’ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು’ ಎಂದು ’ಸೈಜ್ ಗಲ್ಲು’ ಹೊತ್ತವರ ಪರವಾಗಿ ಧ್ವನಿಯೆತ್ತಿದ್ದ ಅಂದಕಾಲತ್ತಿಲೆ ದಲಿತ ಕವಿ ಸಿದ್ಧಲಿಂಗಯ್ಯ ಇಂದು ಶಿವಮೊಗ್ಗದಲ್ಲಿ ನಡೆಯುತ್ತಿರುವ ’ನಮ್ಮ ಅಭಿಮಾನ’ ಎಂಬ ಯಡಿಯೂರಪ್ಪನವರ ಸಾಧನೆಗಳ ಅಭಿನಂಧನಾ ಸಮಾರಂಭದಲ್ಲಿ ಅವರ ಬಾಯಿಯಿಂದ ಉದುರಿದ ಶಬ್ದಗಳಿವು;
’ನಾನು ರಾಜಕಾರಣಿಯಾಗಿ ಇಲ್ಲಿಗೆ ಬಂದಿಲ್ಲ.ಯಡಿಯೂರಪ್ಪನವರ ಲಕ್ಷಾಂತರ ಅಭಿಮಾನಿಗಳಲ್ಲಿ ಒಬ್ಬನಾಗಿ ಬಂದಿದ್ದೇನೆ. ಪುಸ್ತಕ ಲೋಕದ ಪರವಾಗಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ’
ಪುಸ್ತಕಲೋಕವನ್ನು ಪ್ರೀತಿಸುವವಳು ನಾನು. ಹಾಗಾಗಿ ನಾನು ಅಲ್ಲಿಗೆ ಸೇರಿದವಳು. ನನ್ನನ್ನು ಪ್ರತಿನಿಧಿಸುವ ಅಧಿಕಾರವನ್ನು ನಾನು ಸಿದ್ಧಲಿಂಗಯ್ಯನವರಿಗೆ ಕೊಟ್ಟಿಲ್ಲ. ಇದನ್ನು ವಿನಯಪೂರ್ವಕವಾಗಿ ಅವರ ಗಮನಕ್ಕೆ ತರುತ್ತಿದ್ದೇನೆ
-ಉಷಾ ಕಟ್ಟೆಮನೆ ]]>
ನನ್ನನ್ನು ಪ್ರತಿನಿಧಿಸುವ ಅಧಿಕಾರವನ್ನು ಸಿದ್ಧಲಿಂಗಯ್ಯನವರಿಗೆ ಕೊಟ್ಟಿಲ್ಲ..
ನಿಮಗೆ ಇವೂ ಇಷ್ಟವಾಗಬಹುದು…





ಇಕ್ರಲಾ ಒದೀರ್ಲಾ!
ಉಷಾ,
ತಮ್ಮ ಮಾತಿಗೆ ನನ್ನ ಸಹಮತವಿದೆ.
ಬೌದ್ಧಿಕ ದಿವಾಳಿತನ ಅಂದರೆ ಇದು.
ಓರ್ವ ವ್ಯಕ್ತಿ ಮುಖವಾಡ ಹೊತ್ತು ಎಷ್ಟೇ ವರುಷ ನಾಟಕ ಆಡಿದರೂ, ಒಂದಲ್ಲ ಒಂದು ದಿನ ಆತನ ನಿಜಬಣ್ಣ ಜನತೆಗೆ ತಿಳಿಯದೇ ಇರುವುದಿಲ್ಲ ಎನ್ನುವುದಕ್ಕೆ ಇದು ಸಾಕ್ಷಿ.
ಪುಸ್ತಕ ಲೋಕದ ಪರವಾಗಿ ಅಂದರೆ ಏನು? ಪುಸ್ತಕ ಪ್ರಾಧಿಕಾರದ ಗದ್ದುಗೆ ಏರಿರುವುದು ಪುಸ್ತಕ ಲೋಕದ ಪರವಾಗಿ ರಾಜಕಾರಣಿಗಳ ಚಮಚಾಗಿರಿ ಮಾಡುವುದಕ್ಕೋ. ನಾಚಿಕೆಗೇಡು.
ನಿಜಕ್ಕೂ ನಾಚಿಕೆಗೇಡು.
usha …idu nanna dhwani kooda
ಹ್ಯಾಗಿದೆ ಅಂದ್ರೆ….ವೇದಿಕೆ ಸಿಕ್ತಿ ಅಂತ ಹೋಗಿ…ಎಲ್ಲರನ್ನೂ ಪ್ರತಿನಿಧಿಸೋ ಹಕ್ಕು ಅವರಿಗಿಲ್ಲ…ಇದು ನಿಜ…
ಏನೋ ಹೇಳಕ್ಕೆ ಹೋಗಿ ಬೇರೆ ಕಡೆ ಗಾಡಿ ತಿರುಗಿಸಿಬಿಟ್ರಲ್ಲಾ ಸಾರ್..
oppuvantaha maatu………..olley pratikriye
ಉಷಾ ಅವರೇ ನಿಮಗೆ ನನ್ನ ಬೆಂಬಲವಿದೆ… ಮನೋದೌರ್ಬಲ್ಯಕ್ಕೂ ಒಂದು ಮಿತಿ ಇರಬೇಕು…
lakshantara abhimaanigalli obbaraguvudakke yestu kaanike sandideyo?
He is eying some other plum post. So he is running after Yeddi.
ಯಾರಿಗೇ ಬಂತು ಎಲ್ಲಿಗೇ ಬಂತು 47 ರ ಸ್ವಾತಂತ್ರ್ಯ !!! ಆಹಾ ಸಿದ್ದಲಿಂಗಯ್ಯನವರಿಗೆ ಶಿವಮೊಗ್ಗಾ ದಲ್ಲಿ ಸಿಕ್ಕೆ ಬಿಡ್ತಲ್ಲಾ 47 ರ ಸ್ವಾತಂತ್ರ್ಯ !!! ಅದೂ ಯೆಡ್ಯೂರಪ್ಪನವರ ಕಾಲ ಬಳಿ !!! ಜೈ ಭೀಮ್ !!!!!
How low people can stoop, disgusting.
ಸಿದ್ಧಲಿಂಗಯ್ಯನವರ ಬಗ್ಗೆ ಇನ್ನೂ ವಿಶ್ವಾಸ ಇಟ್ಟುಕೊಂಡಿರಲಾದೀತೇ ? ಇದು ಸಿದ್ಧಲಿಂಗಯ್ಯನವರ ವ್ಯಕ್ತಿಗತ ನ್ಯೂನತೆಯಲ್ಲ. ದಲಿತ ಚಳುವಳಿಯನ್ನು ಕಾಡುತ್ತಿರುವ ಗಂಭೀರ ಪಿಡುಗು. ಹೋರಾಟದ ಸಾಗರಕ್ಕೆ ಸೇರಿದ ಸಾವಿರಾರು ನದಿಗಳಲ್ಲಿನ ಅಂತರ್ಜಲ ಬತ್ತಿಹೋಗಿಲ್ಲ. ಆದರೆ ನದಿಯ ನೀರು ಕಲುಷಿತವಾಗಿದೆ. ಮಲಿನವಾಗಿದೆ. ಈ ಮಲಿನ ನೀರಿನಲ್ಲಿ ಮುಳುಗಿ ಎದ್ದು ಈಜಿ, ತೇಲಿ ಹೊರಬಂದ ದಲಿತ ಮುಖಂಡರ ಒಂದು ಆಯಾಮವನ್ನು ಸಿದ್ಧಲಿಂಗಯ್ಯ ಪ್ರತಿನಿಧಿಸಿದ್ದಾರೆ. ಅವರು ಪ್ರತಿನಿಧಿಸಿರುವುದು ಪುಸ್ತಕ ಲೋಕವನ್ನಲ್ಲ, ಸೈದ್ಧಾಂತಿಕ ದೀವಾಳಿಕೋರರ ಲೋಕವನ್ನು. ಇಕ್ರಲಾ ವದೀರ್ಲಾ ಎಂಬ ಘೋಷಣಾ ವಾಕ್ಯಗಳಿಗೆ ಇಂದಿಗೂ ಮಾನ್ಯತೆ ಇದೆ ಆದರೆ ಇಕ್ಕಿಸಿಕೊಳ್ಳಬೇಕಾದವರು ಯಾರು ಎಂಬುದೇ ಜಿಜ್ಞಾಸೆ,
ನಾ ದಿವಾಕರ
ಇಕ್ಕಬೇಕಾದವರು ಯಾರು ಎಂಬ ಪ್ರಶ್ನೆಯೂ ಇದೆ. ನಮಗಿಂತ ಬಡಪಾಯಿಗಳು ಯಾರಾದರೂ ಸಿಕ್ಕಿದರೆ ಇಕ್ಕಲೂ ಬಹುದು; ಒದಿಯಲೂ ಬಹುದು. ಅದನ್ನು ಮಾಡಿ ದಕ್ಕಿಸಿಕೊಳ್ಳಲೂ ಬಹುದು. ಇಕ್ಕಿಸಿಕೊಳ್ಳಬೇಕಾದವರು ನಮಗಿಂತ ಗಟ್ಟಿ ಇದ್ದರೆ ಇಕ್ಕುವುದೆಂತು? ಒದಿಯುವುದೆಂತು?
ಯಾವ ಕಾಲಕ್ಕೂ “ಇಕ್ಕುವ ಒದಿಯುವ” ನಿಲುವು ಸಲ್ಲಲಾರದು. ಅದು ನೇತ್ಯಾತ್ಮಕ ನಿಲುವು.
ಉಷಾ ಅವರೇ,
ನೀವು ಸಿದ್ಧಲಿಂಗಯ್ಯನವರ “ಪುಸ್ತಕ ಲೋಕದ ಪರವಾಗಿ” ಎಂಬ ಶಬ್ದಗಳ ಬಗ್ಗೆ ಆಕ್ಷೇಪ ಎತ್ತಿದ್ದೀರಿ. ಇದು ಸರಿಯೇ, ಏಕೆಂದರೆ, ಇದು ನಿಮ್ಮ ವೈಯಕ್ತಿಕ ಅಭಿಪ್ರಾಯಕ್ಕೆ ವಿರುದ್ಧವಾಗಿದ್ದಿರಬಹುದು, ಹಾಗೂ ಸಿದ್ದಲಿಂಗಯ್ಯನವರಿಗೆ ಹಾಗೆ ಹೇಳುವ ಹಕ್ಕಿಲ್ಲದಿರಬಹುದು.
ಆದರೆ ಇದಕ್ಕೆ ಪ್ರತಿಕ್ರಿಯೆ ಬರೆದಿರುವ ಬುಡ್ಡಿಜೀವಿಗಳ ಅಭಿಪ್ರಾಯದಲ್ಲಿ ಸಿದ್ದಲಿಂಗಯ್ಯನವರು ಯಡ್ಡ್ಯೂರಪ್ಪನವರ ಕಾರ್ಯಕ್ರಮಕ್ಕೆ ಹೋಗಿದ್ದೇ ತಪ್ಪು. ಇದು ಒಪ್ಪತಕ್ಕ ವಿ್ಷಯವೇ? ಎಲ್ಲರಿಗೂ ಅವರಿಗೆ ಸರಿಯೆನಿಸಿದ ವ್ಯಕ್ತಿಗಳ ಹಾಗೂ ಸಂಘದವರ ಜೊತೆಗೆ ಗುರುತಿಸಿಕೊಳ್ಳುವ ಅಧಿಕಾರವಿದೆ. ಸಿದ್ದಲಿಂಗಯ್ಯನವರು ಇದನ್ನೇ ಬಹಿರಂಗವಾಗಿ ಮಾಡಿದ್ದಾರೆ. ಇತರೆ ಕೆಲವು ಬುಡ್ಡಿಜೀವಿಗಳು ಒಳಗೊಳಗೇ ಅಕಾಡೆಮಿ/ನಿಗಮಗಳ ಅಧ್ಯಕ್ಷತೆಗಾಗಿಯೋ ಬೇರೆ ಲಾಭಗಳಿಗಾಗಿಯೋ ತತ್ವ ಸಿದ್ದಾಂತ ಬಿಟ್ಟು ಲಾಬಿ ನಡೆಸುತ್ತಾರೆ, ಆದರೆ ಹೊರಗೆ ಮಾತ್ರ ಭಾರೀ ನೇರವಂತರಂತೆ ಮಾತನಾಡುತ್ತಾರೆ. ಆದರೆ ಸಿದ್ದಲಿಂಗಯ್ಯನವರು ಪ್ರಸಕ್ತ ಅಧಿಕಾರದಲ್ಲಿ ಇಲ್ಲದ ಯಡ್ಡ್ಯೂರಪ್ಪನವರೊಂದಿಗೆ ಗುರುತಿಸಿಕೊಂಡಿರುವುದನ್ನು ನೋಡಿದಲ್ಲಿ ಅವರು ನಿಜವಾಗಿಯೂ ಬೆಂಬಲಿಗರಂತೆ ಗೋಚರಿಸುತ್ತಿದ್ದಾರೆ. ಅಲ್ಲವೇ?
ನಿರಂಜನ
ನಿರಂಜನ ಅವರೇ,
ಇಲ್ಲಿ ವ್ಯಕ್ತಿಗತ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಯಾರೂ ಪ್ರಶ್ನಿಸುತ್ತಿಲ್ಲ. ಸಿದ್ಧಲಿಂಗಯ್ಯನವರಿಗೆ ಆರೆಸ್ಸೆಸ್ ಸೇರಲೂ ಅಷ್ಟೇ ಹಕ್ಕಿದೆ. ಬಿಜೆಪಿ ಶಾಸಕರಾಗಲೂ ಹಕ್ಕಿದೆ. ಆದರೆ ಒಂದು ಗಮನಿಸಿ, ಸಿದ್ಧಲಿಂಗಯ್ಯನವರನ್ನು ಕರ್ನಾಟಕದ ಪ್ರಜ್ಞಾವಂತ ಜನತೆ,ಅಥವಾ ನಿಮ್ಮ ಮಾತುಗಳಲ್ಲಿ ಬುದ್ಧಿಜೀವಿಗಳು,ಒಂದು ಸಮುದಾಯದ ರಾಜಕೀಯ ಪ್ರಜ್ಞೆಯಾಗಿಯೇ ಕಾಣುತ್ತಾ ಬಂದಿದ್ದಾರೆ. ಸಿದ್ಧಲಿಂಗಯ್ಯನವರು ದಲಿತ ಚಳುವಳಿಯ ಸಂದರ್ಭದಲ್ಲಿ ಹೊರಸೂಸಿದ ಕ್ರಾಂತಿಯ ಕಿಡಿಗಳಿಗೂ ಯಡಿಯೂರಪ್ಪ ಪ್ರತಿನಿಧಿಸುವ ಮೂಲಭೂತವಾದಿ, ಪ್ರತಿಗಾಮಿ ಧೋರಣೆಗೂ ಅಜಗಜಾಂತರ. ಹಾಗಾಗಿ ಎರಡು ವಿಭಿನ್ನ ಧೋರಣೆಗಳು ಒಂದೇ ವೇದಿಕೆಯ ಮೇಲೆ ಅಪ್ಪಿಕೊಂಡು ನಿಂತಾಗ ಅಭಾಸವಾಗುತ್ತದೆ. ನಮ್ಮ ಲೇಖನಿಯಿಂದ ಹೊರಸೂಸುವ ಸಿದ್ಧಾಂತಗಳಿಗೆ,ತತ್ವಗಳಿಗೆ ವ್ಯತಿರಿಕ್ತವಾಗಿ ನಾವು ನಡೆದುಕೊಂಡಾಗ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಿಂತಲೂ ಹೆಚ್ಚು ಪ್ರಶ್ನೆಗೊಳಗಾಗುವುದು ಸೈದ್ಧಾಂತಿಕ ನಿಲುವು ಮತ್ತು ತಾತ್ವಿಕ ಧೋರಣೆಗಳು. ಸಿದ್ಧಲಿಂಗಯ್ಯನವರ ಹೇಳಿಕೆ ಪ್ರಶ್ನಾತೀತವಲ್ಲ.
ನಾ ದಿವಾಕರ
ಸಿದ್ದಲಿಂಗಯ್ಯ ತಾವು ಹಂಪಿ ವಿವಿಯ ಉಪಕುಲಪತಿ ಗಾದಿಗೇರಲು ಇದನ್ನು ಬಿಟ್ಟರೆ ಬೇರೇನು ಮಾಡಲು ಸಾಧ್ಯ?
ಯಡ್ಯೂರಿ ಅಧಿಕಾರಕ್ಕ ಬರದೆ ಹೋಗಿದ್ದರೆ ನೀಚರು ಯಾರು ಬೆಳಕಿಗೆ ಬರತಿರಲಿಲ್ಲಾ ಅನಿಸುತ್ತೆ. ಅವನ ಸಹವಾಸದಲ್ಲಿ ಈ ರಾಜ್ಯ ಕೊಳ್ಳೆ ಹೊಡೆದವರು, ಭ್ರಷ್ಟರು, ಗೋಸುಂಬೆಗಳು, ಅಧಿಕಾರದ ಮದ ಏರಿಸ್ಕಂಡವರು,ಬೋಗಸ್ ರಾಜಕಾರಣಿಗಳು, ಗಣಿಧಣಿಗಳು, ಮಠಾಧೀಶರು ಎಲ್ಲರ ಯೋಗ್ಯತೆ ಏನಂತ ಗೊತ್ತಾಗಿದ್ದು.ಹಾಗಾಗಿ ಸಿದ್ದಲಿಂಗಯ್ಯನವರ ಪುಸ್ತಕ ಲೋಕ ಅಭಿನಂದನೆ ಹೇಳಿದೆ ಅಂತ ಯಾಕ ಭಾವಿಸಬಾರದು…. ಅಂದ್ರೆ ಅವರ ಕಿಚ್ಚಿನ ಪುಸ್ತಕ ಲೋಕದ ಸ್ವಾಮ್ಯ ಹೋರಾಟದ್ದಾಗಿರುವುದರಿಂದ ಅವರ ಪುಸ್ತಕ ಲೋಕ ಯಾವದೋ ಬೇರೆ ಇರಬಹುದು ಅದು ನಮ್ಮ ನಿಮ್ಮ ಪುಸ್ತಕ ಲೋಕವಂತು ಖಂಡಿತ ಅಲ್ಲಬಿಡಿ.
ನಾ ದಿವಾಕರರೇ,
ಯಡ್ಡ್ಯೂರಪ್ಪನವರದ್ದು ಮೂಲಭೂತವಾದಿ, ಪ್ರತಿಗಾಮಿ ಧೋರಣೆಯಾಗಿರುವುದೇ ಹೌದಾದಲ್ಲಿ, ಕರ್ನಾಟಕದಲ್ಲಿ ಕಳೆದ ಮೂವತ್ತು ವರ್ಷಗಳಲ್ಲಿ ಅಧಿಕಾರ ಚಲಾಯಿಸಿದ ತಲೆ ಸರಿಯಾಗಿ ಇರುವ ರಾಜಕಾರಣಿಗಳನ್ನು ಹೆಸರಿಸಬಲ್ಲಿರಾ? ಸಿದ್ಧಲಿಂಗಯ್ಯನವರು ವಯೋಸಹಜವಾಗಿ ರಾಜಕೀಯ ಅಭಿಪ್ರಾಯಗಳನ್ನು ಬದಲಾಯಿಸಿರಬಹುದಲ್ಲವೇ? ರಾಜಕಾರಣಿಗಳಿಂದಾಗಿ ನಮ್ಮ ಜೀವನ ಉತ್ತಮವಾಗಿರುವುದು ಎಲ್ಲಾದರೂ ಕಂಡಿದ್ದೀರಾ? ಹಾಗಿದ್ದಲ್ಲಿ ಯಡ್ಡ್ಯೂರಪ್ಪನವರನ್ನೇ ಟಾರ್ಗೆಟ್ ಮಾಡುತ್ತಿರುವ ಬುಡ್ಡಿಜೀವಿಗಳನ್ನು ಕಂಡು ನಗುವುದೋ ಅಳುವುದೋ ಗೊತ್ತಾಗದು. ಜಾತಿವಾದ ಯಡ್ಡ್ಯೂರಪ್ಪನವರಿಂದ ಪ್ರಾರಂಭವಾಯಿತೇ ಇಲ್ಲ ದೇವೇಗೌಡರಷ್ಟೇ ಪುರಾತನವಾದ ವಿದ್ಯಮಾನವೇ? ಸಾಚಾರ್ ವರದಿ, ಮಿಶ್ರಾ ವರದಿಗಳು ಮೂಲಭೂತವಾದದ ಇನ್ನೊಂದು ರೂಪ ಏಕಾಗುವುದಿಲ್ಲ? ಪ್ರಗತಿಪರರೆಂದು ಬಿಂಬಿಸಿಕೊಳ್ಳುವ ಭರದಲ್ಲಿ, ಹೀಗಿಲ್ಲಾ ಅಡ್ಡಾದಿಡ್ಡಿ ಮಾತನಾಡುವುದು ತರವಲ್ಲ.
ನಿರಂಜನ್