತೆಯ ಅರಿವೆ ಇಲ್ಲದ ಮುಗ್ಧ ತನ್ನ ಅತ್ತೆ ಕಮಲಳ ನೋವಿಗೆ ನೊಂದುಕೊಂಡರೂ ಬಸಕ್ಕನ ಜೊತೆಯಲ್ಲಿ ಕೂಡ ಯಾವುದೇ ಅನುಮಾನಗಳಿರದೇ ಕಾಲ ಕಳೆಯುತ್ತಾನೆ. ಹಾಗೆಯೇ ಕಮಲ ತನ್ನ ಗಂಡನನ್ನು ಪ್ರಶ್ನಿಸಲಾರದ ಪರಿಸ್ಥಿತಿಯಲ್ಲೂ ಅವನಿಗಾಗಿ ಪರಿತಪಿಸಿ ಅವನನ್ನು ತನ್ನವನಾಗಿಯೇ ಇರಿಸಲೂ ಮಾಟಮಂತ್ರದ ಪೂಜೆಯ ಮೊರೆಹೋಗುತ್ತಾಳೆ. ಹಾಗೆಯೇ ಅಲ್ಲಿನ ಸಾಂಸ್ಕೃತಿಕ ಹಬ್ಬ ಹಂಡೆಕಟ್ಟುವುದು(ಸಂಪ್ರದಾಯ). ಹೇಗೆ ದ್ವೇಷದ ಭಾಗವಾಗಿಬಿಡುತ್ತದೆ ಎಂಬುದಸನ್ನು ಗಮನಿಸಬಹುದು. ಮತ್ತು ಕಿಟ್ಟಿ ಕೆಲ ಜನರು ಹೇಳುವ ಹಾಳು ಕೂಗಿನ ಹಕ್ಕಿ ಕೂಗಿದರೆ ಓ ಎಂದರೆ ಸಾಯುತ್ತಿಯಾ ಎಂಬುದು ಕೊನೆಗೆ ಅವನನ್ನು ಆತನ ಅಪ್ಪ ಕರೆದಾಗಲೂ ಓ ಎನ್ನದ ಸ್ಥಿತಿಗೆ ತರುತ್ತದೆ.

‍ಲೇಖಕರು avadhi

10 February, 2014

5 Comments

  1. h a patil

    – ಕೃಷ್ಣ ಆಲನಹಳ್ಳಿ ಕಾಡು ಕಥೆ ಕುರಿತು ಬರೆದ ಬರಹ ಗಿರೀಶ ಕಾರ್ನಾಡ ನಿರ್ದೇಶನದ ಕಾಡು ಚಿತ್ರವನ್ನು ನೆನಪಿಸಿತು. ಅಮರೀಶಪುರಿ, ಲೋಕೇಶ, ನಂದಿನಿ ಭಕ್ತವತ್ಸಲ, ಉಮಾಶಿವಕುಮಾರ, ಸುಂದರರಾಜ್ ಮತ್ತು ಕಿಟ್ಟಿ ಪಾತ್ರಧಾರಿ ಇವರ ಆಭಿನಯ ಕಣ್ಮುಂದೆ ಸುಳಿದು ಹೋಯಿತು. ಆದರೆ ಮೂಲ ಕೃತಿ ಕಟ್ಟಿಕೊಡುವ ದಟ್ಟ ಅನುಭವವೇ ಬೇರೆ.

    • Anonymous

      thak you

  2. Anonymous

    Good 🙂

  3. prakasha dore

    Good articl 🙂

  4. Naveen

    Kaadu Cinema da bagge bareda review nijakku chitravanna kanna munde katti kodutte

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading